ನವದೆಹಲಿ:ಕೋವಿಡ್-19 ವಿರುದ್ಧದ ಸಮರದಲ್ಲಿ ಭಾರತ ಮಹತ್ವದ ಸಾಧನೆ ಮಾಡಿದ್ದು ಸೋಮವಾರ ಒಂದೇ ದಿನ 88 ಲಕ್ಷ ಡೋಸ್​ಗೂ ಅಧಿಕ ಲಸಿಕೆ ಹಾಕುವ ಮೂಲಕ ಲಸಿಕೆ ಅಭಿಯಾನದಲ್ಲಿನ ಈ ಹಿಂದಿನ ದಾಖಲೆಯನ್ನು ಮುರಿದಿದೆ. ದೇಶದಾದ್ಯಂತ ಸೋಮವಾರ 88.13 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ದೇಶದಲ್ಲಿ ಇದುವರೆಗೆ ಒಟ್ಟು 55.47 ಕೋಟಿ ವ್ಯಾಕ್ಸಿನ್ ಡೋಸ್ ನೀಡಲಾಗಿದೆ. ಮಧ್ಯ ಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯಗಳು 18-44 ವಯೋಗುಂಪಿನವರಿಗೆ ತಲಾ ಒಂದು ಕೋಟಿಗಿಂತ ಅಧಿಕ ಡೋಸ್ ಲಸಿಕೆ ಹಾಕಿವೆ. ಈ ವರ್ಷ ಜನವರಿ 16ರಂದು ಲಸಿಕೆ ಅಭಿಯಾನ ಆರಂಭವಾಗಿತ್ತು.
5 ತಿಂಗಳಲ್ಲೇ ಅತಿ ಕಡಿಮೆ ಕೇಸ್:ಭಾರತದಲ್ಲಿ ಮಂಗಳವಾರ ಬೆಳಿಗ್ಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ ಕೋವಿಡ್ ಸೋಂಕಿನ 25,166 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು 154 ದಿನಗಳಲ್ಲಿ ದಾಖಲಾದ ಅತಿ ಕಡಿಮೆ ದೈನಿಕ ಪ್ರಕರಣವಾಗಿದೆ. 437 ಜನರು ಮೃತಪಟ್ಟಿದ್ದಾರೆ. ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 4,32,079ಕ್ಕೆ ಏರಿದೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3,69,846 ಆಗಿದ್ದು 144 ದಿನಗಳಲ್ಲೇ ಅತಿ ಕಡಿಮೆ ಕೇಸ್ ಆಗಿದೆ. ಆಗಸ್ಟ್ 16ರ ವರೆಗೆ ದೇಶದಾದ್ಯಂತ ಒಟ್ಟು 49,66,29,524 ಸ್ಯಾಂಪಲ್​ಗಳ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಒಟ್ಟು 3,14,48,754 ರೋಗಿಗಳು ಗುಣಮುಖರಾಗಿದ್ದು ಚೇತರಿಕೆ ಪ್ರಮಾಣ ಶೇಕಡ 97.51 ಆಗಿದೆ.
ಒಂದೇ ಕೇಸ್​ಗೆ ನ್ಯೂಜಿಲೆಂಡ್ ಲಾಕ್​ಡೌನ್:ನ್ಯೂಜಿಲೆಂಡ್​ನಲ್ಲಿ ಒಂದು ಸಾಮುದಾಯಿಕ ಕರೊನಾ ವೈರಸ್ ಪ್ರಕರಣ ಪತ್ತೆಯಾಗಿದ್ದು ಅಷ್ಟಕ್ಕೇ ಬೆಚ್ಚಿಬಿದ್ದಿರುವ ಸರ್ಕಾರ ಸೋಂಕು ನಿಯಂತ್ರಣಕ್ಕಾಗಿ ಇಡೀ ದೇಶದಲ್ಲಿ ಕನಿಷ್ಠ ಮೂರು ದಿನ ಲಾಕ್​ಡೌನ್ ಘೋಷಿಸಿದೆ. ಸೋಂಕಿನ ವಿರುದ್ಧ ಹೋರಾಡಲು ‘5 ಮಿಲಿಯನ್ ಟೀಮ್ ಕಠಿಣ ಕ್ರಮಗಳಿಗೆ ಸಿದ್ಧರಿರಬೇಕು ಎಂಬ ತಮ್ಮ ಈ ಹಿಂದಿನ ಪ್ರಖ್ಯಾತ ನುಡಿಗಟ್ಟನ್ನು ಪ್ರಧಾನಿ ಜೆಸಿಂಡಾ ಆರ್ಡರ್ನ್ ಪುನರುಚ್ಚರಿಸಿದ್ದಾರೆ. ದೇಶದಲ್ಲಿ ಫೆಬ್ರವರಿಯಲ್ಲಿ ಸೋಂಕಿನ ಕೊನೆಯ ಪ್ರಕರಣ ವರದಿಯಾಗಿತ್ತು. ಆದರೆ, ಮಂಗಳವಾರ ಆಕ್ಲೆಂಡ್​ನಲ್ಲಿ ಒಬ್ಬ ಪುರುಷನಲ್ಲಿ ಸೋಂಕು ಪತ್ತೆಯಾಗಿದ್ದು ಡೆಲ್ಟಾ ಸೋಂಕನ್ನು ಎದುರಿಸಲು ಕಠಿಣ ಕ್ರಮ ಅತ್ಯಗತ್ಯ ಎಂದು ಜೆಸಿಂಡಾ ಹೇಳಿದ್ದಾರೆ.
ಅಮೆರಿಕ ನಿಯಮ ಸಡಿಲಿಕೆ:ಭಾರತದಲ್ಲಿ ಕರೊನಾ ಪರಿಸ್ಥಿತಿ ಸುಧಾರಿಸುತ್ತಿರು ವುದರಿಂದ ಪ್ರಯಾಣ ಮಾಡಲು ಭಾರತ ‘ಸುರಕ್ಷಿತ’ ಎಂದು ಅಮೆರಿಕ ಘೋಷಿಸಿದೆ. ಈ ವರ್ಷದ ಆರಂಭದಲ್ಲಿ ಭಾರತವನ್ನು ಲೆವೆಲ್ 4ರಲ್ಲಿ ಸೇರಿಸಿದ್ದ ಅಮೆರಿಕ, ತನ್ನ ಪ್ರಜೆಗಳು ಭಾರತಕ್ಕೆ ಪ್ರಯಾಣ ಮಾಡುವ ಮೇಲೆ ನಿರ್ಬಂಧ ವಿಧಿಸಿತ್ತು. ಸೋಮವಾರ, ಸಾಧಾರಣ ವಿಭಾಗವಾದ ಲೆವೆಲ್ 2ಕ್ಕೆ ಸೇರ್ಪಡೆ ಮಾಡಿ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಿದೆ.
ಸೋಮವಾರ ಅತ್ಯಂತ ಹೆಚ್ಚು ದೈನಿಕ ಲಸಿಕೆ ನೀಡಿಕೆ ಸಾಧನೆ ಮಾಡಲಾಗಿದೆ. ಇದು ಜಗತ್ತಿನ ಲಸಿಕೆ ನೀಡಿಕೆ ಇತಿಹಾಸದಲ್ಲಿ ಮಹತ್ವದ ದಿನವಾಗಿ ದಾಖಲಾಗುತ್ತದೆ. ಈ ಸಾಧಕರು ಅಭಿನಂದನಾರ್ಹರು. ಮಹಾಮಾರಿಯ ವಿರುದ್ಧದ ಹೋರಾಟವನ್ನು ಬಲಪಡಿಸೋಣ. ಎಲ್ಲರೂ ಲಸಿಕೆ ಪಡೆಯೋಣ
|ಮನಸುಖ್ ಮಾಂಡವೀಯಕೇಂದ್ರ ಆರೋಗ್ಯ ಸಚಿವ
ವ್ಯಾಪಾರಿಯ ಸೋಗಲ್ಲಿ ಬಂದರು, ಅಂಗಡಿ ಮಾಲೀಕನನ್ನೇ ಕೊಂದರು; ಗುಂಡಿಕ್ಕಿ ಸಾಯಿಸಿದ್ರು ಸುಪಾರಿ ಕಿಲ್ಲರ್ಸ್​

ಆಟ ಆಡ್ತ ಆಡ್ತ ಸತ್ತು ಹೋದ ಬಾಲಕಿ: ಶಾಲೆ ತೆರೆದಿಲ್ಲ, ಮಕ್ಕಳು ಮನೇಲೇ ಇದ್ದಾರೆ ಅಂತಾದರೆ ಯಾವುದಕ್ಕೂ ಹುಷಾರಾಗಿರಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 8 =
Remember me
