ನವದೆಹಲಿ:ಭಾರತದ ಇಂಡಿಗೋ ಏರ್​ಲೈನ್ಸ್​​ನ ಯುನೈಟೆಡ್​ ಅರಬ್​ ಎಮೆರೆಟ್ಸ್​(ಯುಎಇ) ವಿಮಾನಯಾನಗಳನ್ನು ಆಗಸ್ಟ್​ 24 ರವರೆಗೆ ನಿಷೇಧಿಸಲಾಗಿದೆ. ಯಾತ್ರಿಕರಿಗೆ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಮಾಡಬೇಕಾದ ಕರೊನಾ ಪರೀಕ್ಷೆಗಳನ್ನು ನಡೆಸದೆ ಪ್ರಯಾಣಕ್ಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಭಾರತ, ಪಾಕಿಸ್ತಾನ, ನೇಪಾಳ, ಶ್ರೀಲಂಕ ಮತ್ತು ಉಗಾಂಡದಿಂದ ಯುಎಇಗೆ ತೆರಳುವ ಯಾತ್ರಿಕರಿಗೆ ಕರೊನಾ ಆರ್​ಟಿಪಿಸಿಆರ್​ ಪರೀಕ್ಷೆಯಲ್ಲಿ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ವಿಮಾನ ಪ್ರಯಾಣಕ್ಕೆ 48 ಗಂಟೆಗಳ ಮುಂಚೆ ಮತ್ತು ವಿಮಾನ ನಿಲ್ದಾಣದಲ್ಲಿ ಕೆಲವು ಗಂಟೆಗಳ ಮುನ್ನ ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ:ಆ.23 ರಿಂದ ರಾಜ್ಯದಲ್ಲಿ ಭಾರೀ ಮಳೆ! ದಕ್ಷಿಣ ಒಳನಾಡಲ್ಲಿ ಯೆಲ್ಲೋ ಅಲರ್ಟ್
ಮಂಗಳವಾರದಿಂದ ಆಗಸ್ಟ್​ 24 ರವರೆಗೆ ಒಂದು ವಾರದ ಕಾಲ ಯುಎಇಗೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿರುವ ಇಂಡಿಗೋ ಸಂಸ್ಥೆ, ಈ ದಿನಾಂಕಗಳಂದು ಫ್ಲೈಟ್​ ಬುಕ್​ ಆಗಿದ್ದು, ತೊಂದರೆಗೊಳಗಾಗುವ ಪ್ರಯಾಣಿಕರಿಗೆ ರೀಫಂಡ್​ ಅಥವಾ ಮುಂದಿನ ದಿನಾಂಕಗಳಲ್ಲಿ ಪ್ರಯಾಣ ವ್ಯವಸ್ಥೆಯನ್ನು ಒದಗಿಸುವುದಾಗಿ ಹೇಳಿದೆ ಎನ್ನಲಾಗಿದೆ.(ಏಜೆನ್ಸೀಸ್)
ಮತ್ತೆ ಕರಾಳತೆಯ ಭೀತಿ: ತಾಲಿಬಾನ್​ ಆಳ್ವಿಕೆಯಲ್ಲಿ ಹೆಣ್ಣುಮಕ್ಕಳಿಗೆ ಶಾಲೆ, ಉದ್ಯೋಗ ಅಪರಾಧವಾಗಿತ್ತು!

ದೂರು ಕೊಟ್ಟಳೆಂದು ಹೆಂಡತಿಯ ಮೇಲೆ ಗುಂಡು ಹಾರಿಸಿದ! ಆ ಸಮಯಕ್ಕೇ ಪೊಲೀಸರ ಎಂಟ್ರಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × 3 =
Remember me
