ನವದೆಹಲಿ: ಕೋವಿಡ್​ 19 ಸೋಂಕಿನ ಸಂಕಷ್ಟಕ್ಕೆ ಒಳಗಾಗಿ ಅಮೆರಿಕದಲ್ಲಿ ಸಿಲುಕಿದ್ದ 200 ಉದ್ಯೋಗಿಗಳು ಮತ್ತು ಅವರ ಕುಟುಂಬದವರನ್ನು ಪ್ರತಿಷ್ಠಿತ ಐಟಿ ಕಂಪನಿ ಇನ್ಪೋಸಿಸ್ ಭಾರತಕ್ಕೆ ಕರೆಯಿಸಿಕೊಂಡಿದೆ. ಇದಕ್ಕಾಗಿ ವಿಶೇಷ ಚಾರ್ಟೆಡ್ ವಿಮಾನದ ವ್ಯವಸ್ಥೆ ಮಾಡಿದ ಕಂಪನಿ, ಉದ್ಯೋಗಿಗಳ ಸುರಕ್ಷಿತ ವಾಪಸಾತಿಯನ್ನು ಖಾತರಿಗೊಳಿಸಿದೆ.
ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೋದಿಂದ ಇನ್ಪೋಸಿಸ್​ನ ನೂರಾರು ಉದ್ಯೋಗಿಗಳು ಹಾಗೂ ಅವರ ಕುಟುಂಸ್ಥರನ್ನು ಹೊತ್ತು ವಿಶೇಷ ವಿಮಾನ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ತಲುಪಿದೆ ಎಂದು ಇನ್ಪೋಸಿಸ್​ನ ಸಿಪಿಜಿ ಮತ್ತು ಲಾಜಿಸ್ಟಿಕ್ಸ್​ನ ಅಸೋಸಿಯೇಟ್ ಉಪಾಧ್ಯಕ್ಷ ಸಮೀರ್ ಗೋಸಾವಿ ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್​ 19 ಚಿಕಿತ್ಸೆಯಲ್ಲಿ ಸಿದ್ಧ ಔಷಧದ ಕಾರ್ಯಕ್ಷಮತೆ ಬಗ್ಗೆ ಪರಿಶೀಲಿಸಿ- ಕೇಂದ್ರಕ್ಕೆ ಕೋರ್ಟ್​ ನಿರ್ದೇಶನ
ಈ ವಿಮಾನದಲ್ಲಿ ಇನ್ಪೋಸಿಸ್ ಉದ್ಯೋಗಿಗಳ ಜತೆಗೆ 206 ಅನ್ಯ ಪ್ರಯಾಣಿಕರು ಕೂಡ ಇದ್ದರು. ಇವರೆಲ್ಲ ಕರೊನಾ ಬಿಕ್ಕಟ್ಟಿನಿಂದಾಗಿ ಅಮೆರಿಕದಲ್ಲಿ ಸಿಲುಕಿದ್ದರು. ಇನ್ಪೋಸಿಸ್​ನ ಉದ್ಯೋಗಿಗಳಲ್ಲಿ ಕೆಲವರು ಅಲ್ಲೇ ಕೆಲಸ ನಿರ್ವಹಿಸುವವರಾಗಿದ್ದು, ಇನ್ನೂ ಕೆಲವರು ಪ್ರಾಜೆಕ್ಟ್ ಹಾಗೂ ಸಭೆಗಳಿಗಾಗಿ ಅಮೆರಿಕಕ್ಕೆ ತೆರಳಿ ಅಲ್ಲಿ ಸಿಲುಕಿಕೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. 2020ರ ಮಾರ್ಚ್​ಗೆ ಅಂತ್ಯವಾದ ಹಣಕಾಸು ವರ್ಷದಲ್ಲಿ ಇನ್ಪೋಸಿಸ್​ಗೆ ಶೇಕಡಾ 60 ರಷ್ಟು ಆದಾಯ ಅಮೆರಿಕದಿಂದಲೇ ಬಂದಿದೆ. (ಏಜೆನ್ಸೀಸ್)
ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್​ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
