ಪ್ಯಾರಿಸ್​:ಭಾರತದ ಅತ್ಯಂತ ಯಶಸ್ವಿ ಆನ್​ಲೈನ್​ ಪಾವತಿ ವ್ಯವಸ್ಥೆ ಯೂನಿಫೈಡ್​ ಪೇಮೆಂಟ್​ ಸಿಸ್ಟಮ್​ (ಯುಪಿಐ) ಅನ್ನು ಮುಂದಿನ ದಿನಗಳಲ್ಲಿ ಫ್ರಾನ್ಸ್​ನಲ್ಲೂ ಬಳಸಬಹುದಾಗಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ಎರಡು ದಿನಗಳ ಫ್ರಾನ್ಸ್​ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಇಂದು ಪ್ಯಾರಿಸ್​ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.
ಫ್ರಾನ್ಸ್​ನಲ್ಲಿ ಯುಪಿಐ ಬಳಸಲು ಭಾರತ ಮತ್ತು ಫ್ರಾನ್ಸ್​ ಒಪ್ಪಿಕೊಂಡಿವೆ. ಮುಂದಿನ ದಿನಗಳಲ್ಲಿ ಇದು ಜಾರಿಗೆ ಬರಲಿದೆ. ಇದು ಐಫೆಲ್​ ಟವರ್​ನಿಂದಲೇ ಆರಂಭವಾಗಲಿದೆ. ಅದರರ್ಥ ಭಾರತೀಯ ಪ್ರವಾಸಿಗರು ಭಾರತದ ರೂಪಯಿಯನ್ನೇ ಮುಂದಿನ ದಿಗಳಲ್ಲಿ ಫ್ರಾನ್ಸ್​ನಲ್ಲಿ ಪಾವತಿ ಮಾಡಬಹುದು ಎಂದರು.
ಇದನ್ನೂ ಓದಿ:ಪ್ರ​ಧಾನಿ ಮೋದಿಗೆ ಕೆಂಪುಹಾಸಿನ ಸ್ವಾಗತ: ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್​ ಜತೆ ದ್ವಿಪಕ್ಷೀಯ ಸಭೆ; ರಫೇಲ್​, ಸಬ್​ಮರೀನ್​ ಒಪ್ಪಂದಕ್ಕೆ ಇಂದು ಅಂಕಿತ
ಫ್ರಾನ್ಸ್​ನಲ್ಲಿ ಯುಪಿಐ ಜಾರಿಯಾದರೆ, ಭಾರತೀಯರ ಖರ್ಚಿನ ಹಾದಿಯು ದೊಡ್ಡ ಮಟ್ಟದಲ್ಲಿ ತೆರೆದುಕೊಳ್ಳುವ ಸಾಧ್ಯತೆ ಇದೆ. ಯುಪಿಐ, ವಿದೇಶಿ ವಿನಿಮಯ ಕಾರ್ಡುಗಳ ಅನಿವಾರ್ಯತೆಯನ್ನು ತೊಡೆದುಹಾಕುತ್ತದೆ ಮತ್ತು ಖರ್ಚು ಮಾಡಲು ಹಣವನ್ನು ಸಾಗಿಸುವ ಅಗತ್ಯವನ್ನು ತಪ್ಪಿಸುತ್ತದೆ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಧಾನಿ ಮೋದಿಯವರು ತಮ್ಮ ಫ್ರಾನ್ಸ್ ಪ್ರವಾಸವನ್ನು ಅಲ್ಲಿನ ಪ್ರಧಾನಿ ಎಲಿಜಬೆತ್ ಬೋರ್ನ್ ಮತ್ತು ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್ ಅವರೊಂದಿಗೆ ಫಲಪ್ರದಾಯಕ ಸಭೆಗಳೊಂದಿಗೆ ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಭಾರತದ ಬಹುಮುಖಿ ಸಹಕಾರ ಮತ್ತು ಸಮಯ-ಪರೀಕ್ಷಿತ ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ಉತ್ತೇಜನ ನೀಡುವ ಮಾರ್ಗಗಳ ಬಗ್ಗೆ ಚರ್ಚಿಸಿದರು.
ಅಂದಹಾಗೆ ಭಾರತದ UPI ವ್ಯವಸ್ಥೆ ತುಂಬಾ ಸರಳ ಮತ್ತು ಸುರಕ್ಷಿತವಾಗಿದೆ. ಬಹು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್​ನಲ್ಲಿ ನಿರ್ವಹಹಿಸುವ ಅಧಿಕಾರವನ್ನು ನೀಡುತ್ತದೆ. ಹಲವಾರು ಬ್ಯಾಂಕಿಂಗ್ ವೈಶಿಷ್ಟ್ಯಗಳು ಯುಪಿಐನಲ್ಲಿ ವಿಲೀನಗೊಂಡಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NCPI) 2016ರ ಏಪ್ರಿಲ್ 21ರಂದು ತನ್ನ ಸದಸ್ಯ ಬ್ಯಾಂಕ್‌ಗಳೊಂದಿಗೆ ಪ್ರಾಯೋಗಿಕವಾಗಿ ಯುಪಿಐ ಅನ್ನು ಜಾರಿಗೆ ತಂದಿತು. ಅಂದಿನಿಂದ UPI ಬಳಕೆಯು ಅದ್ಭುತ ಬೆಳವಣಿಗೆಯನ್ನು ಕಂಡಿದೆ.
ಇದನ್ನೂ ಓದಿ:ಲಾರಿ ಚಾಲಕನಿಗೆ ಬೆದರಿಸಿ ಸುಲಿಗೆ  24 ತಾಸಿನಲ್ಲೇ ಆರೋಪಿಗಳ ಪತ್ತೆ
2022ರಲ್ಲೇ NPCI ಫ್ರಾನ್ಸ್‌ನ ವೇಗದ ಮತ್ತು ಸುರಕ್ಷಿತ ಆನ್‌ಲೈನ್ ಪಾವತಿ ವ್ಯವಸ್ಥೆ ಲೈರಾ ಜತೆ ಒಪ್ಪಂದಕ್ಕೆ ಸಹಿ ಹಾಕಿತು. ಈ ವರ್ಷ ಭಾರತದ UPI ಮತ್ತು ಸಿಂಗಾಪುರದ PayNow ಒಪ್ಪಂದಕ್ಕೆ ಸಹಿ ಹಾಕಿವೆ. ಎರಡೂ ದೇಶಗಳ ಬಳಕೆದಾರರಿಗೆ ಗಡಿಯಾಚೆಗಿನ ವಹಿವಾಟುಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಯುಎಇ, ಭೂತಾನ್ ಮತ್ತು ನೇಪಾಳ ಯುಪಿಐ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.
NPCI ಇಂಟರ್ನ್ಯಾಷನಲ್, ಅಮೆರಿಕ ಹಾಗೂ ಇತರ ಯುರೋಪಿಯನ್ ರಾಷ್ಟ್ರಗಳು ಮತ್ತು ಪಶ್ಚಿಮ ಏಷ್ಯಾದಲ್ಲಿ UPI ಸೇವೆಗಳನ್ನು ವಿಸ್ತರಿಸಲು ಮಾತುಕತೆ ನಡೆಸುತ್ತಿದೆ.(ಏಜೆನ್ಸೀಸ್​)
45 ವರ್ಷಗಳ ಬಳಿಕ ದಿಲ್ಲಿಯಲ್ಲಿ ಯಮುನೆಯ ರುದ್ರನರ್ತನ; ಜನಜೀವನ ಸಂಪೂರ್ಣ ಅಸ್ತವ್ಯಸ್ತ

ರೈಲ್ವೆ ಸಿಗ್ನಲ್ ವ್ಯವಸ್ಥೆ ಬದಲಾವಣೆ; 1 ಲಕ್ಷ ಕೋಟಿಯ ಯೋಜನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
