ಆನೇಕಲ್​:ಮಳೆ, ಬಿಸಿಲು ಹಾಗೂ ಪ್ರದೇಶದ ಹವಾಮಾನ ಹೇಗೆ ಇದ್ದರೂ, 100 ವರ್ಷಗಳವರೆಗೆ ಶವಗಳನ್ನು ಕೆಡದಂತೆ ಇಡಬಹುದಾದ ನೂತನ ತಂತ್ರಜ್ಞಾನ ಆವಿಷ್ಕರಿಸಲಾಗಿದೆ. ವಿಶ್ವದಲ್ಲಿ ಲಭ್ಯವಿರುವ ತಂತ್ರಜ್ಞಾನಗಳ ಪೈಕಿ ಇದು ಅತ್ಯಂತ ವಿಶಿಷ್ಟವಾಗಿದೆ.
ಫೋರೆನ್ಸಿಕ್​ ಮೆಡಿಸಿನ್​ ಮತ್ತು ಟಾಕ್ಸಿಕಾಲಜಿ ಇಲಾಖೆಯ ಸಹಕಾರದಲ್ಲಿ ಆಕ್ಸ್​ಫರ್ಡ್​ ವೈದ್ಯಕಿಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ. ದಿನೇಶ್​ ರಾವ್​ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದು, ಇದರ ಪ್ರಯೋಗ ಯಶಸ್ವಿಯಾಗಿದೆ. ತಾಲೂಕಿನ ಯಡವನಹಳ್ಳಿ ಸಮೀಪದ ಆಕ್ಸ್​ರ್ಡ್​ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ದಿನೇಶ್​ ರಾವ್​ ಪ್ರಯೋಗ ಯಶಸ್ವಿಯಾಗಿರುವ ಮಾಹಿತಿ ಹಂಚಿಕೊಂಡರು.
ಪ್ರಾಣಿಗಳ ಅವಶೇಷಗಳ ಮೇಲೆ ಪ್ರಯೋಗ: ಮುಂಬಾಲ್ಮಿಂಗ್​ ಎಂಬ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು 2003ರಿಂದಲೂ ಪ್ರಯೋಗ ಮಾಡಲಾಗುತ್ತಿತ್ತು. ಪ್ರಾಣಿ, ಪ, ಹಾವು, ಕಪ್ಪೆಗಳ ಕಳೇಬರಗಳ ಮೇಲೆ ಪ್ರಯೋಗ ಮಾಡಲಾಗುತ್ತಿತ್ತು. ಸಣ್ಣವನಿದ್ದಾಗ ನನಗೆ ಶವಗಳನ್ನು ಹೂಳುವುದು, ಸುಡುವುದನ್ನು ನೋಡುವಾಗ ನೋವಾಗುತ್ತಿತ್ತು. ಆದ್ದರಿಂದ, ಶವವನ್ನು ಕೆಡದಂತೆ ರಸುವ ಪ್ರಯೋಗ ಕೈಗೊಳ್ಳುವ ನಿರ್ಧಾರವನ್ನು ಅಂದೇ ಕೈಗೊಂಡಿದ್ದೆ. 2018ರಲ್ಲಿ ಮನುಷ್ಯನ ಮೇಲೆ ಪ್ರಯೋಗ ಮಾಡಿದಾಗ ಯಶಸ್ಸು ಲಭಿಸಿತ್ತು. 2019ರಲ್ಲಿ ನವಜಾತ ಶಿಶುವಿನ ಶವದ ಮೇಲೂ ಪ್ರಯೋಗ ಮಾಡಿದ್ದೆ. ಅದರ ಜತೆಗೆ ಸದ್ಯ ಮೂವರ ಶವಗಳನ್ನು ಆಕ್ಸ್​ರ್ಡ್​ ಕಾಲೇಜಿನಲ್ಲಿ ಸಂರಸಿಡಲಾಗಿದೆ. ನೂರು ವರ್ಷವಾದರೂ ಶವಗಳು ಕೆಡುವುದಿಲ್ಲ. ಸತ್ತಾಗ ಹೇಗಿತ್ತೋ ಹಾಗೆಯೇ ಇರುತ್ತವೆ ಎಂದು ಡಾ. ದಿನೇಶ್​ ರಾವ್​ ವಿವರಿಸಿದರು.
18 ಬಗೆಯ ರಾಸಾಯನಿಕಗಳ ಬಳಕೆ: ಶವಗಳನ್ನು ಕೆಡದಂತೆ ಸಂರಸಲು 18 ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಶವದ ಮೇಲೆ ಈ ರಾಸಾಯನಿಕಗಳನ್ನು ಪ್ರಯೋಗಿಸಲಾಗುತ್ತದೆ. ಈ ವಿಧಾನವನ್ನು ಪೂರ್ಣಗೊಳಿಸಲು ಗರಿಷ್ಠ 1 ಗಂಟೆ 30 ನಿಮಿಷ ಬೇಕಾಗುತ್ತದೆ. ಸಾವು ಸಂಭವಿಸುತ್ತಲೇ ರಾಸಾಯನಿಕಗಳನ್ನು ಪ್ರಯೋಗಿಸಿದರೆ, ಉತ್ತಮ ಲಿತಾಂಶ ದೊರೆಯುತ್ತದೆ. ತಡವಾಗುವುದಾದರೆ, ಶವವನ್ನು ಕೋಲ್ಡ್​ ಸ್ಟೋರೇಜ್​ನಲ್ಲಿರಿಸಿ, ಬಳಿಕ ರಾಸಾಯನಿಕ ಗಳನ್ನು ಪ್ರಯೋಗಿಸಬಹುದಾಗಿದೆ. ಇದಕ್ಕೆ 60 ಸಾವಿರ ರೂ. ವೆಚ್ಚವಾಗುತ್ತದೆ ಎಂದು ಡಾ. ದಿನೇಶ್​ ರಾವ್​ ವಿವರಿಸಿದರು.
ಎಲ್ಲಿ ಬೇಕಾದರೂ ಇಡಬಹುದು:ನೂತನ ತಂತ್ರಜ್ಞಾನ ಬಳಸಿ ಸಂರಸಿದ ಶವವನ್ನು ಉದ್ಯಾನ, ವಾಸದ ಕೋಣೆಗಳು, ಟೆರೇಸ್​ನಂಥ ಸಾಮಾನ್ಯ ಪರಿಸರದಲ್ಲೂ ಇರಿಸಬಹದಾಗಿದೆ. ಕಾರಿನಲ್ಲಿ ಸುಲಭವಾಗಿ ಅದನ್ನು ಸಾಗಿಸಬಹುದಾಗಿದೆ. ಕಾಪಿಟ್ಟಿರುವ ಶವದಿಂದ ಯಾವುದೇ ರೀತಿಯ ಸೋಂಕು ಆಗಲಿ, ವಿಷಕಾರಿ ಅಂಶವಾಗಲಿ ಹೊಮ್ಮುವುದಿಲ್ಲ. ಈ ಅಂಶದಿಂದಲೇ ಈ ತಂತ್ರಜ್ಞಾನ ಹೆಚ್ಚಿನ ಪ್ರಾಮುಖ್ಯತೆ ಗಳಿಸಿಕೊಳ್ಳುತ್ತದೆ. ಶವಗಳು ಸಹಜವಾಗಿ ಕಾಣುವುದರಿಂದ, ಸತ್ತವರು ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂಬ ಭಾವನೆ ಮೂಡುವುದರಿಂದ, ಅಗಲಿಕೆಯ ನೋವು ಕಾಡುವುದಿಲ್ಲ ಎಂದು ಡಾ. ದಿನೇಶ್​ ರಾವ್​ ಹೇಳಿದರು.
ಕಾನೂನಿನ ಸಮಸ್ಯೆಯಿಲ್ಲ:ಆಪ್ತರ ಶವವನ್ನು ಸಂರಸಿಡಲು ಬಯಸಿದರೆ, ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಇದಕ್ಕೆ ಯಾವುದೇ ಕಾನೂನು ತೊಡಕಿಲ್ಲ. ಆದರೆ, ಸತ್ತವರು ಯಾವ ಕಾರಣದಿಂದ ಸತ್ತಿದ್ದಾರೆ ಎಂಬ ಪ್ರಮಾಣಪತ್ರವನ್ನು ಪೊಲೀಸ್​ ಇಲಾಖೆಯಿಂದ ಪಡೆಯಬೇಕು. ಕುಟುಂಬಸ್ಥರ ಸಮ್ಮತಿ ಇರಬೇಕು ಎಂದು ಡಾ. ದಿನೇಶ್​ ರಾವ್​ ಹೇಳಿದರು.
|  ಡಾ. ದಿನೇಶ್​ ರಾವ್​ಆಕ್ಸ್​ರ್ಡ್​ ವೈದ್ಯಕೀಯ ಕಾಲೇಜಿನ ವಿಜ್ಞಾನಿ
ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

‘ಗೃಹ ಸಚಿವರ ಊರಲ್ಲಿ 2 ದಿನ ದಿವ್ಯಾ ಕಾರು ಇತ್ತು! ಪಿಎಸ್​ಐ ಹುದ್ದೆ ಅಕ್ರಮದ ಆರೋಪಿ ಜತೆ ನೇರ ಸಂಪರ್ಕ ಹೊಂದಿದ್ದರು…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − thirteen =
Remember me
