ಇಡುಕ್ಕಿ:ಕೆಲ ದಿನಗಳ ಹಿಂದೆ ಸ್ಪೋಟಕ ತುಂಬಿದ ಪೈನಾಪಲ್​ ತಿಂದು ಗರ್ಭಿಣಿ ಆನೆ ಮೃತಪಟ್ಟಿದ್ದ ಪ್ರಕರಣ ಇಡೀ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೇ, ಆನೆ ಸಾವಿನ ಬಗ್ಗೆ ಎಲ್ಲರೂ ಮರುಕ ವ್ಯಕ್ತಪಡಿಸಿದ್ದರು. ಇದೀಗ ಅದೇ ಪೈನಾಪಲ್​ನಿಂದಲೇ ಆನೆ ಮರಿಯ ಜೀವವೊಂದು ಉಳಿದಿದೆ.
ಹೌದು, ಕೇರಳದ ಇಡುಕ್ಕಿ ಜಿಲ್ಲೆಯ ಕಾಂಥಾಲ್ಲೂರ್​ ಪಂಚಾಯಿತಿಯ ಶಿವಬಂತಿ ಗ್ರಾಮ ಸಮೀಪದ ಅರಣ್ಯದಲ್ಲಿ ಆನೆಯ ಮರಿಯೊಂದು ತನ್ನ ಕಾಲು ಮುರಿದುಕೊಂಡು ಗಂಭೀರವಾಗಿ ಗಾಯಗೊಂಡಿತ್ತು. ಜೂನ್​ 5 ರಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮಾಹಿತಿ ತಿಳಿದು ಪಶುವೈದ್ಯಾಧಿಕಾರಿ ಡಾ ನಿಶಾ ರಾಚೆಲ್​ ಅವರನ್ನು ಸ್ಥಳಕ್ಕೆ ಆಗಮಿಸಿದ ಪರೀಕ್ಷಿಸಿದ್ದರು.
ಕ್ಷಣ ಕ್ಷಣದ ಮಾಹಿತಿ ಹಾಗೂ ಕುತೂಹಲಕಾರಿ ಸುದ್ದಿಗಳಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ
ಈ ವೇಳೆ ಪೈನಾಪಲ್​ನಲ್ಲಿ ಔಷಧ ತುಂಬಿ ಆನೆಗೆ ನೀಡಲಾಗಿತ್ತು. ಇದೀಗ ಕಾಂಥಾಲ್ಲೂರ್​ ಅರಣ್ಯ ವಲಯದ 9 ಸಿಬ್ಬಂದಿಯನ್ನು 24 ಗಂಟೆ ಆನೆಯ ಮೇಲೆ ನಿಗಾವಹಿಸಲು ನಿಯೋಜಿಸಲಾಗಿದೆ. ಸ್ಥಳೀಯರಿಂದ ಹಾಗೂ ಇತರೆ ಆನೆಗಳು ಗುಂಪಿನಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.ಇದನ್ನೂ ಓದಿ:VIDEO| ಚೀನಾ ಮೇಲಿನ ಕೋಪಕ್ಕೆ ಕಿಮ್​ ಜಾಂಗ್​ ಉನ್​ ಪ್ರತಿಕೃತಿ ದಹಿಸಿ ಆಕ್ರೋಶ…!
ಸದ್ಯ ಆನೆಯನ್ನು ಚಂದ್ರಮಂಡಲಂ ಏರಿಯಾದಲ್ಲಿ ಸುರಕ್ಷಿತವಾಗಿ ನೋಡಿಕೊಳ್ಳಲಾಗುತ್ತಿದೆ. ನೇರವಾಗಿ ಔಷಧ ಕೊಡಲು ಸಾಧ್ಯವಾಗದಿದ್ದರಿಂದ ಪೈನಾಪಲ್​ನಲ್ಲಿ ತುಂಬಿ ಆನೆಗೆ ನೀಡಲಾಗಿತ್ತು. ಬಲ ಕಾಲಿಗೆ ಗಂಭೀರವಾದ ಗಾಯವಾಗಿದ್ದರಿಂದ ಸರಿಯಾಗಿ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಚೇತರಿಸಿಕೊಳ್ಳುತ್ತಿದ್ದು, ಈಗ ಯಾರ ಸಹಾಯವೂ ಇಲ್ಲದೇ ಎದ್ದು ನಿಲ್ಲುತ್ತದೆ ಎಂದು ಕಾಂಥಾಲ್ಲೂರ್​ ವಲಯ ಅರಣ್ಯಾಧಿಕಾರಿ ಎಸ್​. ಸಂದೀಪ್​ ತಿಳಿಸಿದ್ದಾರೆ.(ಏಜೆನ್ಸೀಸ್​)
ಗರ್ಭಿಣಿ ಆನೆ ಕೊಂದ ಪ್ರಕರಣದಲ್ಲಿ ಮೂವರ ಬಂಧನ: ಮರಣೋತ್ತರ ವರದಿಯಲ್ಲಿ ನೋವಿನ ಸಂಗತಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 1 =
Remember me
