ನವದೆಹಲಿ:ಭಾರತದ ಜನಸಂಖ್ಯೆಯು ಜಗತ್ತಿನ ಒಟ್ಟಾರೆ ಜನಸಂಖ್ಯೆಯ ಶೇಕಡಾ 17ರಷ್ಟಿದೆ, ಆದರೆ, ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ಭಾರತದ ಪ್ರಮಾಣವು ಶೇಕಡಾ 4ರಷ್ಟಿದೆ…
ಜನಸಂಖ್ಯೆ ಮತ್ತು ಮಾಲಿನ್ಯ ಕುರಿತಂತೆ ಜಗತ್ತು ಮತ್ತು ಭಾರತದ ನಡುವಿನ ಹೋಲಿಕೆಯನ್ನು ಹೀಗೆ ಸರಳವಾಗಿ ವಿವರಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ದುಬೈನಲ್ಲಿ ನಡೆದ COP28 (ಕಾನ್ಪರೆನ್ಸ್​ ಆಫ್​ ಪಾರ್ಟೀಸ್​. ಕಾಪ್​ 28 ಎಂಬುದು ಅರಬ್​ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ನವೆಂಬರ್‌ನಿಂದ 30ರಿಂದ ಡಿಸೆಂಬರ್ 12ರವರೆಗೆ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ) ಸಭೆಯಲ್ಲಿ ಪ್ರಧಾನಿ ಈ ವಿವರಣೆ ನೀಡಿದರು.
ಜನಸಂಖ್ಯೆಯು ತುಂಬಾ ಕಡಿಮೆ ಇರುವ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಹೊರಸೂಸುವಿಕೆ ತುಂಬಾ ಕಡಿಮೆಯಾಗಿದೆ ಎಂದೂ ಹೇಳಿದರು.ಇಂಗಾಲ ಹೊರಸೂಸುವಿಕೆ ತೀವ್ರವಾಗಿ ಕಡಿತಗೊಳಿಸಲು ಎಲ್ಲ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು. ಇದರಲ್ಲಿ ಜನರ ಸಹಭಾಗಿತ್ವವು ಮಹತ್ವದ್ದಾಗಿದೆ ಎಂದು ಮೋದಿ ಹೇಳಿದರು.ಭಾರತದ ಜನಸಂಖ್ಯೆಯು ಜಾಗತಿಕ ಜನಸಂಖ್ಯೆಯ ಶೇಕಡಾ 17 ರಷ್ಟಿದೆ, ಆದರೆ, ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ಭಾರತದ ಪಾಲು ಕೇವಲ 4 ಪ್ರತಿಶತದಷ್ಟಿದೆ. ಈ ನಿಟ್ಟಿನಲ್ಲಿ ನಮ್ಮ ರಾಷ್ಟ್ರಕ್ಕೆ ನೀಡಿದ ಗುರಿಯನ್ನು ಸಾಧಿಸುವಲ್ಲಿ ನಾವು ವೇಗವಾಗಿ ಚಲಿಸುತ್ತಿದ್ದೇವೆ. ವಾಸ್ತವವಾಗಿ, ನಾವು ನಮ್ಮ ಪಳೆಯುಳಿಕೆಯಲ್ಲದ ಇಂಧನ ಗುರಿಗಳನ್ನು ಒಂಬತ್ತು ವರ್ಷಗಳ ಮೊದಲು ತಲುಪಿದ್ದೇವೆ ಎಂದು ಮೋದಿ ಹೇಳಿದರು,
ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಉದಯೋನ್ಮುಖ ಆರ್ಥಿಕತೆಗಳಿಗೆ ನೆರವಾಗುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ವರ್ಗಾಯಿಸಲು ಶ್ರೀಮಂತ ರಾಷ್ಟ್ರಗಳಿಗೆ ಅವರು ಕರೆ ನೀಡಿದರು.
ಕಳೆದ ಶತಮಾನದ ತಪ್ಪುಗಳನ್ನು ಸರಿಪಡಿಸಲು ನಮಗೆ ಹೆಚ್ಚು ಸಮಯವಿಲ್ಲ. ಮಾಲಿನ್ಯ ಕಡಿತಗೊಳಿಸುವಲ್ಲಿ ಪ್ರತಿ ರಾಷ್ಟ್ರವು ತನಗೆ ನಿಗದಿಪಡಿಸಿದ ಗುರಿಗಳನ್ನು ಪೂರೈಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.COP28 ಅಧ್ಯಕ್ಷ ಸುಲ್ತಾನ್ ಅಲ್ ಜಾಬರ್ ಮತ್ತು ವಿಶ್ವ ಸಂಸ್ಥೆ ಹವಾಮಾನ ಬದಲಾವಣೆಯ ಅಧ್ಯಕ್ಷ ಸೈಮನ್ ಸ್ಟೀಲ್ ಉಪಸ್ಥಿತರಿದ್ದರು.
ಬಟ್ಟೆ ಮೂಸಿದ ಲಿಯೋ… ಕೆಲ ಕ್ಷಣಗಳಲ್ಲಿಯೇ ಅಪಹೃತ ಬಾಲಕ ಪತ್ತೆ
ರಷ್ಯಾದ ಮಹಿಳೆಯರು ಕನಿಷ್ಠ 8 ಮಕ್ಕಳನ್ನು ಹೊಂದಬೇಕು… ಹೀಗೆಂದು ಕರೆ ನೀಡಿದ್ದು ಯಾರು ಗೊತ್ತೆ?
ಡೈರಿ ಪುಟಗಳಿಂದಲೇ ಪ್ಲೇಯಿಂಗ್ ಕಾರ್ಡ್‌ ತಯಾರಿಸಿ ಟೈಮ್​ ಪಾಸ್ ಮಾಡಿದ ಕಾರ್ಮಿಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fourteen =
Remember me
