ನವದೆಹಲಿ:ಕರೊನಾ ಲಾಕ್​ಡೌನ್ ಕಾರಣ ಸಾಲದ ಕಂತುಗಳ ಮರುಪಾವತಿಗೆ ನೀಡಲಾಗಿದ್ದ ವಿನಾಯಿತಿ ಅವಧಿಯ (ಮಾರಟೋರಿಯಂ) ಬಡ್ಡಿಯನ್ನು ಗಣನೀಯವಾಗಿ ಇಳಿಸಬೇಕೆಂದು ಉದ್ಯಮ ವಲಯ ಆಗ್ರಹಿಸಿದೆ. ಬಡ್ಡಿ ದರ ಇಳಿಕೆಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್​ಗೆ (ಆರ್​ಬಿಐ) ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಲಾಗಿದೆ. ನ್ಯಾ. ಅಶೋಕ್ ಭೂಷಣ್ ನೇತೃತ್ವದ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಕ್ರೆಡಾಯ್ನ ಮಹಾರಾಷ್ಟ್ರ ಘಟಕ, ವಿದ್ಯುತ್ ಉತ್ಪಾದಕರ ಸಂಘ, ಭಾರತೀಯ ಶಾಪಿಂಗ್ ಕೇಂದ್ರಗಳ ಸಂಘ ತಮ್ಮ ನಿಲುವನ್ನು ವಿವರಿಸಿವೆ. ಬ್ಯಾಂಕ್​ಗಳು ಠೇವಣಿಗೆ ನೀಡುವ ಬಡ್ಡಿ ದರದ ಪ್ರಮಾಣಕ್ಕೆ ಸಾಲದ ಮೇಲಿನ ಬಡ್ಡಿಯನ್ನು ಇಳಿಸಬೇಕು ಎಂದು ವಕೀಲ ಸಿ.ಎ. ಸುಂದರಂ ವಾದಿಸಿದರು. ಬಡ್ಡಿ ಮನ್ನಾ ಮಾಡದಿದ್ದರೂ ಪರವಾಗಿಲ್ಲ. ದರವನ್ನು ಗಣನೀಯವಾಗಿ ಇಳಿಸಬೇಕು. ರಿಯಲ್ ಎಸ್ಟೇಟ್ ಸಹಿತ ಎಲ್ಲ ಉದ್ಯಮ ಭಾರಿ ಸಂಕಷ್ಟದಲ್ಲಿದೆ. ಹೀಗೆ ಮುಂದುವರಿದರೆ ಸಾಲ ಎನ್​ಪಿಎ ಆಗಿ ಪರಿವರ್ತನೆಗೊಳ್ಳಲಿದೆ. ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುವವರೆಗೂ ಮಾರಟೋರಿಯಂ ವಿಸ್ತರಿಸುವಂತೆ ಮನವಿ ಮಾಡಿದರು. ಬೇರೆ ಎಲ್ಲ ಕ್ಷೇತ್ರಗಳು ತೀವ್ರ ಬಿಕ್ಕಟ್ಟಿನಲ್ಲಿರುವಾಗ ಬ್ಯಾಂಕ್​ಗಳು ಮಾತ್ರ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳಲು ಬಿಡಬಾರದು ಎಂದರು.
ಸಾಲ ಮರುರೂಪಿಸಲು ಯೋಜನೆ
ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಉದ್ದಿಮೆಗಳ ಸಾಲಗಳನ್ನು ಮರುರೂಪಿಸುವಂತೆ (ರೀಕಾಸ್ಟ್) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್​ಗಳಿಗೆ ಸಲಹೆ ಮಾಡಿದ್ದಾರೆ. ಸೆಪ್ಟೆಂಬರ್ 15ರೊಳಗೆ ಈ ಯೋಜನೆಯನ್ನು ಮಂಡಿಸುವಂತೆ ಅವರು ಗುರುವಾರ ಬ್ಯಾಂಕ್​ಗಳೊಂದಿಗೆ ನಡೆಸಿದ ಸಭೆಯಲ್ಲಿ ಸೂಚಿಸಿದ್ದಾರೆ. ಸಂತ್ರಸ್ತ ಉದ್ಯಮಗಳನ್ನು ಪಾರು ಮಾಡಲು ಇಂಥದ್ದೊಂದು ಯೋಜನೆ ಅಗತ್ಯವಿದೆ. ವ್ಯವಹಾರದ ಪುನರುಜ್ಜೀವನಕ್ಕಾಗಿ ಅರ್ಹ ಸಾಲಗಾರರನ್ನು ಗುರುತಿಸಿ ಅವರಿಗೆ ಸಾಲ ಒದಗಿಸಬೇಕು ಎಂದರು. ಎಲ್ಲ ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್​ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕರು ಸಭೆಯಲ್ಲಿದ್ದರು. ಸಾಲ ಮರುಪಾವತಿಯ ವಿನಾಯಿತಿ ಅವಧಿ ಮುಕ್ತಾಯಗೊಂಡ ತಕ್ಷಣದಲ್ಲಿ ಅರ್ಹ ಆಕಾಂಕ್ಷಿಗಳಿಗೆ ಸಾಲ ನೀಡಬೇಕೆಂದು ಸಾಲದಾತರಿಗೆ ಸೂಚಿಸಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 2 =
Remember me
