ಇತ್ತೀಚೆಗೆ ಯಾವುದೇ ವಿಚಾರಗಲೇ ಆಗ್ಲಿ ಕ್ಷಣಾರ್ಧದಲ್ಲೇ ಸೋಶಿಯಲ್​ ಮೀಡಿಯಾದಲ್ಲಿ ಕಾಣ ಸಿಗುತ್ತೆ. ಅದರಲ್ಲೂ ಸೋಶಿಯಲ್​ ಮೀಡಿಯಾದಲ್ಲಿ ಜನರು ಫಾಲೋವರ್ಸ್​​​ ಪಡೆಯೋಕೆ ಏನಾದರು ವಿಭಿನ್ನವಾದುದನ್ನ ಮಾಡುತ್ತಲೇ ಇರ್ತಾರೆ.
ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಇನ್​ಫ್ಲುಯೆನ್ಸರ್​​​​​ ಆಗಿರುವ ಯುವತಿಯೊಬ್ಬಳು ಮ್ಯಾಟ್ರಿಮೋನಿಯಲ್​ ಸೈಟ್​​ನಲ್ಲಿ ಮಾಡಿರುವ ಪೋಸ್ಟ್​​​ ಒಂದು ಎಕ್ಸ್​​(ಟ್ವಿಟ್ಟರ್​​) ಖಾತೆಯಲ್ಲಿ ದೊಡ್ಡ ಮಟ್ಟಿನಲ್ಲಿ ವೈರಲ್​​ ಆಗಿದೆ.
ರಿಯಾ ಎಂಬ ಮಹಿಳೆ ಮ್ಯಾಟ್ರಿಮೋನಿಯಲ್ ಜಾಹೀರಾತನ್ನು ಹಂಚಿಕೊಳ್ಳುವ ಮೂಲಕ ತನ್ನ ಜೀವನ ಸಂಗಾತಿಯಲ್ಲಿ ಯಾವ ಗುಣ ಅಥವಾ ಆತ ಏನೆಲ್ಲಾ ಕಲಿತಿರಬೇಕು ಎಂಬ ವಿಚಾರಗಳನ್ನ ಹಂಚಿಕೊಂಡಿದ್ದು, ಸದ್ಯ ಯುವತಿಯ ಪೋಸ್ಟ್​​​ಗೆ ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ.
ಹಾಗಿದ್ರೆ ಯುವತಿಯ ಪೋಸ್ಟ್​​ನಲ್ಲಿ ಏನಿದೆ?ರಿಯಾ ಕೊಟ್ಟ ಮ್ಯಾಟ್ರಿಮೋನಿಯಲ್​ ಜಾಹೀರಾತಿನ ಪೋಟೋವನ್ನ ಆಯುಷಿ ಗುಪ್ತಾ ಎಂಬ ಮಹಿಳೆ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ನಾನು ಮದುವೆಯಾಗುಲು ಬಯಸುವ ಯುವಕ ನನ್ನ ಜತೆಯಲ್ಲಿ ರೀಲ್ಸ್​​ ಮಾಡಬೇಕು. ನಾವಿಬ್ಬರೂ ಜತೆಯಾಗಿ ಮದುವೆಯ ಬಳಿಕ ರೀಲ್ಸ್​​ ಮಾಡುವ ಇಚ್ಛೆಸುತ್ತೇನೆ. ಅಲ್ಲದೆ ಪ್ರೀಮಿಯರ್​ ಪ್ರೊ ಎಡಿಟಿಂಗ್​​ ಮಾಡೋದು ಆತನಿಗೆ ತಿಳಿದಿರಬೇಕು ಎಂದು ಜಾಹೀರಾತಿನಲ್ಲಿ ಬರೆದಿದ್ದಾಳೆ. ಜತೆಗೆ ಆಕೆಯ ಇ-ಮೇಲ್​ ಐಡಿಯನ್ನೂ ಹಾಕಿ ಆಸಕ್ತರು ಇದಕ್ಕೆ ಮೇಲ್​ ಮಾಡಿ ಎಂದು ಉಲ್ಲೇಖಿಸಿದ್ದಾರೆ.
ಸದ್ಯ ರಿಯಾ ಜಾಹೀರಾತಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಯಿಸಿದ್ದು, ನೀನು ಜೀವನ ಸಂಗಾತಿಯನ್ನು ಹುಡುಕುವುದಕ್ಕಿಂತ ವಿಡಿಯೋ ಎಡಿಟರ್​​ ಮತ್ತು ಕ್ಯಾಂಪೇನ್​​ ಮ್ಯಾನೇಜರ್​​ ಅನ್ನೇ ಹುಡುಕಿಕೋ ಎಂದು ಕಾಮೆಂಟ್​​ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 16 =
Remember me
