ಇಂದೋರ್​:ಮಹಾಮಾರಿ ಕರೊನಾ ವೈರಸ್​ ಅಂತ್ಯವಾಗುತ್ತಿರುವ ಸಮಯದಲ್ಲಿ ದೇಶದಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರವು ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ. ಇದೀಗ ಮಧ್ಯಪ್ರದೇಶದ ಇಂದೋರ್​ನ ಚಿಕನ್​ ಶಾಪ್​ಗಳ ಮೂರು ಚಾಕುವಿನಲ್ಲಿ ಬರ್ಡ್​ ಫ್ಲೂ ವೈರಸ್​ ಪತ್ತೆಯಾಗಿರುವುದು ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ.
ವೈರಸ್​ ಪತ್ತೆಯಾದ ಬೆನ್ನಲ್ಲೇ ಇಂದೋರ್​ನ ಆಜಾದ್​ ನಗರದ 17 ಶಾಪ್​ಗಳಲ್ಲಿ ಮಾಂಸ ಸೇರಿದಂತೆ ಜೀವಂತ ಕೋಳಿ​ ಮತ್ತು ಮೊಟ್ಟೆಯನ್ನು ವಶಕ್ಕೆ ಪಡೆಯಲಾಗಿದೆ. ಇಂದೋರ್​ನಲ್ಲಿ ಈವರೆಗೂ ಒಟ್ಟು 250 ಕಾಗೆಗಳು ಮೃತಪಟ್ಟಿವೆ. ಆಜಾದ್​ ನಗರದ ಚಿಕನ್​ ಶಾಪ್​ಗಳಲ್ಲಿ ಬಳಸುವ ಮೂರು ಚಾಕುವಿನಲ್ಲಿ ವೈರಸ್​ ಪತ್ತೆಯಾಗಿದ್ದು, ಎಚ್ಚೆತ್ತ ಕಾರ್ಪೊರೇಷನ್ ಸುಮಾರು 17 ಶಾಪ್​ಗಳಿಂದ 197 ಕೋಳಿಗಳು​ ಮತ್ತು 200 ಮೊಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿರಿ:ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?
ವಶಕ್ಕೆ ಪಡೆಯಲಾಗಿರುವ ಕೋಳಿಗಳನ್ನು ಕೊಂದು ಗುಂಡಿ ತೋಡಿ ಹೂಳಲಾಗಿದೆ. ಅಲ್ಲದೆ, ಸುಮಾರು ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಚಿಕನ್​ ಶಾಪ್​ಗಳನ್ನು ಮುಚ್ಚಿಸಿ ಸ್ಯಾಟಿಟೈಸ್​ ಮಾಡಿಸಲು ಕಾರ್ಪೊರೇಷನ್ ಸಿದ್ಧವಾಗಿದೆ.
ಇನ್ನು ಹಕ್ಕಿ ಜ್ವರ ಕಾಣಿಸಿಕೊಂಡಾಗಿನಿಂದ ಜನರಲ್ಲಿ ಉಂಟಾಗಿರುವ ಭೀತಿಯಿಂದ ಕೋಳಿ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ದಿನವೊಂದಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಭಾರತೀಯ ಜನರು ಬೇಯಿಸಿದ ಚಿಕನ್​ ಮಾತ್ರ ಸೇವಿಸುತ್ತಾರೆ. ಹೀಗಾಗಿ ಸುಮಾರು 70 ಡಿಗ್ರಿ ಸೆಲ್ಸಿಯಸ್​ನಲ್ಲಿ ಕೋಳಿ ಮಾಂಸವನ್ನು ಬೇಯಿಸುವುದರಿಂದ ಎಲ್ಲ ರೀತಿಯ ವೈರಸ್​ಗಳು ಸಾಯುತ್ತವೆ ಎಂದು ವೈದ್ಯರು ಸಲಹೆ ನೀಡಿದರು ಕೋಳಿ ಮಾಂಸ ಕೊಳ್ಳಲು ಜನರು ಮುಂದಾಗದಿರುವ ಕಾರಣ ಉದ್ಯಮಕ್ಕೆ ಪೆಟ್ಟು ಬಿದ್ದಿದೆ.
ಇದನ್ನೂ ಓದಿ:ಮರ್ಡರ್ ಆದ ವೆಲ್ಡರ್​: ರಾತ್ರಿ ಮನೆಯಲ್ಲೇ ಇದ್ದ, ಬೆಳಗ್ಗೆ ತೋಟದಲ್ಲಿ ಹೆಣವಾಗಿ ಬಿದ್ದಿದ್ದ..!
ರಾಜಸ್ಥಾನ, ಕೇರಳ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ದಾಖಲಾಗಲಾರಂಭಿಸಿದ್ದು, ಜನರು ಚಿಕನ್​ ತಿನ್ನಲು ಹಿಂದೇಟು ಹಾಕುವಂತಾಗಿದೆ. ಕರ್ನಾಟಕದಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.(ಏಜೆನ್ಸೀಸ್​)
ಕೋಳಿಗಳಲ್ಲಿ ಕಂಡುಬಂತು ಪಾಸಿಟಿವ್​: ಮಾಂಸದಂಗಡಿ ಮುಚ್ಚಲು ಆದೇಶಿಸಿದ ಮಧ್ಯಪ್ರದೇಶ ಸರ್ಕಾರ

ಹಕ್ಕಿ ಜ್ವರದ ಎಫೆಕ್ಟ್​ ಚಿಕನ್​ ಬೆಲೆಯಲ್ಲಿ ಕುಸಿತ: ಬಾಯ್ಲರ್​ ಕೋಳಿ ಕೆಜಿಗೆ 15 ರೂ.!

ಹೆಚ್ಚಾಯ್ತು ಹಕ್ಕಿ ಜ್ವರದ ಭೀತಿ! ಚಿಕನ್​ ತಿಂದ್ರೆ ನಮಗೂ ಕಾಯಿಲೆ ಬರುತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 11 =
Remember me
