ನವದೆಹಲಿ:ಪ್ರಸ್ತುತ ಇಂಡಿಗೊ ವಿಮಾನಯಾನ ಕಂಪನಿಯಲ್ಲಿ 800ಕ್ಕೂ ಹೆಚ್ಚು ಫೈಲಟ್​ಗಳಿದ್ದು, ಮುಂದಿನ ವರ್ಷದಲ್ಲಿ ಆಗಸ್ಟ್​ನೊಳಗೆ ಈ ಸಂಖ್ಯೆಯನ್ನು ಒಂದು ಸಾವಿರಕ್ಕೇರಿಸಲು ಕಂಪನಿ ನಿರ್ಧಾರ ಮಾಡಿದೆ.
ಇದನ್ನೂ ಓದಿ:ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮವಹಿಸಲಿ: ಸಚಿವ ದಿನೇಶ್ ಗುಂಡೂರಾವ್ ಒತ್ತಾಯ
ಕೆಲಸದಲ್ಲಿ ವೈವಿಧ್ಯತೆಯ ಜೊತೆಗೆ ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ತೀರ್ಮಾನ ಮಾಡಲಾಗಿದೆ. ಇದರಿಂದ ವಿಮಾನಗಳ ಹಾರಾಟ ಮತ್ತು ಸಂಪರ್ಕ ಜಾಲವನ್ನು ಇನ್ನಷ್ಟು ಬಲಪಡಿಸಲು ನೆರವಾಗಲಿದೆ ಎಂದು ಇಂಡಿಗೊ ಹೇಳಿದೆ.ಎಂಜಿನಿಯರಿಂಗ್ ಹಾಗೂ ವಿಮಾನ ಸಿಬ್ಬಂದಿ ಸೇರಿದಂತೆ ಎಲ್ಲಾ ವಿಭಾಗದಲ್ಲಿನ ಕೆಲಸದ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಸುಖಜಿತ್ ಎಸ್​. ಪಸ್ರಿಚಾ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಮಹಿಳಾ ಪೈಲೆಟ್​ಗಳ ಸರಾಸರಿ ಶೇ.7 ರಿಂದ ಶೇ.9 ರಷ್ಟಿದೆ. ಇದಕ್ಕೆ ಹೋಲಿಸಿದರೆ ಇಂಡಿಗೊದಲ್ಲಿ ಶೇ. 14 ಮಹಿಳಾ ಪೈಲಟ್‌ಗಳಿದ್ದಾರೆ ಎಂದು ಕಂಪನಿ ಹೇಳಿದೆ. “ನಾವು ಒಂದು ವರ್ಷದಲ್ಲಿ (ಆಗಸ್ಟ್ 2025 ರ ವೇಳೆಗೆ) 1,000 ಮಹಿಳಾ ಪೈಲಟ್‌ಗಳ ಸಂಖ್ಯೆಯನ್ನು ದಾಟುತ್ತೇವೆ” ಎಂದು ಹೇಳಿದರು.
ಪ್ರತಿದಿನ ಇಂಡಿಗೊ ಕಂಪನಿಯ 2,000 ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸುತ್ತಿದ್ದು, 5 ಸಾವಿರಕ್ಕೂ ಹೆಚ್ಚು ಪೈಲಟ್‌ಗಳಿದ್ದಾರೆ. 77ನೇ ಸ್ವಾತಂತ್ರ್ಯದ ದಿನಾಚರಣೆ ಅಂಗವಾಗಿ ಬುಧವಾರ ಹೊಸದಾಗಿ 77 ಮಹಿಳಾ ಪೈಲೆಟ್​ಗಳು ಕಂಪನಿಗೆ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ಕಂಪನಿಯಲ್ಲಿ 5,038 ಪೈಲಟ್‌ಗಳು ಮತ್ತು 9,363 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 36,860 ಖಾಯಂ ಉದ್ಯೋಗಿಗಳನ್ನು ಹೊಂದಿದೆ. ಎಣಿಕೆಯಲ್ಲಿ 713 ಮಹಿಳಾ ಪೈಲಟ್‌ಗಳು ಸೇರಿದ್ದಾರೆ ಎಂದು ಕಂಪನಿ ತಿಳಿಸಿದೆ.
ಹಾಸನ: ಸಾಲಭಾದೆ ತಾಳದೇ 13 ವರ್ಷದ ಮಗಳೊಂದಿಗೆ ಹೇಮಾವತಿ ನಾಲೆಗೆ ಹಾರಿ ದಂಪತಿ ಆತ್ಮಹತ್ಯೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 + twenty =
Remember me
