ಹೈದರಾಬಾದ್​:ಡ್ರಂಕ್​ ಆ್ಯಂಡ್​ ಡ್ರೈವ್​ ಪ್ರಕರಣವೊಂದರಲ್ಲಿ ವೇಗವಾಗಿ ಬರುತ್ತಿದ್ದ ಕಾರು ಅಡ್ಡಾದಿಡ್ಡಿಯಾಗಿ ಚಲಿಸಿ, ಹೈದರಾಬಾದಿನ ಮಧುಪುರ್​​ ಏರಿಯಾದಲ್ಲಿರುವ ಅಂಡರ್​ಪಾಸ್​ ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ಶುಕ್ರವಾರ ನಸುಕಿನ ಜಾವ ನಡೆದಿದೆ. ಭೀಕರ ಅಪಘಾತ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್​ ಸಹ ಆಗಿದೆ.
ಸೈಬರಾಬಾದ್​ ಸಂಚಾರಿ ಪೊಲೀಸರ ಪ್ರಕಾರ ಕಂಠಪೂರ್ತಿ ಕುಡಿದಿದ್ದ ಮಹಿಳೆ ಕಾರು ಚಾಲನೆ ಮಾಡುತ್ತಿದ್ದರು. ಆಕೆಯ ಪಾನಮತ್ತ ಪತಿ ಸಹ ಕಾರಿನಲ್ಲಿದ್ದರು. ವೇಗವಾಗಿ ಚಾಲನೆ ಮಾಡುವಾಗ ನಿಯಂತ್ರಣ ಕಳೆದುಕೊಂಡು ಕಾರು ಅಂಡರ್​ಪಾಸ್​ ಗೋಡೆಗೆ ಗುದ್ದಿ ಪಲ್ಟಿ ಹೊಡೆದಿದೆ. ಗಾಯಗೊಂಡಿದ್ದ ದಂಪತಿಯನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿ ಸೀಟ್​ ಬೆಲ್ಟ್​ ಧರಿಸಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ.
ಇದನ್ನೂ ಓದಿ:ಮುನಿರತ್ನ ಸೇರ್ಪಡೆ ಪ್ರಶ್ನೆಯೇ ಬಂದಿಲ್ಲ
ಈ ಬಗ್ಗೆ ಮಧುಪುರ್​ ಠಾಣಾ ಇನ್ಸ್​ಪೆಕ್ಟರ್​ ಮಾತನಾಡಿ, ದಂಪತಿ ಸಣ್ಣಪುಟ್ಟ ಗಾಯಗಳಿಂದ ಬಚಾವ್​ ಆಗಿದ್ದಾರೆ. ಇಬ್ಬರು ಸಹ ಶಮ್ಶಾಬಾದ್​ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಪಘಾತ ನಡೆದಾಗ ಅವರು ಮಧುಪುರ್​ದಿಂದ ಬರುತ್ತಿದ್ದರು. ವಾಹನವನ್ನು ವಶಕ್ಕೆ ಪಡೆದಿದ್ದೇವೆ. ಸದ್ಯ ಇಬ್ಬರು ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
మద్యం సేవించి బండి నడిపితే మీ బండే కాదు మీ జీవితం కూడా తలక్రిందులు అవ్వొచ్చు. మద్యం సేవించి బండి నడిపిన ఒక మహిళ మరియు ఆమె భర్త హాస్పిటల్లో చికిత్స పొందుతున్నారు.
IKEA అండర్ పాస్, మాదాపూర్ లో 09.10.2020, 02:11AM గంటలకు జరిగిన ప్రమాదం.pic.twitter.com/t3diO8lF3r
— CYBERABAD TRAFFIC POLICE సైబరాబాద్ ట్రాఫిక్ పోలీస్ (@CYBTRAFFIC)October 10, 2020

ದಂಪತಿ ವಿರುದ್ಧ ಮಧುಪುರ್​ ಠಾಣೆಯಲ್ಲಿ ಡ್ರಂಕ್​ ಆ್ಯಂಡ್​ ಡ್ರೈವ್​ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​)
ವೈರಲ್​ ಆಗಿರೋ ರಿಕ್ಷಾ ಸವಾರನ ಮನಕಲಕುವ ವಿಡಿಯೋ ಭಾರತದಲ್ಲ: ನಿಜಾಂಶವೇ ಬೇರೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 6 =
Remember me
