ಬೆಂಗಳೂರು:ಕರ್ನಾಟಕದ ಪ್ರತಿಯೊಂದು ಜಿಲ್ಲೆಗೆ ಹೋದಾಗಲೂ ಒಂದೊಂದು ಆಹಾರ ವಿಶೇಷತೆಗಳಿಂದ ಹೆಸರು ವಾಸಿಯಾಗಿರುತ್ತವೆ. ಕೆಲವು ಆಹಾರ ಪದಾರ್ಥಗಳು ತಮ್ಮ ಸುವಾಸನೆಯನ್ನು ನಾಡಿನ ಆಚೆಗೆ ದಾಟಿಸಿ ದೇಶ, ವಿದೇಶಗಳಲ್ಲಿಯೂ ಸಹ ಅದರ ಕಂಪನ್ನು ಪಸರಿಸುತ್ತದೆ.
ಅಂತಹ ಖಾದ್ಯಗಳ ಪೈಕಿ ಮೈಸೂರು ಪಾಕ್​ ಹೆಸರುವಾಸಿಯಾಗಿದ್ದು, ತನ್ನ ಹೆಸರಿನಲ್ಲಿಯೇ ಮೈಸೂರನ್ನು ಪ್ರತಿನಿಧಿಸುತ್ತದೆ. ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಮೈಸೂರ್​ ಪಾಕ್​ ಇದೀಗ ವಿಶ್ವ ಸ್ಟ್ರೀಟ್​ ಫುಡ್​ನಲ್ಲಿ 14ನೇ ಸ್ಥಾನ ಪಡೆದುಕೊಂಡಿರುವುದು ಮತ್ತಷ್ಟು ವಿಶೇಷವೆನಿಸಿದೆ.
ಆನ್​ಲೈನ್​ ಟೂರ್​ ಗೈಡ್​ ಟೇಸ್ಟ್​ ಅಟ್ಲಾಸ್​ ಇತ್ತೀಚಿಗೆ ಬಿಡುಗಡೆ ಮಾಡಿದ 50 Best Street Food Sweets in the World ಪಟ್ಟಿಯಲ್ಲಿ ಭಾರತದ ಮೂರು ಖಾದ್ಯಗಳು ಸ್ಥಾನ ಪಡೆದಿದೆ. ಮೈಸೂರು ಪಾಕ್​ 14ನೇ ಸ್ಥಾನದಲ್ಲಿದ್ದರೆ. ಕುಲ್ಫಿ 18ನೇ ಸ್ಥಾನ ಹಾಗೂ ಕುಲ್ಫಿ ಫಲೂದ 32ನೇ ಸ್ಥಾನದಲ್ಲಿರುವ ಭಾರತದ ಆಹಾರ ಖಾದ್ಯಗಳು.
ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ್ದ ಈ ಸಿಹಿ ತಿನಿಸು ವಿಶ್ವದಾದ್ಯಂತ ಮನೆ ಮಾತಾಗಿದೆ. ಮೈಸೂರು ಅಂದ್ರೆ ಮೈಸೂರು ಪಾಕ್ ಎನ್ನುವಷ್ಟು ಖ್ಯಾತಿ ಗಳಿಸಿದ್ದು, ಇದೀಗ ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡಿದೆ. 4.4 ರೇಟಿಂಗ್ ಪಡೆದ ಮೈಸೂರು ಪಾಕ್, ಆನ್‌ಲೈನ್‌ ಮಾರ್ಕೆಟ್​ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ:ಸಾಲ ಮರುಪಾವತಿಸದೆ ತಾನು ಸತ್ತಂತೆ ಬಿಂಬಿಸಿದ ಬಿಎಸ್​ಎಫ್​ ಯೋಧ
90 ವರ್ಷಗಳ ಹಿಂದೆ ಮೈಸೂರು ಸಂಸ್ಥಾನದಲ್ಲಿ ಮುಖ್ಯ ಭಾಣಸಿಗರಾಗಿದ್ದ ಮಾದಪ್ಪ ಎಂಬುವವರು ಆಗಿನ ಮಹಾರಾಜ ಕೃಷ್ಣರಾಜ ಒಡೆಯರ್​ ಅವರು ಊಟಕ್ಕೆ ಕುಳಿತಾಗ ತಟ್ಟೆಯಲ್ಲಿ ಸಿಹಿ ಇಲ್ಲದಿರುವುದನ್ನು ಗಮನಿಸಿ ಅವಸರದಲ್ಲಿ ಸಕ್ಕರೆ, ತುಪ್ಪ ಹಾಗೂ ಕಡ್ಲೇಹಿಟ್ಟಿನ ಮಿಶ್ರಣದಿಂದ ಖಾದ್ಯವನ್ನು ತಯಾರಿಸಿಕೊಟ್ಟು ಬಾರಿ ಪ್ರಶಂಸೆ ಗಿಟ್ಟಿಸಿದ್ದರು.
ಆ ತಿಂಡಿ ಇವತ್ತು ಜಗತ್ತಿನ 14 ನೇ ಸ್ವಾದಿಷ್ಟ ಸ್ಟ್ರೀಟ್ ಫುಡ್ ಎಂಬ ಪ್ರಖ್ಯಾತಿ ಪಡೆದಿದೆ . ಇದರೊಂದಿಗೆ ಮೈಸೂರು ಹಿರಿಮೆ ಮತ್ತಷ್ಟು ಹೆಚ್ಚಿದೆ. ನಾಲ್ಕು ವರ್ಷಗಳ ಹಿಂದೆ ಅಂದರೆ 2019ರಲ್ಲಿ ಮೈಸೂರು ಪಾಕ್ ನ ಮೂಲ ತಮಿಳುನಾಡು, ಅದಕ್ಕೆ ತಮಿಳುನಾಡು ಜಿಐ ಟ್ಯಾಗ್ ಪಡೆದುಕೊಂಡಿದೆ ಎಂದು ಸುದ್ದಿಯಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 8 =
Remember me
