ನವದೆಹಲಿ:ಬಾಯ್​ಫ್ರೆಂಡ್​ ಜತೆ ನಿರಂತರವಾಗಿ ಮಸೇಜ್​ ಮಾಡುತ್ತಿದ್ದ ಸಹೋದರಿಯನ್ನು ನೋಡಿ ಸಿಟ್ಟಿಗೆದ್ದ ಅಪ್ರಾಪ್ತ ತಮ್ಮ ಆಕೆಗೆ ಗುಂಡು ಹಾರಿಸಿರುವ ಘಟನೆ ಈಶಾನ್ಯ ದೆಹಲಿಯ ವೆಲ್​ಕಮ್​ ಏರಿಯಾದಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. 17 ವರ್ಷದ ಆರೋಪಿ ಸಹೋದರ ಗುಂಡು ಹಾರಿಸಿ, ಇದೀಗ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಚಿಕ್ಕಮ್ಮ ಎಂದು ಹೇಳಿ ಮಗುವನ್ನು ಕದ್ದಳು; ತಂಗಿಯ ಡಿಸ್​ಚಾರ್ಜ್​ಗೆ ಬಂದು ಸಿಕ್ಕಿಬಿದ್ದಳು…
ಈ ಘಟನೆ ಗುರುವಾರ ನಡೆದಿದೆ. ಪದೇಪದೆ ಎಚ್ಚರಿಕೆ ನೀಡಿದರೂ ಸಹೋದರಿ ಬಾಯ್ ಫ್ರೆಂಡ್​ ಜತೆ ಚಾಟಿಂಗ್​ನಲ್ಲಿ ಬಿಜಿಯಾಗಿರುವುದನ್ನು ತಮ್ಮ ಗಮನಿಸಿದ್ದ. ಗುರುವಾರ ಮತ್ತೆ ಎಚ್ಚರಿಕೆ ನೀಡಿದ್ದು, ಇಬ್ಬರ ನಡುವಿನ ವಾಗ್ವಾದಕ್ಕೆ ಕಾರಣವಾಗಿತ್ತು. ಬಳಿಕ ನಿಯಂತ್ರಣ ಕಳೆದುಕೊಂಡ ತಮ್ಮ ದೇಶಿ ನಿರ್ಮಿತ ಪಿಸ್ತೂಲ್​ನಿಂದ ಸಹೋದರಿಯ ಹೊಟ್ಟೆಗೆ ಗುಂಡು ಹಾರಿಸಿ, ಎಸ್ಕೇಪ್​ ಆಗಿದ್ದಾನೆ.
ಪೊಲೀಸ್​ ಮೂಲಗಳ ಪ್ರಕಾರ ಆರೋಪಿ ಆತನ ಸ್ನೇಹಿತನೊಬ್ಬನಿಂದ ಅಕ್ರಮ ಶಸ್ತ್ರಾಸ್ತ್ರ ಪಡೆದುಕೊಂಡಿರುವುದು ತಿಳಿದುಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿರುವುದಾಗಿ ಹಿರಿಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ. ಪರಾರಿಯಾಗಿರುವ ಆರೋಪಿ ತಮ್ಮನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಚಿತ್ರನಟಿ ಉಮಾಶ್ರೀ ಕಾರು ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 9 =
Remember me
