ಇಂದೋರ್​:ಪೊಲೀಸ್​ ದಂಪತಿಯ 12 ವರ್ಷದ ಮಗಳು ಯಾರು ಇಲ್ಲದ ವೇಳೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯ ಪ್ರದೇಶದ ಏರೋಡ್ರಮ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗು ಮುನ್ನ ಬಾಲಕಿ ಚೇರ್​ ಮೇಲೆ ನಿಂತು ತನ್ನ ಕುತ್ತಿಗೆಯನ್ನು ಹಿಡಿದುಕೊಂಡು ಸೆಲ್ಫಿ ಫೋಟೋವನ್ನು ತೆಗೆದುಕೊಂಡಿರುವುದು ತಿಳಿದುಬಂದಿದೆ.
ಮೃತ ಬಾಲಕಿಯನ್ನು ಆಯುಷಿ ಎಂದು ಗುರುತಿಸಲಾಗಿದೆ. ಆ್ಯಪ್​ವೊಂದರಲ್ಲಿ ನಿರಂತರವಾಗಿ ವಿಡಿಯೋಗಳನ್ನು ನೋಡುತ್ತಿದ್ದಳಂತೆ. ಅದರಲ್ಲೂ ಮ್ಯಾಜಿಕ್​ ರೀತಿಯ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಿದ್ದಳು ಎಂದು ಪಾಲಕರು ತಿಳಿಸಿದ್ದು, ಡೆತ್​ನೋಟ್​ ಬರೆದಿಟ್ಟಿರುವ ಆಯುಷಿ ಕೆಲ ಮಂದಿಗೆ ಕ್ಷಮೆ ಕೋರಿದ್ದಾಳೆ.
ಇದನ್ನೂ ಓದಿ:ಲವ್ವರ್​ ವಿರುದ್ಧ ದೂರು ಕೊಡಲು ಪೀಡಿಸಿದ ತಂದೆ: ಠಾಣೆಯ ಬಾತ್​ರೂಮ್​ಗೆ ಹೋದ ಹುಡುಗಿಯಿಂದ ಬಿಗ್​ ಶಾಕ್​!
ಆಯುಷಿ ಪಾಕೆಟ್​ನಲ್ಲಿ ಪತ್ತೆಯಾದ ಡೆತ್​ನೋಟ್​ನಲ್ಲಿ ಆಕೆ ಸ್ನೇಹಿತರಿಗೆ ಕ್ಷಮೆ ಕೋರಿದ್ದಾಳೆ. ನಮ್ಮ ನಡುವೆ ಏನೇ ವೈಮನಸ್ಸುಗಳಿದ್ದರೆ ಅದನ್ನು ಮರೆತುಬಿಡಿ ಎಂದಿದ್ದಾಳೆ. ಅಲ್ಲದೆ, ಇಂಗ್ಲಿಷ್​ನಲ್ಲಿ SORRY G ಎಂದು ಬರೆದಿದ್ದಾಳೆ.
ಆಯುಷಿ ತಂದೆ-ತಾಯಿ ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​ ಆಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನಿದ್ದಾನೆ. ಆತ್ಮಹತ್ಯೆ ದಿನವಾದ ಮಂಗಳವಾರ ದಂಪತಿ ಕೆಲಸಕ್ಕೆ ಹೋಗಿದ್ದರು. ಆಯುಷಿಯ ತಮ್ಮ ಮತ್ತು ತಂಗಿ ಪಕ್ಕದಲ್ಲೇ ಇದ್ದ ಅಜ್ಜಿಯ ಮನೆ ಬಳಿ ಆಟವಾಡಲು ಹೋಗಿದ್ದರು. ಈ ವೇಳೆ ಆಯುಷಿ ಮನೆಯಲ್ಲಿ ಒಬ್ಬಳೇ ಇದ್ದಳು.
ಸಾಕಷ್ಟು ಸಮಯದವರೆಗೂ ಆಯುಷಿ ಮನೆಯಿಂದ ಹೊರಬರದಿದ್ದಾಗ. ಆಕೆಯ ಸಹೋದರಿ ಮತ್ತು ಅಜ್ಜಿ ಮನೆ ಬಳಿ ಬಂದಿದ್ದಾರೆ. ಕೋಣೆಯತ್ತ ಆಯುಷಿ ಹುಡುಕಿ ಬಂದ ಅವರಿಗೆ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಗಾಬರಿಗೊಂಡ ಅಜ್ಜಿ-ಮೊಮ್ಮಗಳು ಕಣ್ಣೀರಿಡುತ್ತಲೇ ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ನೆರವಿನಿಂದ ಆಯುಷಿಯನ್ನು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ಚೀನಾ ಮಹಿಳೆಯಿಂದ ಹನಿಟ್ರ್ಯಾಪ್: ಸುಂದರಿಯ ಬಲೆಗೆ ಬಿದ್ದವರ್ಯಾರು?
ಸದ್ಯ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮೊಬೈಲ್​ನಲ್ಲಿ ಕೆಲವೊಂದು ಫೋಟೋಗಳನ್ನು ವಶಕ್ಕೆ ಪಡೆಯಲಾಗಿದೆ. ಪಾಲಕರು ವಿಚಾರಿಸಿದ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ತನಿಖಾ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!

ಅಮ್ಮನಿಗಾಗಿ ಪ್ರೀತಿ ಬಲಿಕೊಟ್ಟು ಮಾವನಮಗನ ಮದ್ವೆಯಾಗಿ ಜೀವನವೇ ನರಕವಾಗಿದೆ- ಏನು ಮಾಡಲಿ?

ವಿಶ್ವದ ಏಕಾಂಗಿ ಆನೆಗೆ ಸಿಕ್ಕಿದ್ರು ಮೂವರು ಗೆಳತಿಯರು: ಕಾವನ್​ ವರ್ತನೆ ಕಂಡು ಹುಬ್ಬೇರಿಸಿದ ಪರಿಪಾಲಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + eighteen =
Remember me
