ವಿಶಾಖಪಟ್ಟಣ:ಸ್ವದೇಶಿ ನಿರ್ಮಿತ ಸುಸಜ್ಜಿತ ಜಲಾಂತರ್ಗಾಮಿ-ನಿರೋಧಕ ಸಮರಾಸ್ತ್ರ ಸಜ್ಜಿತ ಯುದ್ಧ ನೌಕೆ ‘ಐಎನ್​ಎಸ್ ಕವರತ್ತಿ’ ಗುರುವಾರ ಭಾರತೀಯ ನೌಕಾಪಡೆಗೆ ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ವಿದ್ಯುಕ್ತವಾಗಿ ಸೇರ್ಪಡೆಗೊಂಡಿತು. ಭೂ ಸೇನೆ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ ನರವಾಣೆ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಬ್​ವೆುರಿನ್-ವಿರೋಧಿ ಸಮರದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಕವರತ್ತಿಯನ್ನು ಭಾರತೀಯ ನೌಕಾಪಡೆಯ ಆಂತರಿಕ ಸಂಸ್ಥೆಯಾದ ನೌಕಾಪಡೆ ವಿನ್ಯಾಸ ನಿರ್ದೇಶನಾಲಯ (ಡಿಎನ್​ಡಿ) ವಿನ್ಯಾಸಗೊಳಿಸಿದೆ. ಕೋಲ್ಕತಾದ ಗಾರ್ಡನ್ ರೀಚ್ ಶಿಪ್​ಬಿಲ್ಡರ್ಸ್ ಆಂಡ್ ಇಂಜಿನಿಯರ್ಸ್ ಇದನ್ನು ನಿರ್ವಿುಸಿದೆ.
ಇದನ್ನೂ ಓದಿ:ಡಾರ್ನಿಯರ್​ ವಿಮಾನ ಚಲಾಯಿಸಲು ಸಿದ್ಧವಾಗಿದೆ ಮೊದಲನೇ ಮಹಿಳಾ ಪೈಲಟ್ ತಂಡ
ಕವರತ್ತಿಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ಸೆನ್ಸರ್ ವ್ಯವಸ್ಥೆ ಇದ್ದು ಜಲಾಂತರ್ಗಾಮಿಗಳನ್ನು ಪತ್ತೆ ಮಾಡಿ ಅವುಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಸ್ವಯಂ ರಕ್ಷಣಾ ಸಾಮರ್ಥ್ಯ ಹಾಗೂ ದೀರ್ಘ ಕಾಲದ ವರೆಗೆ ಕಾರ್ಯಾಚರಣೆಗಳಲ್ಲಿ ಭಾಗವಹಿಸುವ ಶಕ್ತಿ ಅದಕ್ಕಿದೆ. (ಏಜೆನ್ಸೀಸ್)
#WATCHAndhra Pradesh: Anti-Submarine Warfare Corvette “INS Kavaratti” commissioned into Indian Navy by Indian Army Chief General Manoj Mukund Naravane at Naval Dockyard, Visakhapatnam.pic.twitter.com/1B9jJdD0K4
— ANI (@ANI)October 22, 2020

ಅತ್ಯಾಧುನಿಕ ‘ನಾಗ್’ ಕ್ಷಿಪಣಿಯ ಅಂತಿಮ ಹಂತದ ಪರೀಕ್ಷೆ ಯಶಸ್ವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
