ಹಾಥರಸ್: ಉತ್ತರ ಪ್ರದೇಶದ ಹಾಥರಸ್​ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರನ್ನು ಮಾತನಾಡಿಸಲು ಹೋಗಿದ್ದ ಆಮ್​ ಆದ್ಮಿ ಪಕ್ಷದ ಮುಖಂಡರಿಗೆ ಮುಖಭಂಗ ಆಗಿದೆ.
ಪಕ್ಷದ ದೆಹಲಿ ಮುಖಂಡರಾದ ರಾಖಿ ಬಿರ್ಲಾ ಹಾಗೂ ಅಜಯ್​ ದತ್ ಅವರೊಂದಿಗೆ ಆಪ್​ ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್​ ಮಾಧ್ಯಮದವರ ಜತೆ ಮಾತನಾಡುತ್ತಿದ್ದಾಗ ಅವರ ಮುಖಕ್ಕೆ ಕಿಡಿಗೇಡಿಗಳು ಶಾಯಿ ಎಸೆದಿದ್ದಾರೆ.
ಸಂತ್ರಸ್ತೆಯ ಮನೆಗೆ ನಮ್ಮನ್ನು ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯಲಾಗಿತ್ತು. ಆದರೆ ನಾವು ವಾಪಸ್​ ಬರುವಾಗ ಈ ರೀತಿ ಆಗಿದೆ. ಹಾಥರಸ್​ನಲ್ಲಿ ಇದು ಹೇಡಿತನದ ಕೆಲಸ ಎಂದಿರುವ ಆಪ್​ ಮುಖಂಡರು, ಯೋಗಿ ಸರ್ಕಾರ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಸಂತ್ರಸ್ತೆಯ ಪರ ದನಿ ಎತ್ತುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಮಸಿ ಎರಚುವ ಮೂಲಕ ಯೋಗಿ ಆದಿತ್ಯನಾಥ್​ ಸರ್ಕಾರ ಹೇಡಿತನವನ್ನು ಸಾಬೀತುಪಡಿಸಿದೆ ಎಂದು ಆಪ್​ ವಕ್ತಾರ ರಾಘವ್ ಚಡ್ಡಾ ಹೇಳಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ದುರ್ವರ್ತನೆಗೆ ಇದೇ ಸಾಕ್ಷಿ ಎಂದು ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಟೀಕಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × one =
Remember me
