ನವದೆಹಲಿ:ಅದು ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲ. ಟಾಟಾ ಗ್ರೂಪ್ಸ್​ನ ಚೇರ್​ಮೆನ್ ಆಗಿದ್ದ ಜೆ.ಆರ್​.ಡಿ ಟಾಟಾ ಪ್ರಧಾನಿಗೆಂದು ಒಂದು ಗಿಫ್ಟ್ ಕಳುಹಿಸಿಕೊಟ್ಟಿದ್ದರು. ಆ ಗಿಫ್ಟ್​ನಿಂದಾಗಿ ಖುಷಿಯಾದ ಇಂದಿರಾ ಗಾಂಧಿಯವರು ಟಾಟಾ ಅವರಿಗೆ ಪತ್ರವೊಂದನ್ನು ಬರೆದು ಕಳುಹಿಸಿದ್ದರು. ಆ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಟಾ ಅವರು ಇಂದಿರಾ ಗಾಂಧಿ ಅವರಿಗೆ ಪರ್ಫ್ಯೂಮ್ ಕಳುಹಿಸಿಕೊಟ್ಟಿದ್ದರು. ಅದನ್ನು ಬಳಸಿ ಖುಷಿಯಾದ ಆಗಿನ ಪ್ರಧಾನಿಯವರು, “ನಾನು ನೀವು ಕಳಿಸಿರುವ ಸುಗಂಧ ದ್ರವ್ಯಗಳಿಂದ ರೋಮಾಂಚನಗೊಂಡಿದ್ದೇನೆ. ತುಂಬಾ ಧನ್ಯವಾದಗಳು. ನಾನು ಸಾಮಾನ್ಯವಾಗಿ ಸುಗಂಧ ದ್ರವ್ಯವನ್ನು ಬಳಸುವುದಿಲ್ಲ ಮತ್ತು ಅಂತಹ ಪ್ರಪಂಚದಿಂದ ದೂರವಿರುತ್ತೇನೆ. ಅವುಗಳ ಬಗ್ಗೆ ಸಹ ನನಗೆ ತಿಳಿದಿಲ್ಲ. ಆದರೆ ಇಂದಿನಿಂದ, ನಾನು ಖಂಡಿತವಾಗಿಯೂ ಇದನ್ನು ಪ್ರಯೋಗ ಮಾಡುತ್ತೇನೆ” ಎಂದು ಪತ್ರದ ಆರಂಭದಲ್ಲಿ ಇಂದಿರಾ ಅವರು ಹೇಳಿದ್ದಾರೆ.
A very personal letter exchange between a powerful Prime Minister and a giant industrialist. Sheer class !#Tatapic.twitter.com/RqDKEcSsBf
— Harsh Goenka (@hvgoenka)July 20, 2021

ನಿಮ್ಮನ್ನು ಭೇಟಿ ಮಾಡಿ ಒಳ್ಳೆಯದಾಯಿತು. ನೀವು ಅನುಕೂಲಕರ ಅಥವಾ ವಿಮರ್ಶಾತ್ಮಕವಾಗಿ ಯಾವುದೇ ಅಭಿಪ್ರಾಯಗಳನ್ನು ತಿಳಿಸಲು ಬಯಸಿದಾಗ ದಯವಿಟ್ಟು ಬಂದು ನನ್ನನ್ನು ಭೇಟಿಯಾಗಿ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಪತ್ರದ ಪ್ರತಿಯನ್ನು ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಟ್ವೀಟ್​ಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ. (ಏಜೆನ್ಸೀಸ್)
ಪಿಯುಸಿ ಆಯ್ತು ಮುಂದೇನು?: ವಿವಿಧ ಕೋರ್ಸ್​ಗಳು, ಉದ್ಯೋಗಾವಕಾಶಗಳ ಮಾಹಿತಿ..

ಬಜಾಜ್ ಚೇತಕ್​ಗೆ ಕಾಂಪಿಟೇಶನ್ ಕೊಡತ್ತಾ ಓಲಾ ಸ್ಕೂಟರ್? ಹೇಗಿರಲಿದೆ ಗೊತ್ತಾ ಓಲಾ ಸ್ಕೂಟಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 3 =
Remember me
