ಕೊಚ್ಚಿ:ಕರೊನಾ ಲಾಕ್​ಡೌನ್​ನಿಂದ ಬೇರೆ ದೇಶಗಳಲ್ಲಿ ಸಿಲುಕಿ ಪರದಾಡುತ್ತಿದ್ದ ಅದೆಷ್ಟೋ ಭಾರತೀಯರನ್ನು ಏರ್​ ಇಂಡಿಯಾ ವಿಮಾಗಳ ಮೂಲಕ ವಾಪಸ್ ಕರೆತರಲಾಗಿದೆ.
ಇದೀಗ ಮತ್ತೊಂದು ಹಂತದಲ್ಲಿ ದ್ವೀಪ ರಾಷ್ಟ್ರ ಮಾಲ್ಡೀವ್ಸ್​ನಲ್ಲಿ ಸಿಲುಕಿದ್ದ 588 ಭಾರತೀಯರನ್ನು ಭಾರತೀಯ ನೌಕಾಪಡೆ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದಿದೆ.
ನೇವಿಯ ಐಎನ್​ಎಸ್​ ಜಲಾಶ್ವ ಹಡಗಿನಲ್ಲಿ ಮಾಲ್ಡೀವ್ಸ್​ನಿಂದ 588 ಜನರನ್ನು ಕರೆದುಕೊಂಡು ಬರಲಾಗಿದ್ದು, ಇಂದು ಕೊಚ್ಚಿಯನ್ನು ತಲುಪಿದ್ದಾರೆ. ಈ ಹಡಗು ಶನಿವಾರ ಮಾಲ್ಡೀವ್ಸ್ನ ಮೇಲ್​​ ಬಂದರಿನಿಂದ ಹೊರಟಿತ್ತು.ಮಾಲ್ಡೀವ್ಸ್​ನಿಂದ ಭಾರತಕ್ಕೆ ಬಂದ 588 ಮಂದಿಯಲ್ಲಿ 497 ಪುರುಷರು, 70 ಮಹಿಳೆಯರು, 21 ಮಕ್ಕಳು ಇದ್ದಾರೆ. 70 ಮಹಿಳೆಯರಲ್ಲಿ ಆರು ಗರ್ಭಿಣಿಯರು ಇದ್ದಾರೆ.
ಮಾಲ್ಡೀವ್ಸ್​ನಿಂದ ಹೊರಡುವಾಗ ಗಾಳಿ, ಮಳೆ ಇತ್ತು. ಈ ಮಧ್ಯೆ ಎಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ತಲುಪಿಸಿದ್ದಾಗಿ ಇಂಡಿಯನ್ ನೇವಿ ಟ್ವೀಟ್ ಮೂಲಕ ತಿಳಿಸಿದೆ.
ಇದನ್ನೂ ಓದಿ:“ಆತ್ಮ ನಿರ್ಭರ್ ಭಾರತ್” ಪ್ಯಾಕೇಜ್‍ನ 5ನೇ ದಿನದ ಘೋಷಣೆ ಕುರಿತು ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ಹೀಗಿದೆ…
ಹೀಗೆ ಬಂದವರಲ್ಲಿ 568 ಮಂದಿ ಕೇರಳದವರೇ ಇದ್ದಾರೆ. ಉಳಿದವರೆಲ್ಲ ತಮಿಳುನಾಡು, ತೆಲಂಗಾಣ, ಲಕ್ಷದ್ವೀಪದವರು. ಇದು ಜಲಾಶ್ವದ ಎರಡನೇ ಟ್ರಿಪ್​ ಆಗಿದೆ. ಮೊದಲ ಬಾರಿ ಮೇ 12ರಂದು 698 ಮಂದಿಯನ್ನು ಕರೆದುಕೊಂಡು ಬಂದಿತ್ತು.
ಬೇರೆ ದೇಶಗಳಲ್ಲಿ ಸಿಲುಕಿರು ಭಾರತೀಯರನ್ನು ಸಮುದ್ರ ಮಾರ್ಗದ ಮೂಲಕ ಕರೆತರುವ ಕಾರ್ಯಾಚರಣೆಗೆ ಸಮುದ್ರ ಸೇತು ಎಂದು ಹೆಸರಿಡಲಾಗಿದೆ.
ಸಮುದ್ರ ಸೇತು ಕಾರ್ಯಾಚರಣೆಯಡಿ ಇದುವರೆಗೆ ಮಾಲ್ಡೀವ್ಸ್​ನಿಂದ ಒಟ್ಟು 22 ರಾಜ್ಯಗಳ 1488 ಭಾರತೀಯರನ್ನು ಕರೆತರಲಾಗಿದೆ. ಅದರಲ್ಲಿ 205 ಮಹಿಳೆಯರು (133 ಗರ್ಭಿಣಿಯರು) 38 ಮಕ್ಕಳು ಎಂದು ನೇವಿ ತಿಳಿಸಿದೆ.ಭಾರತವನ್ನು ಸಮುದ್ರ ಮಾರ್ಗದ ಮೂಲಕ ತಲುಪಿದ ಎಲ್ಲರಿಗೂ ಸ್ಕ್ರೀನ್​ ಟೆಸ್ಟ್ ಮಾಡಲಾಗಿದೆ. ಕೊವಿಡ್​ ಲಕ್ಷಣಗಳು ಇದ್ದವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಾಗೇ ಉಳಿದವರೆನ್ನಲ್ಲ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಅವರವರ ಊರುಗಳಿಗೆ ತಲುಪಲು ಬಸ್​ ವ್ಯವಸ್ಥೆಯನ್ನೂ ಮಾಡಲಾಗಿದೆ. (ಏಜೆನ್ಸೀಸ್)
https://www.facebook.com/VVani4U/videos/932474347203585/?t=0
ಲಾಕ್​ಡೌನ್​ ಕಾಲ ಮುಗೀತು, ಕರೊನಾ ಕಟ್ಟಿ ಹಾಕುತ್ತಾ ಕಂಟೇನ್​ಮೆಂಟ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
