ನವದೆಹಲಿ:ಕರೊನಾ ಸಂಕಷ್ಟದಿಂದ ವಿಶ್ವವೇ ತತ್ತರಿಸುತ್ತಿದೆ. ಜಗತ್ತಿನ ದೊಡ್ಡಣ್ಣ ಎನಿಸಿರುವ ಅಮೆರಿಕ ಮಾತ್ರೆಗಳಿಗಾಗಿ ಭಾರತವನ್ನು ಯಾಚಿಸುವಂತಾಯಿತು. ಹೃದಯ ವೈಶಾಲ್ಯತೆ ಮೆರೆದ ಪ್ರಧಾನಿ ಮೋದಿ ‘ನಾವೆಲ್ಲ ಒಟ್ಟಾಗಿ ಕರೊನಾ ವಿರುದ್ಧ ಸಮರ ಜಯಿಸೋಣ’ ಎಂಬ ಸಂದೇಶದೊಂದಿಗೆ ವೈದ್ಯಕೀಯ ನೆರವು ನೀಡಿದ್ದಾರೆ.
ಭಾರತ ಇಂಥ ನೆರವು ನೀಡುತ್ತಿರುವುದು ಅಮೆರಿಕಕ್ಕೆ ಅಷ್ಟೇ ಅಲ್ಲ. ಬ್ರೆಜಿಲ್​ಗೂ ಸಹಾಯದ ಹಸ್ತ ಚಾಚಿದೆ. ಆ ಮೂಲಕ ವೈದ್ಯಕೀಯ ರಾಯಭಾರತ್ವ ನಡೆಸಿದೆ. ಇದಲ್ಲದೇ ಹಲವು ರಾಷ್ಟ್ರಗಳಿಗೆ ಜೀವರಕ್ಷಕ ಔಷಧಗಳನ್ನು ಕಳುಹಿಸಿಕೊಟ್ಟಿದೆ ಎಂದು ಹಿರಿಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಭೂತಾನ್​, ಬಾಂಗ್ಲಾದೇಶ, ಅಫ್ಘಾನಿಸ್ತಾನ್​, ನೇಪಾಳ, ಮಯನ್ಮಾರ್​, ಶಿಶೇಲ್ಸ್​, ಮಾರಿಷಸ್​ ಹಾಗೂ ಆಫ್ರಿಕಾ ಖಂಡದ ಕೆಲ ರಾಷ್ಟ್ರಗಳಿಗೂ ಭಾರತ ವೈದ್ಯಕಿಯ ನೆರವನ್ನು ಕಳುಹಿಸಿಕೊಡುತ್ತಿದೆ. ಮಂಗಳವಾರ ಏರ್​ ಇಂಡಿಯಾ ವಿಮಾನದಲ್ಲಿ 10 ಟನ್​ಗಳಷ್ಟು ಔಷಧಗಳನ್ನು ಶ್ರೀಲಂಕಾಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಔಷಧ ರಫ್ತಿಗೆ ಅವಕಾಶ:ನೆರೆಯ ರಾಷ್ಟ್ರಗಲಳಿಗೆ ನೆರವಿನ ರೂಪದಲ್ಲಿ ಔಷಧಗಳನ್ನು ನೀಡಿದರೂ, ಇನ್ನು ಹಲವು ರಾಷ್ಟ್ರಗಳಿಗೆ ಔಷಧಗಳನ್ನು ರಫ್ತು ಮಾಡಲು ಔಷಧ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದರಂತೆ, ಅಮೆರಿಕ, ಸ್ಪೇನ್​, ಬ್ರೆಜಿಲ್​, ಬಹ್ರೇನ್​, ಜರ್ಮನಿ ಹಾಗೂ ಬ್ರಿಟನ್​ಗೆ ಪ್ಯಾರಾಸಿಟಮಾಲ್​ ಮಾಗೂ ಹೈಡ್ರೋಕ್ಸಿಕ್ಲೊರೊಕ್ವಿನ್​ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲು ಭಾರತೀಯ ಕಂಪನಿಗಳಿಗೆ ಸರ್ಕಾರ ಅನುಮತಿ ನೀಡಿದೆ.
ಇದಲ್ಲದೇ, ಕೊಲ್ಲಿ ರಾಷ್ಟ್ರಗಳಿಗೆ ಬೇಕಾಗುವ ಔಷಧದ ಪ್ರಮಾಣದ ಬಗ್ಗೆಯೂ ಭಾರತ ನಿಗಾ ವಹಿಸಿದೆ. ಜತೆಗೆ ರಷ್ಯಾಗೂ ಈ ಜೀವರಕ್ಷಕ ವಕ್ಷಧಗಳು ಬೇಕೆ ಎಂಬ ಬಗ್ಗೆಯೂ ಭಾರತ ಮಾತುಕತೆ ನಡೆಸಿದೆ.
ಈ ನಡುವೆ, ಭಾರತ ವೈದ್ಯಕೀಯ ಉಕರಣಗಳನ್ನು ಬೀಜಿಂಗ್​ನ ಖಾಸಗಿ ಉತ್ಪಾದಕರಿಂದ ಖರೀದಿಸಲು ಮುಂದಾಗಿದೆ. ಏಕೆಂದರೆ, ಸದ್ಯ ಚೀನಾದಲ್ಲಿ ಮಾತ್ರ ಹೆಚ್ಚುವರಿ ವೈದ್ಯಕೀಯ ಸಲಕರಣೆಗಳ ಸಂಗ್ರಹವಿದೆ.(ಏಜೆನ್ಸೀಸ್​)
ನನ್ನನ್ನು ಮುಟ್ಟಿದ್ರೆ ಕರೊನಾ ಬರುತ್ತದೆ ಎಂದು ಪೊಲೀಸರನ್ನು ಬೆದರಿಸಿ ಪರಾರಿಯಾಗಿದ್ದ ಯುವಕರ ಬಂಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − eleven =
Remember me
