ನವದೆಹಲಿ:ಇನ್ಫೋಸಿಸ್ ಜಿಎಸ್​ಟಿಯು 2017ರಿಂದ 2022ರವರೆಗೆ ಐದು ವರ್ಷದಲ್ಲಿ ಬರೋಬ್ಬರಿ 32,403.46 ಕೋಟಿ ರೂ ಮೊತ್ತದ ಐಜಿಎಸ್​ಟಿ ಪಾವತಿಸಬೇಕು ಎಂದು ಬೆಂಗಳೂರಿನ ಜಿಎಸ್​ಟಿ ಅಧಿಕಾರಿಗಳು ನೋಟೀಸ್ ಕೊಟ್ಟಿದ್ದಾರೆ.
ಇನ್ಫೋಸಿಸ್ ವಿದೇಶಗಳಲ್ಲಿ ಬ್ರ್ಯಾಂಚ್ ಆಫೀಸ್​ಗಳನ್ನು ಸ್ಥಾಪಿಸಿದೆ. ಆ ಶಾಖಾ ಕಚೇರಿಗಳಿಂದ ಪಡೆದ ಸರಬರಾಜುಗಳಿಗೆ ಸಂಸ್ಥೆ ಹಣ ಪಾವತಿಸಿದೆ. 2017ರ ಜುಲೈನಿಂದ ಆರಂಭವಾಗಿ 2021-22ರ ಹಣಕಾಸು ವರ್ಷದವರೆಗೆ ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಅಡಿಯಲ್ಲಿ ಇನ್ಫೋಸಿಸ್ ಸಂಸ್ಥೆ 32,403.46 ಕೋಟಿ ರೂ ಐಜಿಎಸ್​ಟಿ ಪಾವತಿಸಬೇಕಿತ್ತು… ಇನ್ಫೋಸಿಸ್ ಸಂಸ್ಥೆ ತನ್ನ ಎಕ್ಸ್​ಪೋರ್ಟ್ ಇನ್ವಾಯ್ಸ್ ಅಡಿಯಲ್ಲಿ ಆ ವೆಚ್ಚಗಳನ್ನು ತೋರಿಸಿದೆ ಎಂದು ಕರ್ನಾಟಕ ರಾಜ್ಯ ಜಿಎಸ್​ಟಿ ಪ್ರಾಧಿಕಾರ ತನ್ನ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್​ನಲ್ಲಿ ತಿಳಿಸಿದೆ.
‘ವಿದೇಶಗಳಲ್ಲಿನ ಶಾಖಾ ಕಚೇರಿಗಳಿಂದ ಆದ ವೆಚ್ಚಕ್ಕೆ 32,403 ಕೋಟಿ ರೂ ಮೊತ್ತದ ಜಿಎಸ್​ಟಿ ಪಾವತಿ ಇದೆ ಎಂದು ಜಿಎಸ್​ಟಿ ಅಧಿಕಾರಿಗಳು ಪೂರ್ವಬಾವಿ ಶೋಕಾಸ್ ನೋಟೀಸ್ ನೀಡಿದ್ದಾರೆ.
ಕುತೂಹಲ ಎಂದರೆ ಬಾಕಿ ಇದೆ ಎನ್ನಲಾದ ಇಷ್ಟು ಜಿಎಸ್​ಟಿ ಹಣವು ಇನ್ಫೋಸಿಸ್​ನ ಐದು ವರ್ಷದ ಲಾಭಕ್ಕೆ ಸಮ ಎನ್ನಲಾಗಿದೆ.ಇನ್ಫೋಸಿಸ್ ಸಂಸ್ಥೆ ಜಿಎಸ್​ಟಿ ಪ್ರಾಧಿಕಾರದ ಈ ಟ್ಯಾಕ್ಸ್ ನೋಟೀಸ್ ಬಗ್ಗೆ ಪ್ರತಿಕ್ರಿಯಿಸಿದ್ದು, ತಾನು ಯಾವುದೇ ತೆರಿಗೆ ನಿಯಮ ಉಲ್ಲಂಘಿಸಿಲ್ಲ, ಅಥವಾ ಬಾಕಿ ಉಳಿಸಿಕೊಂಡಿಲ್ಲ ಎಂದು ಷೇರು ವಿನಿಯಮ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್​ನಲ್ಲಿ ತಿಳಿಸಿದೆ.
ನಿಯಮಗಳ ಪ್ರಕಾರ ಈ ವೆಚ್ಚಗಳಿಗೆ ಜಿಎಸ್​ಟಿ ಅನ್ವಯ ಆಗಲ್ಲ. ಜಿಎಸ್​ಟಿ ಕೌನ್ಸಿಲ್​ನ ಶಿಫಾರಸುಗಳ ಮೇಲೆ ಸಿಬಿಡಿಟಿ ಮತ್ತು ಸುಂಕ ಇಲಾಖೆ 2024ರ ಜೂನ್ 26ರಂದು ಹೊರಡಿಸಿದ ಸುತ್ತೋಲೆ ಪ್ರಕಾರ, ಭಾರತೀಯ ಸಂಸ್ಥೆಯ ವಿದೇಶೀ ಶಾಖೆಗಳಿಂದ ನೀಡಲಾದ ಸೇವೆಗಳಿಗೆ ಜಿಎಸ್​ಟಿ ಅನ್ವಯ ಆಗಲ್ಲ ಎಂದಿದೆ’ ಎಂದು ಇನ್ಫೋಸಿಸ್​ನ ಕಂಪನಿ ಸೆಕ್ರೆಟರಿ ಮಣಿಕಂಠ ತಿಳಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × four =
Remember me
