ಟೋಕಿಯೋ :ಟೋಕಿಯೋ ಒಲಿಂಪಿಕ್ಸ್​ನ ಆರಂಭಿಕ ಆಟಗಳಲ್ಲಿ ಪುರುಷರ 10 ಮೀ ಏರ್​ ಪಿಸ್ತೋಲ್​ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಖ್ವಾಲಿಫಿಕೇಶನ್ ರೌಂಡ್​ನಲ್ಲಿ ಮೊದಲಿಗರಾಗಿ ಆಟ ಮುಗಿಸಿದ ಚೌಧರಿ, ಪದಕಗಳಿಗಾಗಿ ಸೆಣಸುವ ಫೈನಲ್ಸ್ ಸ್ಪರ್ಧೆಗೆ ಬಡ್ತಿ ಪಡೆದಿದ್ದಾರೆ.
ಭಾರತದ ಆರ್ಚರ್​ಗಳಾದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಅವರ ಜೋಡಿ, ಚೀನಾದ ತಂಡವನ್ನು 5-3 ಅಂಕಗಳಿಂದ ಸೋಲಿಸಿ, ಮಿಕ್ಸಡ್ ಈವೆಂಟ್​ನಲ್ಲಿ ಕ್ವಾರ್ಟರ್​ ಫೈನಲ್ಸ್​ ತಲುಪಿದೆ. ಕ್ವಾರ್ಟರ್ಸ್​ನಲ್ಲಿ ದಕ್ಷಿಣ ಕೊರಿಯಾದ ಜೋಡಿಯ ವಿರುದ್ಧ ಸೆಣೆಸಲಿದ್ದಾರೆ.
ಇದನ್ನೂ ಓದಿ:ಟೋಕಿಯೋ ಒಲಂಪಿಕ್ಸ್: ಕುದುರೆ ಸವಾರಿಯ ವಿಶಿಷ್ಟ ಸ್ಪರ್ಧೆಗೆ ಬೆಂಗಳೂರಿಗ
ಟೇಬಲ್ ಟೆನ್ನಿಸ್​ನ ಮಿಕ್ಸಡ್​​ ಡಬಲ್ಸ್​ ಈವೆಂಟ್​ನಲ್ಲಿ ಭಾರತೀಯ ಆಟಗಾರರಾದ ಶರತ್ ಕಮಲ್ ಮತ್ತು ಮನಿಕಾ ಬತ್ರ ಚೀನಾದ ಟೈಪೈ ಜೋಡಿ ಯುನ್​ ಜು ಲಿನ್ ಮತ್ತು ಚಿಂಗ್ ಐ ಚೆಂಗ್ ವಿರುದ್ಧ ಸೋಲನುಭವಿಸಿದರು.
ಮೆನ್ಸ್​ ಹಾಕಿಯಲ್ಲಿ ಪೂಲ್ ಎ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡನ್ನು ಸೋಲಿಸಿ ಮುಂದೆ ಸಾಗಿದೆ. ರೂಪಿಂದರ್​ ಪಾಲ್ ಸಿಂಗ್​ ಅವರು ಒಂದು ಗೋಲ್​ ಪಡೆದರೆ, ಹರ್​ಮನ್​ ಪ್ರೀತ್ ಸಿಂಗ್ ಎರಡು ಗೋಲ್ ಗಳಿಸಿದ್ದು, ತಂಡವು 3-2 ಅಂಕಗಳಿಂದ ಗೆಲುವು ಸಾಧಿಸಿತು.(ಏಜೆನ್ಸೀಸ್)
ಮಳೆ : ಇಂದು ರಾಜ್ಯದ 7 ಜಿಲ್ಲೆಗಳಿಗೆ ರೆಡ್ ಅಲರ್ಟ್
VIDEO | ವೇದಿಕೆಯಲ್ಲಿ ‘ಬ್ಯಾಟಿಂಗ್’ ಸಿದ್ಧತೆ ತೋರಿದ ಸಿಧು!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 16 =
Remember me
