ನವದೆಹಲಿ:ಈಶಾನ್ಯ ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ತನಿಖೆ ಮಾಡಿದಷ್ಟೂ ಹೊಸ ಆತಂಕಕಾರಿ ವಿಚಾರಗಳು ಹೊರಬರುತ್ತಿವೆ. ಇಂದು ಪಾಪ್ಯುಲರ್​ ಫ್ರಂಟ್ ಆಫ್​ ಇಂಡಿಯಾ (ಪಿಎಫ್​ಇ)ದ ಅಧ್ಯಕ್ಷ ಫರ್ವೇಜ್​ ಮತ್ತು ಕಾರ್ಯದರ್ಶಿ ಇಲಿಯಾಸ್​ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈಶಾನ್ಯ ದೆಹಲಿ ಹಿಂಸಾಚಾರ, ಸಿಎಎ ವಿರುದ್ಧದ ಪ್ರತಿಭಟನೆಗೆ ಹಣಕಾಸಿನ ನೆರವು ನೀಡಿದ್ದಾರೆ ಎಂಬ ಆರೋಪದಡಿ ಪಿಎಫ್​ಇ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಬಂಧನವಾದ ಬೆನ್ನಲ್ಲೇ ಒಂದು ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.ಲಷ್ಕರ್‌ ಎ ತೊಯ್ಬಾ ಸಂಸ್ಥಾಪಕ ಉಗ್ರ ಹಫೀಜ್​ ಸಯೀದ್​ನೊಂದಿಗೆ ಸಂಪರ್ಕದಲ್ಲಿರುವ ಇಂಡೋನೇಷಿಯಾ ಮೂಲದ ಎನ್​ಜಿಒವೊಂದು ದೆಹಲಿ ಹಿಂಸಾಚಾರಕ್ಕೆ ಹಣ ಸಹಾಯ ನೀಡಿದೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಸಿಎಎಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪ್ರತಿಭಟನೆಗೆ ಹಿಂಸಾಚಾರ ರೂಪ ನೀಡಲು ಗಲಭೆಕೋರರಿಗೆ ಇಂಡೋನೇಷಿಯಾ ಮೂಲದ ಎ.ಸಿ.ಟಿ.ಎಂಬ ಮುಸ್ಲಿಂ ಎನ್​ಜಿಒ 25 ಲಕ್ಷ ರೂಪಾಯಿ ಧನಸಹಾಯವನ್ನು ದೆಹಲಿಯ ಸಂಘಟನೆಯೊಂದರ ಮೂಲಕ ನೀಡುವ ಯತ್ನ ಮಾಡಿತ್ತು ಎಂಬ ಮಾಹಿತಿ ತನಿಖಾ ಮೂಲಗಳಿಂದ ಹೊರಬಿದ್ದಿದ್ದಾಗಿ ಮಾಧ್ಯಮ ವರದಿ ಮಾಡಿದೆ.
ಈ ಎ.ಸಿ.ಟಿ. ಎನ್​ಜಿಒ ಸಹಾಯದ ಹೆಸರಲ್ಲಿ ಜಗತ್ತಿನ ಅನೇಕ ಮುಸ್ಲಿಂ ದೇಶಗಳಲ್ಲಿ ಹಣಕಾಸು ಒದಗಿಸುತ್ತಿದೆ. ಬಾಂಗ್ಲಾದೇಶದ ಕಾಕ್ಸ್​ ಬಜಾರ್​ನಲ್ಲಿ ರೊಹಿಂಗ್ಯಾ ಶಿಬಿರವನ್ನೂ ಸ್ಥಾಪಿಸಿದೆ ಎಂದು ಹೇಳಲಾಗಿದೆ.
ಫೆ.23ರಿಂದ ಈಶಾನ್ಯ ದೆಹಲಿ ಸೇರಿ ಹಲವು ಪ್ರದೇಶಗಳಲ್ಲಿ ಸಿಎಎ ಪರ-ವಿರೋಧಿ ಬಣಗಳ ನಡುವೆ ಸಂಘರ್ಷ ಭುಗಿಲೆದ್ದು, ಅದು ಹಿಂಸಾಚಾರಕ್ಕೆ ತಲುಪಿತ್ತು. ಒಂದುವಾರ ನಡೆದ ಗಲಭೆಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕರು ಮನೆ, ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + six =
Remember me
