ನವದೆಹಲಿ:ಭಾರತದ ಪ್ರಮುಖ ಬ್ಯಾಂಕ್​ಗಳ ಸುಮಾರು 5 ಲಕ್ಷ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳ ಮಾಹಿತಿಗಳನ್ನು ಡಾರ್ಕ್ ವೆಬ್​ಸೈಟ್​ಗಳಲ್ಲಿ ಮಾರಾಟಕ್ಕಿಡಲಾಗಿದೆ ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಡಾರ್ಕ್ ವೆಬ್​ಸೈಟ್​ಗಳಲ್ಲಿ ಜನಪ್ರಿಯವಾದ ಜೋಕರ್ ಸ್ಟಾ್ಯಶ್ ವೆಬ್​ನಲ್ಲಿ ಪ್ರತಿ ಕಾರ್ಡ್ ಮಾಹಿತಿಗೆ 9 ಡಾಲರ್ ಬೆಲೆ ನಿಗದಿ ಮಾಡುವ ಮೂಲಕ ಸುಮಾರು 4,60,000 ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್​ಗಳ ಮಾಹಿತಿಯನ್ನು ಮಾರಾಟಕ್ಕಿಡಲಾಗಿದೆ ಎಂದು ಸಿಂಗಾಪುರ ಮೂಲದ ಸೈಬರ್ ಭದ್ರತಾ ಸಂಸ್ಥೆ ಗ್ರೂಪ್-ಐಬಿ ಎಚ್ಚರಿಸಿದೆ. ಈ ಕಾರ್ಡ್​ಗಳ ಮಾಹಿತಿಯಲ್ಲಿ ಶೇ. 98ಕ್ಕಿಂತ ಹೆಚ್ಚು ಭಾರತೀಯ ಬ್ಯಾಂಕ್​ಗಳಿಗೆ ಸೇರಿದವು ಎಂದು ತಿಳಿಸಿದೆ.
ಜೋಕರ್ ಸ್ಟಾ್ಯಶ್ ವೆಬ್​ನಲ್ಲಿ ಫೆ. 5ರಂದು ಈ ಡೇಟಾವನ್ನು ಅಪ್ಲೋಡ್ ಮಾಡಲಾಗಿದ್ದು, ಇದನ್ನು ಯಾರು, ಎಲ್ಲಿಂದ ಅಪ್ಲೋಡ್ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಕಾರ್ಡಗಳ ಮಾರಾಟದ ಒಟ್ಟು ಮೌಲ್ಯ ಸುಮಾರು 4.2 ಮಿಲಿಯನ್ ಡಾಲರ್​ಗಿಂತ ಹೆಚ್ಚಾಗಲಿದೆ ಎಂದು ಗ್ರೂಪ್-ಐಬಿ ಅಂದಾಜಿಸಿದೆ. ಈ ಹಿನ್ನೆಲೆ ಗ್ರೂಪ್-ಐಬಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಕ್ಕೆ (ಸಿಇಆರ್​ಟಿ-ಇನ್) ಮಾಹಿತಿ ರವಾನಿಸಿದೆ.
ಸಿಂಗಾಪುರದ ಗ್ರೂಪ್-ಐಬಿ ಭಾರತೀಯ ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಬಯಲು ಮಾಡಿರುವ ಎರಡನೇ ದಾಖಲೆ ಇದಾಗಿದ್ದು, ಈ ಮೊದಲು ಕಳೆದ ವರ್ಷ ಅಕ್ಟೋಬರ್​ನಲ್ಲಿ ಭಾರತೀಯ ಬ್ಯಾಂಕುಗಳ ಗ್ರಾಹಕರ 1.3 ಮಿಲಿಯನ್​ಗಿಂತಲೂ ಹೆಚ್ಚು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​ಗಳ ದಾಖಲೆಗಳನ್ನು ಹೊಂದಿರುವ ಬೃಹತ್ ಡೇಟಾಬೇಸ್​ನ್ನು ಡಾರ್ಕ್ ವೆಬ್​ಸೈಟ್​ನಲ್ಲಿ ಗ್ರೂಪ್-ಐಬಿ ಪತ್ತೆ ಮಾಡಿತ್ತು.
ಮಾರಾಟಕ್ಕಿಟ್ಟಿರುವ ಮಾಹಿತಿಯಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳ ಡಿಜಿಟ್ ಸಂಖ್ಯೆ, ಕಾರ್ಡ್ ಅವಧಿ ಮುಕ್ತಾಯದ ದಿನಾಂಕ, ಸಿವಿವಿ/ಸಿವಿಸಿ ಸಂಕೇತಗಳು, ಕಾರ್ಡ್ ಮಾಲೀಕರ ಪೂರ್ಣ ಹೆಸರು, ಇ-ಮೇಲ್, ಫೋನ್ ನಂಬರ್, ವಿಳಾಸ ಇನ್ನಿತರ ಮಾಹಿತಿಗಳಿವೆ ಎಂದು ತಿಳಿದುಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + seven =
Remember me
