ನವದೆಹಲಿ:ಕಳೆದ ವರ್ಷ ಭಾರತದಲ್ಲಿ 4,61,312 ರಸ್ತೆ ಅಪಘಾತಗಳು ಸಂಭವಿಸಿವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿದ ಹೊಸ ವರದಿ ತಿಳಿಸಿದೆ.
ವರದಿಯ ಪ್ರಕಾರ, ಅಪಘಾತಗಳಲ್ಲಿ 1,68,491 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 4,43,366 ಜನರು ಗಾಯಗೊಂಡಿದ್ದಾರೆ. ಭಾರತದಲ್ಲಿ ರಸ್ತೆ ಅಪಘಾತಗಳು-2022 ಎಂಬ ಶೀರ್ಷಿಕೆಯ ವರದಿಯು 2021ಕ್ಕೆ ಹೋಲಿಸಿದರೆ ಅಪಘಾತಗಳ ಸಂಖ್ಯೆಯಲ್ಲಿ ಶೇ.11.9 ಹೆಚ್ಚಾಗಿದೆ ಮತ್ತು ಸಾವಿನ ಸಂಖ್ಯೆಯು ಶೇ.9.4ರಷ್ಟು ಹೆಚ್ಚಾಗಿದೆ ಎಂದು ಸೂಚಿಸುತ್ತದೆ.
ಗಾಯಗೊಂಡವರ ಸಂಖ್ಯೆಯಲ್ಲಿ ಶೇ.15.3ರಷ್ಟು ಏರಿಕೆ ಕಂಡುಬಂದಿದೆ. ಎಕ್ಸ್​ಪ್ರೆಸ್​ವೇ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ 1,51,997 (ಶೇ.32.9), ರಾಜ್ಯ ಹೆದ್ದಾರಿಗಳಲ್ಲಿ 1,06,682 (ಶೇ.23.1) ಮತ್ತು ಉಳಿದ 2,02,633 (ಶೇ.43.9) ಇತರ ರಸ್ತೆಗಳಲ್ಲಿ ಸಂಭವಿಸಿವೆ. 2022ರಲ್ಲಿ ದಾಖಲಾದ ಒಟ್ಟು 1,68,491 ಸಾವುಗಳಲ್ಲಿ 61,038 ರಾಷ್ಟ್ರೀಯ ಹೆದ್ದಾರಿಗಳಲ್ಲಿ, 41,012 ರಾಜ್ಯ ಹೆದ್ದಾರಿಗಳಲ್ಲಿ, 66,441 ಇತರ ರಸ್ತೆಗಳಲ್ಲಿ ಸಂಭವಿಸಿವೆ ಎಂದು ತಿಳಿಸಿದೆ. ಈ ವಾರ್ಷಿಕ ವರದಿಯನ್ನು ಕ್ಯಾಲೆಂಡರ್​ ವರ್ಷದ ಆಧಾರದ ಮೇಲೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್​ ಇಲಾಖೆಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ತಯಾರಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seven =
Remember me
