ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಮಾ.25ರಂದು ದಿಢೀರನೆ 21 ದಿನಗಳ ಲಾಕ್​ಡೌನ್​ ಘೋಷಿಸಿದರು. ರೈಲು, ಬಸ್​ ಸಂಚಾರ ರದ್ದುಗೊಳಿಸಿದ್ದಲ್ಲದೆ, ಒಂದೂರಿನಿಂದ ಮತ್ತೊಂದು ಊರಿಗೆ ಹೋಗಲೂ ನಿರ್ಬಂಧ ಹೇರಿದರು. ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಕಚೇರಿಗಳನ್ನೂ ಬಂದ್​ ಮಾಡಿದರು. ಆದರೂ ಲಾಕ್​ಡೌನ್​ನ ಯಶಸ್ಸು ಎಷ್ಟು ಗೊತ್ತಾ?
ಕೇವಲ ಶೇ.77. ಕರೊನಾ ವೈರಸ್​ ಸೋಂಕು ಹೆಚ್ಚಾಗಿದ್ದು, ಲಾಕ್​ಡೌನ್​ ಘೋಷಿಸಿರುವ ವಿಶ್ವದ 131 ರಾಷ್ಟ್ರಗಳಲ್ಲಿನ ಪರಿಸ್ಥಿತಿ ಕುರಿತು ಅವಲೋಕನ ನಡೆಸಿದೆ. ವಿಶೇಷವಾಗಿ ಫೆ.16ರಿಂದ ಆರಂಭಿಸಿ ಮಾ.29ರವರೆಗೆ ದಿನಸಿ ಅಂಗಡಿಗಳಲ್ಲಿನ ಖರೀದಿ, ಮನರಂಜನಾ ಕೇಂದ್ರಗಳ ಭೇಟಿ, ಬಸ್ಸು, ರೈಲು ಸಂಚಾರ ಮತ್ತು ಕಚೇರಿಗಳಿಗೆ ಹೋಗಿಬರುವ ಮಾಹಿತಿ, ವಾಹನಸಂಚಾರ ಮಾಹಿತಿಗಳನ್ನು ಆಧರಿಸಿ ಗೂಗಲ್​ ಈ ಅವಲೋಕನೆ ನಡೆಸಿದೆ.
ಭಾರತದಲ್ಲಿ ಸಂಪೂರ್ಣ ಲಾಕ್​ಡೌನ್​ ಘೋಷಿಸಿದ್ದರೂ ಜನರು ದಿನಬಳಕೆಯ ವಸ್ತುಗಳ ಖರೀದಿಗಾಗಿ ದಿನಸಿ ಅಂಗಡಿಗಳಿಗೆ ಹೋಗುತ್ತಿದ್ದಾರೆ. ಆದರೆ, ಸಿನಿಮಾ, ಪಾರ್ಕ್​ ಸೇರಿ ವಿವಿಧ ಮನರಂಜನಾ ಕೇಂದ್ರಗಳಿಗೆ ಹೋಗುವುದು ಕಡಿಮೆಯಾಗಿದೆ. ಇದರಿಂದಾಗಿ ಲಾಕ್​ಡೌನ್​ನ ಯಶಸ್ಸು ಶೇ.77 ಎಂದು ಗೂಗಲ್​ ಸಂಸ್ಥೆ ಹೇಳಿದೆ.
ಸೋಂಕು ಮತ್ತು ಸಾವಿನಲ್ಲಿ ದಾಖಲೆ ನಿರ್ಮಿಸುತ್ತಿರುವ ಇಟಲಿ ಮತ್ತು ಸ್ಪೇನ್​ಗಳಲ್ಲಿ ಈ ಪ್ರಮಾಣ ಶೇ.94 ಇದೆ. ಬ್ರಿಟನ್​, ಫ್ರಾನ್ಸ್​ ಮತ್ತು ಫಿಲಿಪ್ಪೀನ್ಸ್​ನಲ್ಲಿ ಈ ಪ್ರಮಾಣ ಶೇ.80 ಆಗಿದೆ.
ಲಕ್ಷಾಂತರ ಮಂದಿ ಸೋಂಕಿನಿಂದ ಬಳಲುತ್ತಿದ್ದರೂ ಅಮೆರಿಕದ ಜನತೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಇಲ್ಲಿ ಇನ್ನೂ ಶೇ.50 ಜನರು ತೀವ್ರ ನಿರ್ಲಕ್ಷ್ಯದಿಂದ ಎಲ್ಲೆಂದರಲ್ಲಿ ಓಡಾಡಿಕೊಂಡಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ವಾತಾವರಣ ಹಿತಕರವಾಗಿದೆ ಎಂದು ಸಮುದ್ರ ತಟಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದ ಆಸ್ಟ್ರೇಲಿಯಾದಲ್ಲಿ ಇದೀಗ ಅಂಥ ತಾಣಗಳಿಗೆ ಹೋಗುವವರ ಸಂಖ್ಯೆ ಶೇ.50 ಕ್ಷೀಣಿಸಿದೆ.
ಜಪಾನ್​ ಮತ್ತು ಸ್ವೀಡನ್​ನಲ್ಲೂ ಕರೊನಾ ವೈರಸ್​ ಸೋಂಕಿನ ಹಾವಳಿ ಇದ್ದರೂ, ಅಲ್ಲಿ ಲಾಕ್​ಡೌನ್​ನಂಥ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿಲ್ಲ. ಆದರೂ, ದಿನಸಿ ಖರೀದಿ, ಮನರಂಜನಾ ಕೇಂದ್ರಗಳ ಭೇಟಿ ಶೇ.25 ಕಡಿಮೆಯಾಗಿದೆ ಎಂದು ಗೂಗಲ್​ ತಿಳಿಸಿದೆ.
ದಕ್ಷಿಣ ಕೊರಿಯಾ ಸೋಂಕು ತಡೆಗಟ್ಟಲು ಕಟ್ಟುನಿಟ್ಟಿನ ನಿಗಾ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕ್ರಮಗಳನ್ನು ಜಾರಿಗೊಳಿಸಿತ್ತು. ಇದರಿಂದಾಗಿ ಅಲ್ಲಿ ಕರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ದಿನಸಿ ಖರೀದಿ ಮತ್ತು ಮನರಂಜನಾ ಕೇಂದ್ರಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಶೇ.19 ಕಡಿಮೆಯಾಗಿದೆ.
ನರ್ಸ್​ಗಳ ಜತೆ ಅಸಭ್ಯವಾಗಿ ವರ್ತಿಸಿದ್ದ ತಬ್ಲಿಘಿ ಜಮಾತ್​ನ 6 ಸದಸ್ಯರು ಬೇರೆ ಆಸ್ಪತ್ರೆಗೆ ಶಿಫ್ಟ್​, ದೂರು ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + six =
Remember me
