ನವದೆಹಲಿ:ದೇಶೀಯವಾಗಿ ನಿರ್ವಿುಸಲಾದ ಮೊದಲ ಯುದ್ಧವಿಮಾನ ವಾಹಕ ನೌಕೆ ‘ವಿಕ್ರಾಂತ್’ ಗುರುವಾರ ಭಾರತೀಯ ನೌಕಾ ಪಡೆಗೆ ಹಸ್ತಾಂತರಗೊಂಡಿತು. ಕೊಚ್ಚಿ ಶಿಪ್​ಯಾರ್ಡ್ ಸಂಸ್ಥೆ ನಿರ್ವಿುಸಿರುವ ಸಮರ ನೌಕೆ ಆಗಸ್ಟ್ 15ರಂದು ನೇವಿಗೆ ಸೇರ್ಪಡೆಯಾಗಲಿದೆ. 20,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಿುಸಿರುವ ವಿಕ್ರಾಂತ್ ನೌಕೆ, ಮೂರು ವಾರಗಳ ಹಿಂದೆ ಸಾಗರದಲ್ಲಿ ನಾಲ್ಕು ಹಾಗೂ ಅಂತಿಮ ಸುತ್ತಿನ ಪರೀಕ್ಷೆಯನ್ನು ಪೂರ್ಣಗೊಳಿಸಿದೆ.
ನೌಕಾ ಪಡೆಗೆ ವಿಕ್ರಾಂತ್ ಹಸ್ತಾಂತರ ವಾಗುವುದರೊಂದಿಗೆ, ವಿಮಾನ ವಾಹಕ ಸಮರ ನೌಕೆಯನ್ನು ದೇಶೀಯವಾಗಿ ಕಟ್ಟುವ ಸಾಮರ್ಥ್ಯ ಹೊಂದಿದ ಕೆಲವೇ ದೇಶಗಳ ಸಾಲಿಗೆ ಭಾರತ ಸೇರಿದೆ. ನೌಕೆ ಹಸ್ತಾಂತರವಾಗಿರುವುದು ಒಂದು ‘ಐತಿಹಾಸಿಕ’ ಘಟನೆ ಎಂದು ನೌಕಾಪಡೆ ವರ್ಣಿಇಸಿದೆ. ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಸೇರ್ಪಡೆ ಯಾಗುತ್ತಿರುವುದು ಮಹತ್ವದ ವಿಚಾರವಾಗಿದೆ ಎಂದಿದೆ.
ಚೆನ್ನೈನಲ್ಲಿ 44ನೇ ಚೆಸ್​ ಒಲಿಂಪಿಯಾಡ್​: ಚದುರಂಗದ ಮಹಾಕದನಕ್ಕೆ ಚಾಲನೆ ನೀಡಿದ ಪ್ರಧಾನಿ

ರಾಜ್ಯದಲ್ಲಿ ಮತ್ತೆ ಮಳೆ ಬಿರುಸು, ನಾಳೆ 9 ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 8 =
Remember me
