ಹೈದರಾಬಾದ್​:ಸಿನಿಮಾಗಳ ಹೀರೋಗಳನ್ನೇ ಅನುಸರಿಸುವ ಯುವಜನತೆಗೇನೂ ನಮ್ಮಲ್ಲಿ ಕಡಿಮೆಯೇನಿಲ್ಲ. ಸಿನಿಮಾವೇ ಬೇರೆ ನಿಜ ಜೀವನವೇ ಬೇರೆ ಅಂದುಕೊಳ್ಳದೇ ಒಮ್ಮೊಮ್ಮೆ ಹುಚ್ಚು ಸಾಹಸಕ್ಕೆ ಕೈ ಹಾಕಿ, ಕಷ್ಟಕ್ಕೆ ಸಿಲುಕಿಕೊಂಡವರನ್ನು ನಾವು ಆಗಾಗ್ಗೆ ಕಾಣುತ್ತಿರುತ್ತೇವೆ.
ಇಲ್ಲೂ ಕೂಡ ಸಿನಿಮಾದಲ್ಲಿ ಹೀರೋ ಮಾಡಿದ್ದನ್ನೇ ಮಾಡಲು ಹೋಗಿ ಬಾಲಕ ಸೇರಿದ್ದು ಮಾತ್ರ ಆಸ್ಪತ್ರೆಗೆ. ಸಿನಿಮಾಗಳಲ್ಲಿ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ಶೀರ್ಷಿಕೆಯನ್ನು ನೀಡಿರುತ್ತಾರೆ. ಅದನ್ನು ಗಮನಿಸಿಯೂ ಜನರು ಎಚ್ಚೆತ್ತುಕೊಳ್ಳದಿರುವುದು ವಿಷಾದನೀಯ.ಅದೇನೆ ಆಗಿರಲಿ ಇಲ್ಲೊಬ್ಬ ಬಾಲಕ ಮಾತ್ರ ಕೆಜಿಎಫ್​​-2 ರಾಕಿಂಗ್​ ಸ್ಟಾರ್​ ಯಶ್​​ ಅವರನ್ನು ಅನುಕರಿಸಲು ಹೋಗಿ ಸಂಕಷ್ಟ ತಂದುಕೊಂಡಿದ್ದಾನೆ.
ಸದ್ಯ 15 ವರ್ಷದ ಈ ಬಾಲಕ ಹೈದರಾಬಾದ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಾನೆ. ಬ್ಲಾಕ್​ಬಸ್ಟರ್​ ಸಿನಿಮಾ ಕೆಜಿಎಫ್​​-2 ಚಿತ್ರದಲ್ಲಿ ರಾಕಿಭಾಯ್​ನ ಧೂಮಪಾನ ಶೈಲಿಗೆ ಮಾರುಹೋದ ಬಾಲಕ 2 ದಿನ ಸಿಗರೇಟ್​ ಸೇದಿದ್ದಾನೆ.
ವರ್ಷ-ಹಳೆಯ ಧೂಮಪಾನವು ಹೊಸದೇನಲ್ಲ ಆದರೆ ಈ ಸಂದರ್ಭದಲ್ಲಿ, ಇದು ವಿಶಿಷ್ಟವಾಗಿದೆ. ಇತ್ತೀಚಿನ ಬ್ಲಾಕ್‌ಬಸ್ಟರ್ ಚಲನಚಿತ್ರ ಕೆಜಿಎಫ್-2 ನಲ್ಲಿನ ‘ರಾಕಿ ಭಾಯ್’ ನ ಧೂಮಪಾನ ಶೈಲಿಯಿಂದ ಅಪ್ರಾಪ್ತ ಬಾಲಕ ಸ್ಫೂರ್ತಿ ಪಡೆದು, ಎರಡು ದಿನದಲ್ಲಿ ಪೂರ್ತಿ ಪ್ಯಾಕ್​ ಖಾಲಿ ಮಾಡಿದ್ದಾನೆ.
ಇವನು ಸಿಗರೇಟ್​ ಸೇದುತ್ತಿರುವುದು ಪೋಷಕರ ಅರಿವಿಗೂ ಬಂದಿರಲಿಲ್ಲ. ನಂತರ ತೀವ್ರ ಕೆಮ್ಮುತ್ತಿದ್ದು, ಬಿಟ್ಟೂ ಬಿಡದೇ ಕೆಮ್ಮುತ್ತಿದ್ದಲ್ಲದೇ, ನೋವು ತಾಳಲಾರದೇ ತೀವ್ರ ಎದೆಉರಿ ಎಂದು ಕಿರುಚಾಡಿಕೊಂಡಿದ್ದಾನೆ. ಈ ನಂತರ ಇವನನ್ನು ಆಸ್ಪತ್ರೆಗೆ ದಾಖಲಿಸಿದಾಗ ಸತ್ಯಾಂಶ ಗೊತ್ತಾಗಿದೆ.
ವೈದ್ಯರ ಕೊಠಡಿಯಲ್ಲಿ ಬಾಲಕನಿಗೆ ವಿಶೇಷ ಕೌನ್ಸಿಲಿಂಗ್​ ನಡೆಸಿದಾಗ ಬಾಲಕ ತಾನು ಕೆಜಿಎಫ್​​-2 ಸಿನಿಮಾದಿಂದ ಪ್ರೇರಣೆಗೊಂಡು ಸಿಗರೇಟ್​ ಸೇದಿದ್ದೀನಿ ಎಂದು ತಪ್ಪೊಪ್ಪಿಕೊಂಡಿದ್ದ. ಇವನ ಮಾತು ಕೇಳಿದ ಪೋಷಕರೇ ದಂಗಾಗಿದ್ದಾರೆ. ತನ್ನ ಮಗನನ್ನು ಕಾಪಾಡಿಕೊಡಿ ಎಂದು ವೈದ್ಯರಲ್ಲಿ ಮನವಿ ಮಾಡಿದ್ದಾರೆ.
ಎಕ್ಸ್​ ರೇ ತೆಗೆದು ನೋಡಿದಾಗ ವೈದ್ಯರೇ ಶಾಕ್​ ಆಗಿದ್ದಾರೆ. ಇವನ ಶ್ವಾಸಕೋಶ ಸಿಗರೇಟ್​​ ಹೊಗೆಯಿಂದಲೇ ತುಂಬಿಹೋಗಿದೆ. ಸದ್ಯ ಈತನಿಗೆ ಚಿಕತ್ಸೆ ನೀಡಲಾಗುತ್ತಿದೆ.(ಏಜೆನ್ಸೀಸ್​​)
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twelve − 3 =
Remember me
