41 ವರ್ಷಗಳ ಹಿರಿಯ:ಭಾರತದ ನೌಕಾಪಡೆಯಲ್ಲಿ ರಜಪೂತ್ ವರ್ಗಕ್ಕೆ ತನ್ನದೇ ಆದ ಪ್ರಾಮುಖ್ಯ, ಗೌರವ ವಿದೆ. ಇದೇ ಸರಣಿಗೆ ಸೇರಿದ ಐಎನ್​ಎಸ್ ರಜಪೂತ್ ಕ್ಷಿಪಣಿ ಧ್ವಂಸಕ ಹಾಗೂ ಪ್ರಮುಖ ಹಡಗೆಂದೇ 4 ದಶಕಗಳಿಂದ ಖ್ಯಾತಿ ಪಡೆದಿತ್ತು. 1980ರ ಮೇ 4ರಂದು ಕಾರ್ಯಾರಂಭ ಮಾಡಿದ್ದ ರಜಪೂತ್​ನ ಮೊದಲ ಕಮಾಂಡಿಂಗ್ ಆಫೀಸರ್ ಗುಲಾಬ್ ಮೋಹನ್​ಲಾಲ್ ಹಿರಂದಾನಿ. ಐಎನ್​ಎಸ್ ರಜಪೂತ್ ಹಡಗನ್ನು ನಿಕೋಲೇವ್ ಶಿಪ್​ಯಾರ್ಡ್(ಇಂದಿನ ಉಕ್ರೇನ್)ನಲ್ಲಿ ನಿರ್ವಿುಸಲಾಗಿತ್ತು. ಇದರ ಮೂಲ ಹೆಸರು ನದೇಝುನಿ(ನಿರೀಕ್ಷೆ).
ಬ್ರಹ್ಮೋಸ್ ಕ್ಷಿಪಣಿಗೆ ಆಧಾರ:ಬ್ರಹ್ಮೋಸ್ ಕ್ಷಿಪಣಿ ಕೂಡ ಭಾರತೀಯ ನೌಕಾಪಡೆಯ ಪ್ರಬಲ ಅಸ್ತ್ರ. ಈ ಕ್ಷಿಪಣಿ ಪ್ರಯೋಗಕ್ಕೆ ಸದಾ ವೇದಿಕೆ ಆಗುತ್ತಿದ್ದ ಹಿರಿಮೆಯೂ ಐಎನ್​ಎಸ್ ರಜಪೂತ್​ಗಿತ್ತು. 2007ರ ಮಾರ್ಚ್​ನಲ್ಲಿ ಇದೇ ರಜಪೂತ್​ನಿಂದ ಪೃಥ್ವಿ-3 ಕ್ಷಿಪಣಿ ಉಡಾವಣೆ ಮಾಡಲಾಗಿತ್ತು. 2005ರಲ್ಲಿ ಧನುಷ್ ಕ್ಷಿಪಣಿಯನ್ನು ರಜಪೂತ್ ಹಡಗಿನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.
ಪ್ರಮುಖ ಆಪರೇಷನ್:ರಜಪೂತ್ ಹಡಗನ್ನು ನೌಕಾಪಡೆಯ ಹಲವು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಶ್ರೀಲಂಕಾದ ಆಪರೇಷನ್ ಅಮನ್, ಆಪರೇಷನ್ ಪವಾನ್, ಮಾಲ್ಡೀವ್ಸ್​ನಲ್ಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ನಡೆಸಲಾದ ಆಪರೇಷನ್ ಕಾಕ್ಟಸ್, ಲಕ್ಷದ್ವೀಪದಲ್ಲಿ ನಡೆದ ಆಪರೇಷನ್ ಕ್ರೌನ್ ನೆಸ್ಟ್​ನಲ್ಲಿ ರಜಪೂತ್ ಸೇವೆ, ಕಾರ್ಯವನ್ನು ಭಾರತ ಮರೆಯುವ ಹಾಗಿಲ್ಲ. 41 ವರ್ಷಗಳ ಸುದೀರ್ಘ ಸೇವೆಯಲ್ಲಿ ಈ ಹಡಗು 31 ಕಮಾಂಡಿಂಗ್ ಆಫೀಸರ್ಸ್​ಗಳನ್ನು ಕಂಡಿದೆ.
ಸೇನೆಯ ಅಂಗಸಂಸ್ಥೆ:ಐಎನ್​ಎಸ್ ರಜಪೂತ್ ಭಾರತೀಯ ಸೇನೆ ರೆಜಿಮೆಂಟ್​ನ ಮೊದಲ ಅಂಗಸಂಸ್ಥೆಯ ಸ್ಥಾನಪಡೆದ ದೇಶದ ಮೊದಲ ಹಡಗೆಂಬ ಹೆಗ್ಗಳಿಕೆ ಹೊಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
