ಬೆಂಗಳೂರು:ದಿಗ್ಗಜ ಐಟಿ ಕಂಪನಿಗಳ ಪೈಕಿ ಮುಂಚೂಣಿಯಲ್ಲಿರುವ ಸಂಸ್ಥೆಯಾದ ಇನ್​ಫೊಸಿಸ್ ಸಂಸ್ಥಾಪಕ ಭಾರತದ ಉದ್ಯೋಗ ಸಂಸ್ಕೃತಿ ಬದಲಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮಾತ್ರವಲ್ಲ ಭಾರತದ ವರ್ಕ್ ಕಲ್ಚರ್ ಬದಲಿಸುವ ನಿಟ್ಟಿನಲ್ಲಿ ಸಲಹೆಯೊಂದನ್ನೂ ನೀಡಿದ್ದಾರೆ.
ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಅವರು, ರಾಷ್ಟ್ರನಿರ್ಮಾಣ, ತಂತ್ರಜ್ಞಾನ ಮುಂತಾದ ವಿಷಯಗಳ ಕುರಿತು ಮಾತನಾಡಿದರು. ಕೆಲಸದ ವಿಚಾರದಲ್ಲಿ ಪರಿಶ್ರಮ, ಶಿಸ್ತಿಗೆ ಹೆಸರಾಗಿರುವ ನಾರಾಯಣಮೂರ್ತಿ, ಭಾರತದ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದರು.
ಕಳೆದ ಎರಡು ಮೂರು ದಶಕಗಳಲ್ಲಿ ಆರ್ಥಿಕವಾಗಿ ಗಣನೀಯ ಪ್ರಗತಿ ಕಂಡ ರಾಷ್ಟ್ರಗಳ ಜತೆ ಭಾರತ ಪೈಪೋಟಿ ನಡೆಸಬೇಕಾದರೆ ಭಾರತದ ವರ್ಕ್ ಕಲ್ಚರ್ ಬದಲಾಗಬೇಕು. ಇಲ್ಲಿನ ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದರು.
ಇದನ್ನೂ ಓದಿ:ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ
ಅತ್ಯಂತ ಶಿಸ್ತಿನ ಹಾಗೂ ಅತ್ಯಂತ ಪರಿಶ್ರಮ ಪಡುವ ಉದ್ಯೋಗಿಗಳು ಅಗತ್ಯ ಎಂದ ಅವರು, ಸರ್ಕಾರ ಹಾಗೂ ಅಧಿಕಾರಿಗಳ ಭ್ರಷ್ಟಾಚಾರ ಕೆಲಸವನ್ನು ನಿಧಾನಗೊಳಿಸುತ್ತಿದೆ ಎಂದರು. ಭಾರತದ ಕೆಲಸದ ಉತ್ಪಾದಕತೆ ಜಗತ್ತಿನಲ್ಲೇ ಅತಿ ಕಡಿಮೆ. ಕೆಲಸದ ಉತ್ಪಾದಕತೆ ಹೆಚ್ಚಿಸಿಕೊಳ್ಳುವ ಜತೆಗೆ ಭ್ರಷ್ಟಾಚಾರ ಮತ್ತಿತರ ಪ್ರಗತಿಯನ್ನು ನಿಧಾನಗೊಳಿಸುವ ಸರ್ಕಾರದ ಕ್ರಮಗಳನ್ನು ನಿವಾರಿಸಿಕೊಳ್ಳದಿದ್ದರೆ ಮುಂದುವರಿದ ರಾಷ್ಟ್ರಗಳ ಜತೆ ಭಾರತ ಸ್ಪರ್ಧಿಸುವುದು ಕಷ್ಟವಾಗಲಿದೆ ಎಂದರು.
ಇದು ನನ್ನ ದೇಶ, ಈ ದೇಶಕ್ಕಾಗಿ ನಾನು ವಾರಕ್ಕೆ 70 ಗಂಟೆಗಳ ಕೆಲಸ ಮಾಡಬೇಕು ಎಂಬ ಮನೋಭಾವ ಯುವಜನತೆ ಹೊಂದಬೇಕು. ಎರಡನೇ ವಿಶ್ವಯುದ್ಧದ ಬಳಿಕ ಜಪಾನೀಯರು ಮತ್ತು ಜರ್ಮನ್ನರು ಕೂಡ ಇದನ್ನೇ ಮಾಡಿದ್ದು ಎಂದ ಮೂರ್ತಿ, ಕೆಲವು ವರ್ಷಗಳ ಕಾಲ ಆ ದೇಶಗಳವರು ಹೆಚ್ಚು ಕೆಲಸ ಮಾಡಿದರು ಎಂದರು.
ಹುಲಿ ಉಗುರು: ಏನಿದರ ಧರಿಸುವಿಕೆ ಹಿಂದಿನ ಅಸಲಿಯತ್ತು? ನಕಲಿ ಶೋಕಿಯೋ, ಬಚಾವಾಗೋ ಕರಾಮತ್ತೋ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − eleven =
Remember me
