ನರೇಂದ್ರ ಮೋದಿನೇತೃತ್ವದ ಎನ್​ಡಿಎ ಸರ್ಕಾರ ಕಳೆದ ಒಂಬತ್ತು ವರ್ಷಗಳಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಚಾಲನೆ ನೀಡಿದೆ. ಮತ್ತು ಇದು ಭಾರತದ ಅಭಿವೃದ್ಧಿಯ ವೇಗಕ್ಕೆ ಇಂಬು ನಿಚೕಡುತ್ತಿರುವುದನ್ನು ಜಾಗತಿಕ ನಾಯಕರೂ ಪ್ರಶಂಸಿಸಿದ್ದಾರೆ. ಆದರೆ, ದೊಡ್ಡ ಪ್ರಮಾಣದಲ್ಲಿ ಕೈಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಇನ್ನಷ್ಟು ಅನುದಾನ ಅತ್ಯಗತ್ಯ. ರಾಷ್ಟ್ರೀಯ ಹೆದ್ದಾರಿ, ಮೆಟ್ರೋ, ವಂದೇಭಾರತ್ ಇತ್ಯಾದಿ ಯೋಜನೆಗಳು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿವೆ ಎಂಬ ಕುತೂಹಲಕ್ಕೆ ಈ ಬಾರಿಯ ಬಜೆಟ್​ನಲ್ಲಿ ಉತ್ತರ ಸಿಗಬಹುದೆ?
ದೇಶದ ಪ್ರಗತಿ ಮತ್ತು ಉದೊ್ಯೕಗಾವಕಾಶದಲ್ಲಿ ಮೂಲಸೌಕರ್ಯ ಮಹತ್ವದ ಪಾತ್ರ ವಹಿಸಲಿರುವುದರಿಂದ ಈ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ. ಮೂಲಸೌಕರ್ಯ ಕ್ಷೇತ್ರಕ್ಕೆ 2023-24ರ ಬಜೆಟ್​ನಲ್ಲಿ 10 ಲಕ್ಷ ಕೋಟಿ ರೂಪಾಯಿ ಮೀಸಲು ಇರಿಸಿದ್ದು, ಶೇಕಡ 33ರಷ್ಟು ಅನುದಾನವನ್ನು ಹೆಚ್ಚಿಸಲಾಗಿದೆ. ಮಾತ್ರವಲ್ಲದೆ ಇದು 2019-20ರಲ್ಲಿನ ಅನುದಾನಕ್ಕೆ ಹೋಲಿಸಿದರೆ ಮೂರುಪಟ್ಟು ಅಧಿಕ. ಹಾಗಾಗಿ, 2024-25ನೇ ಸಾಲಿನಲ್ಲಿ ಮೂಲಸೌಕರ್ಯ ಕ್ಷೇತ್ರಕ್ಕೆ ಭರಪೂರ ಅನುದಾನ ಸಿಗಲಿದೆಯೇ ಎಂಬ ನಿರೀಕ್ಷೆ ಗರಿಗೆದರಿದೆ. ದೇಶದಲ್ಲಿ ಈಗ ರಾಷ್ಟ್ರೀಯ ಹೆದ್ದಾರಿಯ ಉದ್ದ 56 ಲಕ್ಷ ಕಿಲೋಮೀಟರ್​ಗಳಷ್ಟಿದ್ದು, ಇದನ್ನು ಇನ್ನಷ್ಟು ವಿಸ್ತರಿಸಲು ಸರ್ಕಾರ ಮುಂದಾಗಿದೆ ಮತ್ತು ದೇಶದ ಮಹಾನಗರಗಳನ್ನು ಎಲ್ಲ ದಿಕ್ಕುಗಳಿಂದ ಬೆಸೆಯುವ ಯೋಜನೆ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮುಂದುವರಿಕೆಗೆ ಈ ಬಜೆಟ್​ನಲ್ಲಿ ಸರ್ಕಾರ ಸೂಕ್ತ ಅನುದಾನ ನೀಡಿದರೆ ಮಾತ್ರ, ನಿಗದಿತ ಕಾಲಾವಧಿಯಲ್ಲಿ ಈ ಯೋಜನೆಗಳು ಪೂರ್ಣಗೊಳ್ಳಲು ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.
ರೈಲ್ವೆಗೆ ಅಚ್ಛೇ ದಿನ್: ರೈಲ್ವೆ ಇಲಾಖೆಯ ಸ್ವರೂಪವೇ ಕಳೆದ ಕೆಲ ವರ್ಷಗಳಲ್ಲಿ ಬದಲಾಗಿದ್ದು, ಪ್ರಯಾಣಿಕಸ್ನೇಹಿ ಕ್ರಮಗಳನ್ನು ಮತ್ತು ಆದಾಯ ಹೆಚ್ಚಿಸುವಂಥ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ವರ್ಷದಿಂದ ವರ್ಷಕ್ಕೆ ರೈಲ್ವೆ ಇಲಾಖೆಗೆ ನೀಡುತ್ತಿರುವ ಅನುದಾನವನ್ನು ಕೂಡ ಹೆಚ್ಚಿಸಿಕೊಂಡು ಬರಲಾಗಿದೆ. 2023-24ನೇ ಸಾಲಿನ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ರೈಲ್ವೆಯ ವೆಚ್ಚಕ್ಕೆ (ಕ್ಯಾಪಿಟಲ್ ಔಟ್​ಲೇ) 2.40 ಲಕ್ಷ ಕೋಟಿ ರೂಪಾಯಿ ಮೀಸಲು ಇಟ್ಟಿದ್ದರು, ಇದು ಈವರೆಗಿನ ರೈಲ್ವೆ ಬಜೆಟ್​ನಲ್ಲಿ ಅತ್ಯಧಿಕ ಮೊತ್ತವಾಗಿತ್ತು ಎಂಬುದು ಗಮನಾರ್ಹ. 2.40 ಲಕ್ಷ ಕೋಟಿ ರೂ.ಗಳಲ್ಲಿ 75 ಸಾವಿರ ಕೋಟಿ ರೂ.ಹಣವನ್ನು ಸರಕು ಸಾಗಣೆ ವ್ಯವಸ್ಥೆ ಸುಧಾರಣೆಗೆ ಕೊಡಲಾಯಿತು
2023ನೇ ವರ್ಷದಲ್ಲಿ 34 ವಂದೇಭಾರತ್ ರೈಲುಗಳಿಗೆ ಚಾಲನೆ ನೀಡಲಾಗಿದ್ದು. 2024ರಲ್ಲಿ 70 ವಂದೇ ಭಾರತ್ ರೈಲುಗಳು ಹಳಿಗೆ ಬರಲಿವೆ. ಈ ಪೈಕಿ 60 ರೈಲುಗಳು ನವೆಂಬರ್ 15ರೊಳಗೆ ಸಂಚಾರ ಅರಂಭಿಸಲಿವೆ. ಈ ಯೋಜನೆಗೆ ಈಗಾಗಲೇ ಅನುದಾನ ಮೀಸಲಿಡಲಾಗಿರುವುದರಿಂದ, ಚುನಾವಣೆ ವರ್ಷದಲ್ಲಿ ವಂದೇಭಾರತ್​ಗೆ ಯಾವುದೆ ತೊಂದರೆ ಎದುರಾಗದು. ಈ ರೈಲುಗಳು ಸಮರ್ಪಕ ಹಳಿಗಳ ಮೇಲೆ ಗಂಟೆಗೆ 160 ಕಿಮೀ ವೇಗದವರೆಗೂ ಓಡಬಲ್ಲವು. ಹಾಗೆಯೇ ಈ ರೈಲಿನಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸೌಕರ್ಯಗಳಿವೆ. 2024ರಲ್ಲಿ ರೈಲ್ವೆ ಸುಧಾರಣೆಯ ಮತ್ತಷ್ಟು ಹೆಜ್ಜೆ ಕ್ರಮಿಸಲಿದ್ದು, ಹೆಚ್ಚಿನ ಪ್ರಯಾಣಿಕರನ್ನೂ ಆಕರ್ಷಿಸಲಿದೆ. 2023ರಲ್ಲಿ ಮೂಲಸೌಕರ್ಯ ಹಣಕಾಸು ಸಚಿವಾಯ ಸ್ಥಾಪನೆ ಮಾಡಲಾಗಿದ್ದು, ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಮತ್ತು ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವ (ಪಿಪಿಪಿ)ಕ್ಕೆ ಒತ್ತು ನೀಡಲಾಗಿದೆ.
ಖಾಸಗಿ ಹೂಡಿಕೆ ಅವಕಾಶ ಹೆಚ್ಚಳ:ಸಾರ್ವಜನಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿರುವ ರೈಲ್ವೆ, ರಸ್ತೆಗಳು, ನಗರ ಮೂಲ ಸೌಕರ್ಯಗಳು ಹಾಗೂ ವಿದ್ಯುತ್ ಸೇರಿ ಮೂಲಸೌಕರ್ಯದಲ್ಲಿ ಹೆಚ್ಚಿನ ಖಾಸಗಿ ಹೂಡಿಕೆಗಾಗಿ ಎಲ್ಲ ಪಾಲುದಾರರಿಗೆ ಹೊಸದಾಗಿ ರಚಿಸಲಾಗಿರುವ ಮೂಲಸೌಕರ್ಯ ಹಣಕಾಸು ಸಚಿವಾಲಯ ಸಹಕಾರ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಈ ಬಜೆಟ್​ನಲ್ಲಿ ಖಾಸಗಿ ಹೂಡಿಕೆಯ ಅವಕಾಶವನ್ನು ಹೆಚ್ಚಿಸುವ ಮಾರ್ಗಗಳಿಗೆ ಸರ್ಕಾರ ಇನ್ನಷ್ಟು ಆದ್ಯತೆ ನೀಡಲಿದೆ.
2014ರವರೆಗೆ ದೇಶದಲ್ಲಿನ ವಿಮಾನ ನಿಲ್ದಾಣಗಳ ಸಂಖ್ಯೆ 74 ಇದ್ದಿದ್ದು, 2024ರಲ್ಲಿ 150ರ ಗಡಿ ದಾಟಿದೆ. ಈ ಮೂಲಕ ಭಾರತ ಪ್ರಪಂಚದ ಮೂರನೇ ಅತಿದೊಡ್ಡ ವೈಮಾನಿಕ ಮಾರುಕಟ್ಟೆ ಎನಿಸಿಕೊಂಡಿದೆ. ಪ್ರಸಕ್ತ, ವಿಮಾನ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ ಇರುವ ಕಡೆ, ಸಕಾಲದಲ್ಲಿ ಆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕಿದೆ.
ಪಿಎಂ ಗತಿಶಕ್ತಿ:ಸಾರಿಗೆ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಸಮಗ್ರ ಮೂಲಭೂತ ಸೌಕರ್ಯ ಅಭಿವೃದ್ಧಿ ಉದ್ದೇಶದ ರಾಷ್ಟ್ರೀಯ ಮಾಸ್ಟರ್ ಪ್ಲಾ್ಯನ್- ಪಿಎಂ ಗತಿಶಕ್ತಿಗೆ ಪ್ರಧಾನಿ ನರೇಂದ್ರ ಮೋದಿ 2021ರ ಅಕ್ಟೋಬರ್ 13ರಂದು ಚಾಲನೆ ನೀಡಿದ್ದರು. 500 ಕೋಟಿ ರೂ. ಮೇಲ್ಪಟ್ಟ ಮೂಲಸಾರಿಗೆ ಸಂಪರ್ಕ ಮತ್ತು ಮೂಲಭೂತ ಸೌಕರ್ಯ ಯೋಜನೆಗಳನ್ನು ನೆಟ್​ವರ್ಕ್ ಪ್ಲಾ್ಯನಿಂಗ್ ಗ್ರೂಪ್ (ಎನ್​ಪಿಜಿ) ಅಡಿ ರಚಿಸಲಾದ ಪಿಎಂ ಗತಿ ಶಕ್ತಿ ಉಪಕ್ರಮದಡಿಯೇ ಕೈಗೊಳ್ಳಲಾಗುತ್ತಿದೆ. ಇದು ಸಂಪರ್ಕಜಾಲ ವಿಸ್ತರಣೆಗೆ ಪೂರಕವಾಗಿ ಪರಿಣಮಿಸಿದೆ. ಪ್ರಯಾಣಿಕರ ಸಂಚಾರ ಹಾಗೂ ಸರಕು ಸಾಗಣೆಯನ್ನು ಕಡಿಮೆ ವೆಚ್ಚದಲ್ಲಿ ಕಲ್ಪಿಸಲು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಯೋಜನೆ ರೂಪಿಸಲಾಗಿದ್ದು, ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯಕ್ಕೆ 2023-24ರ ಬಜೆಟ್​ನಲ್ಲಿ 1,709 ಸಾವಿರ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು.
ಹೆಚ್ಚಲಿದೆ ಅನುದಾನ:ಆರ್ಥಿಕ ಅಭಿವೃದ್ಧಿಯ ವೇಗ ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ, ಹೆದ್ದಾರಿಗಳ ನಿರ್ವಣ, ಈಗಾಗಲೇ ಇರುವ ಹೆದ್ದಾರಿಗಳ ವಿಸ್ತರಣೆ, ರೈಲ್ವೆ ಜಾಲಗಳ ನಿರ್ವಣ, ಹೊಸ ರೈಲು ಸೇವೆಗಳಿಗೆ ಚಾಲನೆ, ದ್ವಿತೀಯ ಹಂತದ ನಗರಗಳಿಗೆ ವಾಯುಯಾನ ಸೇವೆ, ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಿಸುವುದು, ಈ ಎಲ್ಲ ಕ್ರಮಗಳ ಮೂಲಕ ಉದ್ಯೋಗಸೃಷ್ಟಿಗೆ ಆದ್ಯತೆ ನೀಡಲು ಸರ್ಕಾರ ಮೂಲಸೌಕರ್ಯ ಕ್ಷೇತ್ರಕ್ಕೆ 2024-25ರ ಬಜೆಟ್​ನಲ್ಲೂ ಸೂಕ್ತ ಅನುದಾನ ನೀಡಲಿದೆ ಎನ್ನುತ್ತಾರೆ ವಿತ್ತೀಯ ತಜ್ಞರು. ಅಲ್ಲದೆ, ಭಾರತ ಜಾಗತಿಕವಾಗಿ ಐದನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವುದರಿಂದ, ಈ ಸಾಧನೆ ಕಾಯ್ದುಕೊಳ್ಳಲು, ಆರ್ಥಿಕ ಚಟುವಟಿಕೆ ಹೆಚ್ಚಿಸಲು ಮೂಲಸೌಕರ್ಯ ಕ್ಷೇತ್ರಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಕಳೆದ ಬಜೆಟ್​ಗಳನ್ನು ಗಮನಿಸಿದರೆ ಸರ್ಕಾರ ಇದನ್ನು ಪರಿಗಣಿಸಲಿದೆ, ಇನ್ಪ್ರಾ ಯೋಜನೆಗಳಿಗೆ ಒತ್ತು ನೀಡಲಿದೆ ಎನ್ನುತ್ತಿವೆ ಮೂಲಗಳು. ಅಲ್ಲದೆ, ಸಾಮಾಜಿಕ ಕಲ್ಯಾಣ ಯೋಜನೆಗಳಿಗೂ ಈ ಬಾರಿ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ.
ಮಧ್ಯಂತರ ಬಜೆಟ್ ಎಂದರೆ…:ಐದು ವರ್ಷಗಳ ಪೂರ್ಣಾವಧಿಯ ಕೇಂದ್ರ ಸರ್ಕಾರ ತನ್ನ ಕೊನೆಯ ಬಜೆಟ್ ಅನ್ನು ಸಾಮಾನ್ಯವಾಗಿ ಮಧ್ಯಂತರ ಬಜೆಟ್ ಎಂದು ಕರೆಯುತ್ತದೆ. ಚಾಲ್ತಿಯಲ್ಲಿರುವ ಹಣಕಾಸು ವರ್ಷದ ಆರಂಭಕ್ಕೆ ಅಥವಾ ಅಂತ್ಯಕ್ಕೆ ಸಾರ್ವತ್ರಿಕ ಚುನಾವಣೆ ಬಂದರೆ ಆಗ ಮಂಡಿಸುವ ಬಜೆಟ್ ಪೂರ್ಣಕಾಲಿಕ ಬಜೆಟ್ ಆಗಿರುವುದಿಲ್ಲ. ಕೆಲವೇ ತಿಂಗಳ ಅವಧಿಯ ಖರ್ಚುವೆಚ್ಚಗಳನ್ನು ನಿರ್ವಹಿಸುವ ಮುಂಗಡಪತ್ರವಾಗಿರುತ್ತದೆ. ಇದೇ ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.
ವಾಯುಯಾನಕ್ಕೆ ಹೊಸ ರೆಕ್ಕೆಮೂಲಸೌಕರ್ಯದ ವಿಷಯದಲ್ಲಿ ದೇಶವನ್ನು ಎತ್ತರಕ್ಕೇರಿಸುವ ನಿಟ್ಟಿನಲ್ಲಿ ವಾಯುಯಾನಕ್ಕೆ ಹೊಸ ರೆಕ್ಕೆ ಜೋಡಿಸಲು ಮಹತ್ವದ ಕ್ರಮಗಳು ಅನುಷ್ಠಾನಕ್ಕೆ ಬಂದಿವೆ. ಎರಡನೇ ಹಂತದ ನಗರಗಳಲ್ಲೂ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿವೆ. 50 ವಿಮಾನನಿಲ್ದಾಣ, ಹೆಲಿಪೋರ್ಟ್, ಜಲದ ಮೇಲಿನ ವಿಮಾನನಿಲ್ದಾಣ ಹಾಗೂ ವಿಮಾನ ಲ್ಯಾಂಡಿಂಗ್​ಗೆ ಅನುಕೂಲವಾಗುವಂಥ ಅತ್ಯಾಧುನಿಕ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ದೇಶದ ಪ್ರಾದೇಶಿಕ ವಾಯುಸಂರ್ಪಕವನ್ನು ಶಕ್ತಿಯುತವಾಗಿಸಲು ಸರ್ಕಾರ ಮುಂದಾಗಿದೆ. ಕಳೆದ ಕೆಲವು ವರ್ಷಗಳಿಂದ ದೇಶದ ಪ್ರಾದೇಶಿಕ ವಾಯು ಸಂಪರ್ಕವನ್ನು ಉಡಾನ್ ಯೋಜನೆ ಮೂಲಕ ಸುಧಾರಣೆಗೊಳಿಸಲಾಗುತ್ತಿದೆ. ಈ ವರ್ಷವೂ ಉಡಾನ್ ಮೂಲಕ ಸಂಪರ್ಕಜಾಲ ವಿಸ್ತರಣೆಯಾಗಲಿದೆ.
ಈಕೆ ಒಂದೇ ಒಂದು Instagram ಪೋಸ್ಟ್​ನಿಂದ ಸಂಪಾದಿಸುವ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

ಭಾರತದ ಕಿರಿಯರಿಗೆ ಹ್ಯಾಟ್ರಿಕ್ ಗೆಲುವು: ಅರ್ಶಿನ್ ಕುಲಕರ್ಣಿ ಶತಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
