ನವದೆಹಲಿ:ಭಾರತೀಯ ಶಿಕ್ಷಕರಿಗೆ ತರಬೇತಿ ನೀಡಲು ಮತ್ತು ಶಿಣ ವ್ಯವಸ್ಥೆ ಸುಧಾರಿಸಲು ನಾವು ವರ್ಷಕ್ಕೆ 1 ಬಿಲಿಯನ್​ ಅಮೆರಿಕನ್​ ಡಾಲರ್​ಗಳಷ್ಟು ಹಣ ಖರ್ಚು ಮಾಡಬೇಕು ಎಂದು ಇನ್ಫೋಸಿಸ್​ ಸಂಸ್ಥಾಪಕ ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಇನ್ಫೋಸಿಸ್​ ಸೈನ್ಸ್​ ಫೌಂಡೇಷನ್​ ಆಯೋಜಿಸಿದ್ದ ಇನ್ಫೋಸಿಸ್​ ಪೆಜ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಎರಡು ದಶಕಗಳಲ್ಲಿ 20 ಶತಕೋಟಿ ಡಾಲರ್​ ಹಣವನ್ನು ವಿನಿಯೋಗಿಸಿಕೊಂಡು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕರಿಗೆ ತರಬೇತಿ ನೀಡಲು 2,500 ಸಂಸ್ಥೆಗಳನ್ನು ರಚಿಸಬೇಕು. ಇದಕ್ಕಾಗಿ ವಿದೇಶ ಹಾಗೂ ಭಾರತದಿಂದ 10,000 ಯಶಸ್ವಿ ಶಿಕರನ್ನು ಆಹ್ವಾನಿಸಬೇಕು.
ಹೊಸ ಶಿಕ್ಷಣ ನೀತಿ (ಎನ್​ಇಪಿ) ಮೂಲಕ ಶೈಣಿಕ ಸುಧಾರಣೆ ವೇಗಗೊಳಿಸುವ ಒಂದು ಮಾರ್ಗವೆಂದರೆ ಅಭಿವೃದ್ಧಿ ಹೊಂದಿದ ದೇಶಗಳಿಂದ ಮತ್ತು ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್​, ಗಣಿತದಲ್ಲಿ ಉನ್ನತ ಸಾಧನೆ ಮಾಡಿದ 10,000 ನಿವೃತ್ತ ಶಿಕ್ಷಕರನ್ನು 2,500 ಶಿಕ್ಷಕರಿಗೆ ತರಬೇತಿ ನೀಡುವ ಸಂಸ್ಥೆಗಳಿಗೆ ಆಹ್ವಾನಿಸಬೇಕು ಎಂದು ಹೇಳಿದ್ದಾರೆ.
ಈ ಮೂಲಕ ಪ್ರತಿ ವರ್ಷ 2,50,000 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕರಿಗೆ ತರಬೇತಿ ನೀಡಲು ಸಾಧ್ಯವಿದೆ. ತರಬೇತಿ ಪಡೆದ ಭಾರತೀಯ ಶಿಕರು 5 ವರ್ಷಗಳ ಅವಧಿಯಲ್ಲಿ ಸ್ವತಃ ತರಬೇತುದಾರರಾಗಬಹುದು ಎಂದೂ ಸಲಹೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + thirteen =
Remember me
