ನವದೆಹಲಿ:ಏಪ್ರಿಲ್ 2024ರ ಏಪ್ರಿಲ್​ನಲ್ಲಿ ಭಾರತದ ಸರಕು ರಫ್ತುಗಳು 34.99 ಶತಕೋಟಿ ಡಾಲರ್​ಗೆ (2,92,189 ಕೋಟಿ ರೂಪಾಯಿ) ಏರಿಕೆಯಾಗಿದೆ.
ಹಿಂದಿನ ವರ್ಷದ ಏಪ್ರಿಲ್​ ತಿಂಗಳಿನಲ್ಲಿ ಈ ಮೊತ್ತ 34.62 ಶತಕೋಟಿ ಡಾಲರ್​ ಇತ್ತು ಎಂದು ಬುಧವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳು ಬಹಿರಂಗಪಡಿಸಿವೆ.
ಆಮದು ಕೂಡ 2024ರ ಏಪ್ರಿಲ್​ನಲ್ಲಿ 54.09 ಶತಕೋಟಿ ಡಾಲರ್​ಗೆ ಏರಿಕೆಯಾಗಿದೆ. 2023ರ ಏಪ್ರಿಲ್​ ತಿಂಗಳಲ್ಲಿ ಈ ಮೊತ್ತ 49.06 ಶತಕೋಟಿ ಡಾಲರ್ ಇತ್ತು.
ವ್ಯಾಪಾರ ಕೊರತೆ ಅಂದರೆ, ಆಮದು ಮತ್ತು ರಫ್ತಿನ ನಡುವಿನ ಅಂತರವು ಈ ತಿಂಗಳಲ್ಲಿ 19.1 ಶತಕೋಟಿ ಡಾಲರ್​ ಇತ್ತು.
ಮಾಧ್ಯಮಗಳ ಜತೆ ಈ ಅಂಕಿ-ಅಂಶಗಳನ್ನು ಹಂಚಿಕೊಂಡ ವಾಣಿಜ್ಯ ಕಾರ್ಯದರ್ಶಿ ಸುನೀಲ್ ಬರ್ತ್ವಾಲ್ ಅವರು, ಹೊಸ ಆರ್ಥಿಕ ವರ್ಷವು ಉತ್ತಮ ರೀತಿಯಲ್ಲಿ ಪ್ರಾರಂಭವಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಇದು ಮುಂದುವರಿಯುತ್ತದೆ ಎಂದು ಆಶಿಸಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 5 =
Remember me
