ಮುಂಬೈ:ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿಬೇಕಿದ್ದ ಭಾರೀ ಅನಾಹುತ ತಪ್ಪಿದೆ. ನೂರಾರು ಪ್ರಯಾಣಿಕರ ಪ್ರಾಣ ಉಳಿದಿದೆ. ರನ್​ವೇಯಲ್ಲಿ ಇಂಡಿಗೋ ವಿಮಾನ ಲ್ಯಾಂಡಿಂಗ್​ ಆಗುತ್ತಿರುವ ಸಮಯದಲ್ಲೇ ಅದೇ ರನ್​​ವೇಯಿಂದ ಏರ್​ ಇಂಡಿಯಾ ವಿಮಾನ ಟೇಕಾಫ್​​​ ಆಗಿದೆ. ರನ್ ವೇಯಲ್ಲಿ ಎರಡು ವಿಮಾನಗಳು ಒಂದಕ್ಕೊಂದು ತೀರಾ ಸಮೀಪ ಇರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಸ್ಪಷ್ಱವಾಗಿ ಕಾಣುತ್ತಿದೆ.
ಇದನ್ನು ಓದಿ:ಪ್ರಧಾನಿ ಪದಗ್ರಹಣ ಸಮಾರಂಭ: ಇವರೇ ನೋಡಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸಂಸದರು
ಏರ್ ಇಂಡಿಯಾ ಫ್ಲೈಟ್ 657 ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (TRV) ಟೇಕಾಫ್​​ ಪ್ರಕ್ರಿಯೆಯಲ್ಲಿದ್ದ ಕಾರಣ, ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣದಿಂದ (IDR) ಬಂದಿದ್ದ ಇಂಡಿಗೋ ಫ್ಲೈಟ್ 6E 5053 ರನ್‌ವೇ 27ರಲ್ಲಿ ಇಳಿಯಿತು. ಈ ಘಟನೆ ಏರ್​​ಬಸ್​​ A320neos ನಲ್ಲಿ ನಡೆದಿದೆ.
ಇಂದೋರ್‌ನಿಂದ ಇಂಡಿಗೋ ಫ್ಲೈಟ್‌ 6E 5053ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ (ATC)ನಿಂದ ಲ್ಯಾಂಡಿಂಗ್ ಕ್ಲಿಯರೆನ್ಸ್ ನೀಡಲಾಯಿತು. ATC ಸೂಚನೆಗಳನ್ನು ಅನುಸರಿಸಿ ಪೈಲಟ್ ಲ್ಯಾಂಡಿಂಗ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್​ ಆಗುತ್ತಿದ್ದಂತೆ ಸೂಚನೆ ನೀಡಿದ ಏರ್​ ಟ್ರಾಫಿಕ್​ ಕಂಟ್ರೋಲರ್​​ ಸಿಬ್ಬಂದಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಜಾಗೊಳಿಸಿದೆ.
ಏಕಕಾಲದಲ್ಲಿ ಲ್ಯಾಂಡಿಂಗ್​ ಮತ್ತು ಟೇಕಾಫ್​​ಗೆ ಒಂದೇ ರನ್​​ವೇಯಲ್ಲಿ ಅನುಮತಿ ನೀಡುವುದು ಅಪಾಯಕಾರಿ ಪರಿಸ್ಥಿತಿಯನ್ನ ಸೃಷ್ಟಿಸುತ್ತದೆ. (ಏಜೆನ್ಸೀಸ್​​)
ಏನ್​ ಟೇಸ್ಟ್ ಗೊತ್ತಾ ಈ ಚಿಕನ್​ ಕಟ್ಲೆಟ್​​ : ಮಾಡುವ ಸುಲಭ ವಿಧಾನ ಹೀಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
