ಲಖನೌ:ಅತ್ತ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್​ 5ರಂದು ಭೂಮಿ ಪೂಜೆ ಹಮ್ಮಿಕೊಳ್ಳಲಾಗಿದ್ದು, ಇನ್ನೊಂದೆಡೆ ಸುಪ್ರೀಂಕೋರ್ಟ್​ ತೀರ್ಪಿನಂತೆ ಮಸೀದಿ ನಿರ್ಮಾಣಕ್ಕೆ ಕೂಡ ಮೊದಲ ಹೆಜ್ಜೆ ಇಡಲಾಗಿದೆ.
ಬಾಬ್ರಿ ಮಸೀದಿ-ರಾಮಜನ್ಮಭೂಮಿ ವಿವಾದದ ಬಗ್ಗೆ ಕಳೆದ ನವೆಂಬರ್​ನಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್​, ವಿವಾದಿತ ಸ್ಥಳದಲ್ಲಿ ರಾಮ ದೇವಾಲಯ ಇದ್ದುದಕ್ಕೆ ಸಾಕ್ಷಿಗಳಿವೆ. ಹಾಗಾಗಿ ಅಲ್ಲಿ ರಾಮನ ದೇಗುಲ ಕಟ್ಟಬೇಕು. ಆದರೆ ಮುಸ್ಲಿಮರಿಗೆ ಮಸೀದಿ ಕಟ್ಟಲು ಅಯೋಧ್ಯೆಯಲ್ಲಿಯೇ ಸರ್ಕಾರ ಭೂಮಿ ನೀಡಬೇಕು ಎಂದು ಹೇಳಿತ್ತು.
ಅದರಂತೆ ಉತ್ತರ ಪ್ರದೇಶ ಸರ್ಕಾರ 5 ಎಕರೆ ಭೂಮಿಯನ್ನು ನೀಡಿದೆ. ಇದೀಗ ಮಸೀದಿ ನಿರ್ಮಾಣಕ್ಕೆ ಟ್ರಸ್ಟ್ ರಚನೆಯಾಗಿದ್ದು, ಇಂಡೋ ಇಸ್ಲಾಮಿಕ್​ ಕಲ್ಚರಲ್​ ಫೌಂಡೇಶನ್ ಎಂದು ಅದಕ್ಕೆ ಹೆಸರಿಡಲಾಗಿದೆ. ಟ್ರಸ್ಟ್​​ನಲ್ಲಿ 15 ಸದಸ್ಯರು ಇದ್ದಾರೆ ಎಂದು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್​ ವಕ್ಫ್​ ಮಂಡಳಿ ತಿಳಿಸಿದೆ.
ಮಸೀದಿ ನಿರ್ಮಾಣಕ್ಕೆಂದು ಸರ್ಕಾರ ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ಕೊಟ್ಟಿರುವ 5 ಎಕರೆ ಭೂಮಿಯನ್ನು ನಾವು ಸ್ವೀಕರಿಸಿದ್ದೇವೆ. ನಮ್ಮ ವಕ್ಫ್ ಮಂಡಳಿಯಿಂದಲೇ ಟ್ರಸ್ಟ್​ ರಚನೆ ಮಾಡಲಾಗಿದೆ.ಇದನ್ನೂ ಓದಿ:ಗೆಟ್​ ಟುಗೆದರ್ ಪಾರ್ಟಿ ಬೆನ್ನಲ್ಲೇ ಕಾದಿತ್ತು ಸಾವು: ಕೊಲ್ಲುವಂಥದ್ದೇನಾಗಿತ್ತು?
ಇದೀಗ ನಿರ್ಮಾಣ ಆಗಲಿರುವ ಮಸೀದಿ ಕೂಡ ಈ ಹಿಂದಿನ ಬಾಬ್ರಿ ಮಸೀದಿ ಇದ್ದಷ್ಟು ದೊಡ್ಡದಾಗಿಯೇ ಇರಲಿದೆ. ಹಾಗೇ ಮಸೀದಿಯಲ್ಲಿ ಸಮುದಾಯಕ್ಕೆ ಹಲವು ಅನುಕೂಲಗಳನ್ನು ಕಲ್ಪಿಸಲಾಗುವುದು. ಅಡುಗೆ ವ್ಯವಸ್ಥೆ, ಆರೋಗ್ಯ, ವೈದ್ಯಕೀಯ ವ್ಯವಸ್ಥೆ, ಸಂಶೋಧನೆ, ಮ್ಯೂಸಿಯಂ, ಗ್ರಂಥಾಲಯ, ಪ್ರಕಟಣಾ ವಿಭಾಗಳನ್ನೂ ಒಳಗೊಳ್ಳಲಿದೆ ಎಂದು ಹೇಳಲಾಗಿದೆ.
ಟ್ರಸ್ಟ್​ ರಚನೆ ಮಾಡಲಾಗಿದ್ದರೂ ಸದ್ಯಕ್ಕೆ ಮಸೀದಿ ನಿರ್ಮಾಣ ಕಾರ್ಯ ಪ್ರಾರಂಭವಾಗುವುದಿಲ್ಲ ಎಂದು ಹೇಳಲಾಗಿದೆ. ಕರೊನಾ ವೈರಸ್​ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಸೀದಿ ಕಟ್ಟುವುದು ಸರಿಯಲ್ಲ. ಒಂದು ಸಲ ಈ ಸಂಕಷ್ಟ ಮುಗಿದು ಹೋಗಲಿ. ಸದ್ಯದ ಆದ್ಯತೆ ಕರೊನಾ ವಿರುದ್ಧದ ಹೋರಾಟ ಎಂದು ವಕ್ಫ್​ ಬೋರ್ಡ್ ಹೇಳಿದೆ. (ಏಜೆನ್ಸೀಸ್​)
ಭಾರತೀಯ ಪಾಪಡ್​, ಚಿಪ್ಪುಮೀನು ಖಾದ್ಯ ಮತ್ತು ಸಾರು ಬಡಿಸಿದ ಪ್ರಿನ್ಸ್​ ವಿಲಿಯಮ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
