ಬಿಜ್ನೋರ್​:ದೆಹಲಿ ನಿಜಾಮುದ್ದೀನ್​ ಮರಕಜ ಮಸೀದಿಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು, ನಂತರ ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿರುವ ಜಮುವಾಲಿ ಮಸೀದಿಗೆ ತೆರಳಿ, ಅಲ್ಲಿಯೇ ವಾಸ್ತವ್ಯ ಹೂಡಿದ್ದ 8 ಇಂಡೋನೇಷಿಯನ್​ ಮುಸ್ಲಿಮರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ನಿಜಾಮುದ್ದೀನ್​ ಜಮಾತೆ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಲ್ಲಿ 8 ಮಂದಿ ಕರೊನಾದಿಂದ ಮೃತಪಟ್ಟಿದ್ದಾರೆ. ಇಂದು 24 ಜನರಲ್ಲಿ ಮತ್ತೆ ಸೋಂಕು ದೃಢಪಟ್ಟಿದೆ. ಆ ಸಭೆಯಲ್ಲಿ ಪಾಲ್ಗೊಂಡವರು ಅವರೇ ಬಂದು ತಿಳಿಸಿ. ಕ್ವಾರಂಟೈನ್​ಗೆ ಒಳಪಡಿ ಸರ್ಕಾರ ಸೂಚನೆ ನೀಡಿದ್ದರೂ ಸಹ ಅದನ್ನು ಲೆಕ್ಕಿಸದೆ ಮಸೀದಿಯ ಕಟ್ಟಡದಲ್ಲಿ ಈ ಎಂಟು ಮಂದಿ ಇದ್ದರು. ಅವರಿಗೆಲ್ಲ ಆಶ್ರಯ ನೀಡಿದ ಆರೋಪದಡಿ ಪೋಲೀಸರು ಬಿಜ್ನೋರ್​ ಮಸೀದಿಯ ಮೌಲ್ವಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಲಖನೌನ ಕೈಸರ್​ಬಾಘ್​ನಲ್ಲಿರುವ ಮಾರ್ಕ್​ಜಿ ಮಸೀದಿಯಲ್ಲಿ ಕಿರ್ಗಿಸ್ತಾನ ಮತ್ತು ಕಜಕಿಸ್ತಾನ ಸೇರಿ ಕೆಲವು ವಿದೇಶಗಳ ಮುಸ್ಲಿಮರಿಗೆ ಮಾ.13ರಿಂದಲೂ ಆಶ್ರಯ ನೀಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ವರದಿಯ ಬಳಿಕ ಪೊಲೀಸರು ಫುಲ್​ ಅಲರ್ಟ್​ ಆಗಿದ್ದಾರೆ. ಉತ್ತರ ಪ್ರದೇಶದ ಅನೇಕ ಮಸೀದಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬಾಂಗ್ಲಾದೇಶದ 17 ಮುಸ್ಲಿಮರು ಯುಪಿಯ ಮಡಿಯಾನ್​ ಮಸೀದಿಯಲ್ಲಿ ಪತ್ತೆಯಾಗಿದ್ದಾರೆ.
ಮಹಾರಾಷ್ಟ್ರದ ಅಹ್ಮದ್​ನಗರದ ಮಸೀದಿಯಲ್ಲಿ 10 ಮಂದಿ, ಬಿಹಾರದ ಪಾಟ್ನಾದ ಮಸೀದಿಯೊಂದರಲ್ಲಿ 12 ವಿದೇಶಿ ಮುಸ್ಲಿಮರು ಅಡಗಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿತ್ತು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 6 =
Remember me
