ನವದೆಹಲಿ:ದೇಶದ ಸಗಟು ಹಣದುಬ್ಬರ ಪ್ರಮಾಣ ಮಾರ್ಚ್ ತಿಂಗಳಲ್ಲಿ 8 ವರ್ಷದ ಗರಿಷ್ಠ ಮಟ್ಟಕ್ಕೆ ಅಂದರೆ ಶೇಕಡ 7.39ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ದತ್ತಾಂಶ ಹೇಳಿದೆ.
ಜನವರಿ ತಿಂಗಳಲ್ಲಿ ಸಗಟು ಹಣದುಬ್ಬರ ಪ್ರಮಾಣ ಶೇಕಡ 2.51 ಇದ್ದದ್ದು, ಫೆಬ್ರವರಿಯಲ್ಲಿ ಶೇಕಡ 4.17ಕ್ಕೆ ತಲುಪಿತ್ತು. ಮಾರ್ಚ್ ತಿಂಗಳಲ್ಲಿ ಇದು ಶೇಕಡ 7.39ಕ್ಕೆ ಏರಿಕೆಯಾಗಿದೆ. ಹೋಲ್​ಸೇಲ್ ಪ್ರೖೆಸ್ ಇಂಡೆಕ್ಸ್ (ಡಬ್ಲ್ಯುಪಿಐ) ಜನವರಿ ತಿಂಗಳಲ್ಲಿ ಶೇಕಡ 2.03 ಎಂದು ಅಂದಾಜಿಸಲಾಗಿತ್ತು. ಬಳಿಕ ಇದನ್ನು ಪರಿಷ್ಕರಿಸಲಾಗಿದ್ದು ಶೇಕಡ 2.15ಕ್ಕೆ ತಲುಪಿದೆ.
ಕಳೆದ ವರ್ಷದ ಮಾರ್ಚ್​ಗೆ ಹೋಲಿಸಿದರೆ ಈ ವರ್ಷ ಮಾರ್ಚ್ ತಿಂಗಳಲ್ಲಿ ಕಚ್ಚಾತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಲೋಹ ಉತ್ಪನ್ನಗಳ ದರ ಭಾರಿ ಏರಿಕೆಯಾಗಿದೆ. ಆಹಾರ ವಸ್ತುಗಳ ವಿಭಾಗವು ಮಾರ್ಚ್ ತಿಂಗಳಲ್ಲಿ ಶೇಕಡ 3.24 ಏರಿಕೆ ದಾಖಲಿಸಿದೆ. ಕಳೆದ ತಿಂಗಳು ಬೇಳೆ ಕಾಳು ದರ ಶೇಕಡ 13.14, ಹಣ್ಣು ಹಂಪಲು ದರ ಶೇಕಡ 16.33 ಏರಿಕೆ ಕಂಡಿವೆ. ಇಂಧನ ಮತ್ತು ವಿದ್ಯುತ್ ಕ್ಷೇತ್ರದಲ್ಲೂ ಮಾರ್ಚ್ ತಿಂಗಳಲ್ಲಿ 10.25 % ಬೆಲೆ ಏರಿಕೆಯಾಗಿದೆ. ಎಲ್​ಪಿಜಿ ದರ ಶೇಕಡ 10.30, ಪೆಟ್ರೋಲ್ ದರ ಶೇಕಡ 18.48 ಹೆಚ್ಚಳವಾಗಿದೆ.
ಸೆನ್ಸೆಕ್ಸ್ 260 ಅಂಶ ಏರಿಕೆ
ಭಾರತದ ಷೇರುಪೇಟೆಯಲ್ಲಿ ಗುರುವಾರದ ವಹಿವಾಟಿನಲಿ ಸೆನ್ಸೆಕ್ಸ್ 260 ಅಂಶ, ನಿಫ್ಟಿ 77 ಅಂಶ ಏರಿಕೆಯಾಗಿದೆ. ಎಚ್​ಡಿಎಫ್​ಸಿ, ಎಚ್​ಡಿಎಫ್​ಸಿ ಬ್ಯಾಂಕ್, ಟಿಸಿಎಸ್, ಐಸಿಐಸಿಐ ಬ್ಯಾಂಕ್ ಷೇರುಗಳು ಲಾಭಾಂಶ ದಾಖಲಿಸಿದ ಕಾರಣ ಈ ಏರಿಕೆ ದಾಖಲಾಗಿವೆ. ಸೆನ್ಸೆಕ್ಸ್ 48, 803.68 ಅಂಶ ತಲುಪಿದ್ದರೆ, ನಿಫ್ಟಿ 14,581.45 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ.
ರೂಪಾಯಿ ದರ ಹೆಚ್ಚಳ
ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ದರ ಸತತ ಆರನೇ ಅವಧಿಯ ವಹಿವಾಟಿ ನಲ್ಲೂ ಕುಸಿತ ದಾಖಲಿಸಿತ್ತು. ಆದರೆ, ಗುರುವಾರದ ವಹಿವಾಟಿನಲ್ಲಿ 12 ಪೈಸೆ ಏರಿ -ಠಿ; 74.93 ತಲುಪಿದೆ. ಆರ್​ಬಿಐ ಹಸ್ತಕ್ಷೇಪ ಮತ್ತು ಯುಎಸ್ ಡಾಲರ್ ನಾಲ್ಕು ವಾರದ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡದ್ದೇ ಈ ಏರಿಕೆ ಕಾರಣ ಎಂಬುದು ಪರಿಣತರ ಅಭಿಪ್ರಾಯ.
ಚಿನ್ನ, ಬೆಳ್ಳಿ ದರ ಹೆಚ್ಚಳ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರ 10 ಗ್ರಾಂಗೆ 159 ರೂಪಾಯಿ ಏರಿಕೆಯಾಗಿ 46,301 ರೂಪಾಯಿ ತಲುಪಿದೆ. ಬೆಳ್ಳಿಯ ದರ ಒಂದು ಕಿಲೋಗೆ 206 ರೂಪಾಯಿ ಹೆಚ್ಚಳವಾಗಿದ್ದು 67,168 ರೂಪಾಯಿಗೆ ಏರಿದೆ.
ನೌಕಾ ಸೇನೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಂದ ಅಸಭ್ಯ ನೃತ್ಯ ಮಾಡಿಸಿದ ಅಧಿಕಾರಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 7 =
Remember me
