ಭೋಪಾಲ್​:ಇಲ್ಲೊಬ್ಬಳ ಚಿಕಿತ್ಸೆಯಿಂದಾಗಿ ಮೂರು ತಿಂಗಳ ಮಗು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಂತಾಗಿದೆ. ಒತ್ತಾಯಪೂರ್ವಕವಾಗಿ ಇಂಥದ್ದೊಂದು ಚಿಕಿತ್ಸೆ ನೀಡಿದ್ದ ಮನೆಯವರು ಈಗ ಮಗುವನ್ನು ಕಳೆದುಕೊಂಡು ಪರಿತಪಿಸುವಂತಾಗಿದೆ. ಮಧ್ಯಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ.
ಇಲ್ಲಿನ ಶಹದೊಲ್ ಜಿಲ್ಲೆಯ ರೋಶ್ನಿ ಕಾಲ್ ಎಂಬಾಕೆಯ ಮೂರು ತಿಂಗಳ ಪುತ್ರಿ ಸಾವಿಗೀಡಾದ ಮಗು. ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡುವುದಾಗಿ ಮಹಿಳೆಯೊಬ್ಬಳು ಅನುಸರಿಸಿದ ವಿಧಾನ ಕೊನೆಗೆ ಮಗುವನ್ನೇ ಬಲಿ ಪಡೆದಂತಾಗಿದೆ.
ನಾನು ಈ ಚಿಕಿತ್ಸೆಗೆ ಆಕ್ಷೇಪ ವ್ಯಕ್ತಪಡಿಸಿದ್ದೆ. ಆದರೆ ಮನೆಯವರ ಒತ್ತಾಯಕ್ಕಾಗಿ ಒಪ್ಪಿಕೊಂಡೆ. ಮಗುವಿನ ಅನಾರೋಗ್ಯ ಗುಣವಾಗಲು ಇದೊಂದೇ ಮಾರ್ಗ ಎಂದು ಮನೆಯವರು ಹೇಳಿದ್ದರಿಂದ ಈ ಚಿಕಿತ್ಸೆ ಕೊಡಿಸಿದೆ ಎಂದ ತಾಯಿ, ಏನು ನಡೆಯಿತು ಎಂಬುದನ್ನು ಹೇಳಿಕೊಂಡಿದ್ದಾರೆ.
ಮಗು ನ್ಯುಮೋನಿಯಾದಿಂದ ಬಳಲುತ್ತಿತ್ತು, ಮನೆಯವರ ಸೂಚನೆಯಂತೆ ಈ ಮಹಿಳೆಯ ಬಳಿ ಚಿಕಿತ್ಸೆಗೆ ಬಂದಿದ್ದೆ. ಈಕೆ ಬಿಸಿಯಾದ ತಂತಿಯಿಂದ ಮಗುವಿನ ಹೊಟ್ಟೆ 51 ಸಲ ಚುಚ್ಚಿದ್ದು, ಬಳಿಕ ಮಗುವಿನ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತ್ತು. ಕೂಡಲೇ ಮಗುವನ್ನು ಶಹದೊಲ್​ ಮೆಡಿಕಲ್ ಕಾಲೇಜಿಗೆ ದಾಖಲಿಸಿದ್ದೆ.
ಮಧ್ಯಪ್ರದೇಶದ ಹಲವೆಡೆ ನ್ಯುಮೋನಿಯಾದಿಂದ ಬಳಲುವ ಮಕ್ಕಳಿಗೆ ಬಿಸಿಯಾದ ತಂತಿ ಚುಚ್ಚಿ ಚಿಕಿತ್ಸೆ ನೀಡುವ ಪದ್ಧತಿ ಇದೆ. ಅದಾಗ್ಯೂ ಮಗು ಸಾವಿಗೀಡಾಗುವ ರೀತಿಯಲ್ಲಿ ಈ ರೀತಿ ಚಿಕಿತ್ಸೆ ನೀಡಿದ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
‘ಉತ್ತಮ ವಿಲನ್’​: ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ; ಸಾಕುತಂದೆಯ ಕುತ್ತಿಗೆಗೇ ಲಾಂಗ್ ಇಟ್ಟು ಬೆದರಿಸಿದ್ದ!

ಗೆಳೆಯನ ಕೊಂದು ಶವ ಎಸೆಯುವಾಗ ತಾನೂ ಪ್ರಪಾತಕ್ಕೆ ಬಿದ್ದು ಹೆಣವಾದ!

ಪೊಲೀಸ್ ಸಬ್​ ಇನ್​ಸ್ಪೆಕ್ಟರ್​​ ಕಿವಿಯನ್ನೇ ಕಚ್ಚಿದ ಪಾನಮತ್ತ ಬೈಕ್ ಸವಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 9 =
Remember me
