ಭೋಪಾಲ್:ಮಧ್ಯಪ್ರದೇಶದ 29 ಲೋಕಸಭಾ ಸ್ಥಾನಗಳಲ್ಲಿ ಇಂದೋರ್ ಲೋಕಸಭಾ ಕ್ಷೇತ್ರವೂ ಒಂದು. ಇಂದೋರ್ ಲೋಕಸಭಾ ಕ್ಷೇತ್ರದ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದಕ್ಕೆಲ್ಲಾ ಕಾರಣ 2024ರ ಲೋಕಸಭಾ ಚುನಾವಣೆಯಲ್ಲಿ ಇಂದೋರ್​​ ಕ್ಷೇತ್ರದಲ್ಲಿ 2,02,212 ಮತಗಳನ್ನು ನೋಟಾ ಗಳಿಸಿದ್ದರೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಶಂಕರ್ ಲಾಲ್ವಾನಿ ಅವರು 11,60,627 ಮತಗಳನ್ನು ಗಳಿಸಿದ್ದಾರೆ.
ಇದನ್ನು ಓದಿ:ಜೆಡಿಎಸ್​​ ಪಕ್ಷವನ್ನು ನಾಶ ಮಾಡುತ್ತೀವಿ ಎಂದವರಿಗೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ :ಎಚ್​.ಡಿ.ಕುಮಾರಸ್ವಾಮಿ
ಅಸಲಿಗೆ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಅಕ್ಷಯಕಾಂತಿ ಕೊನೆಯ ಕ್ಷಣದಲ್ಲಿ ಬಿಜೆಪಿಗೆ ಸೇರಿ, ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ಹಾದಿಯನ್ನು ಸುಲಭಗೊಳಿಸಿದ್ದರು. ಅಕ್ಷಯಕಾಂತಿ ಅವರು ಏಪ್ರಿಲ್ 29ರಂದು ಬಿಜೆಪಿ ಸಚಿವ ಕೈಲಾಶ್ ವಿಜಯವರ್ಗಿಯಾ ಮತ್ತು ಶಾಸಕ ರಮೇಶ್ ಮೆಂಡೋಲಾ ಅವರೊಂದಿಗೆ ಇಂದೋರ್ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದರು. ನಂತರ ಕಾಂಗ್ರೆಸ್​, ಕಣದಲ್ಲಿರುವ ಯಾವುದೇ ಅಭ್ಯರ್ಥಿಗಳನ್ನು ಬೆಂಬಲಿಸದೆ, ನೋಟಾಗೆ ಮತ ಹಾಕುವಂತೆ ಜನರನ್ನು ಕೇಳುವುದರ ಜತೆಗೆ ಪ್ರಚಾರ ಕೂಡ ಮಾಡಿತು.
ನೋಟಾಗೆ ಮತ ಚಲಾಯಿಸಿದ ಇಂದೋರ್ ಮತದಾರರಿಗೆ ಕಾಂಗ್ರೆಸ್​ ಧನ್ಯವಾದ ತಿಳಿಸಿದೆ.  ಮತ ಚಲಾವಣೆ ವೇಳೆ ನೋಟಾ ಮತದಾರರಿಗೆ ಒಂದು ಕ್ಷೇತ್ರದಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಆಯ್ಕೆಯನ್ನು ನೀಡುತ್ತದೆ. ಪ್ರಸ್ತುತ ಇಂದೋರ್ ಚುನಾವಣೆ ಇಡೀ ದೇಶದಲ್ಲಿ ಚರ್ಚೆಯ ವಿಷಯವಾಗಿದೆ. ನೋಟಾ ಗರಿಷ್ಠ ಮತಗಳನ್ನು ಪಡೆದಿದ್ದು, ಎದುರಾಳಿಯೇ ಇಲ್ಲದೆ ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ದೇಶದ ಅತಿದೊಡ್ಡ ಗೆಲುವಿನತ್ತ ಸಾಗುತ್ತಿರುವುದೇ ಅದಕ್ಕೆ ಕಾರಣವಾಗಿದೆ.
ಸದ್ಯ ದೇಶದಲ್ಲೇ ಅತಿ ಹೆಚ್ಚು ನೋಟಾಕ್ಕೆ ಮತ ಪಡೆದಿರುವ ದಾಖಲೆ ಬಿಹಾರದ ಗೋಪಾಲಗಂಜ್ ಹೆಸರಿನಲ್ಲಿದೆ. 2019ರ ಚುನಾವಣೆಯಲ್ಲಿ 51,660 ನೋಟಾಕ್ಕೆ ಹೆಚ್ಚು ಮತಗಳನ್ನು ಪಡೆಯು ಮೂಲಕ ಬಿಹಾರದ ಗೋಪಾಲಗಂಜ್​ ದಾಖಲೆ ಮಾಡಿತ್ತು. ಈ ಬಾರಿ ಇಂದೋರ್​ ಗೋಪಾಲಗಂಜ್​ ದಾಖಲೆ ಮುರಿಯುತ್ತದೆ ಎನ್ನಲಾಗಿದೆ. (ಏಜೆನ್ಸೀಸ್​)
AIMIM ಭದ್ರಕೋಟೆ ಬಲಪಡಿಸಿಕೊಂಡ ಅಸಾದುದ್ದೀನ್ ಓವೈಸಿ : ಹೈದರಾಬಾದ್​ನಲ್ಲಿ 1,13,683 ಮತಗಳ ಅಂತರದಿಂದ ಮುನ್ನಡೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + eleven =
Remember me
