ನವದೆಹಲಿ:ದೇಶೀಯ ತಂತ್ರಜ್ಞಾನದಲ್ಲಿ ನಿರ್ವಿುಸಲಾದ ಪ್ರಪ್ರಥಮ ವಿಮಾನ ವಾಹಕ ನೌಕೆ ಬುಧವಾರ ಕೊಚ್ಚಿ ಬಂದರಿನಲ್ಲಿ ಪರೀಕ್ಷಾರ್ಥ ಯಾನ ಆರಂಭಿಸಿದೆ. ಈ ನೌಕೆ ನಿರ್ಮಾಣದೊಂದಿಗೆ, ಸಮರ ವಿಮಾನ ವಾಹಕ ನೌಕೆ ನಿರ್ವಿುಸುವ ಸಾಮರ್ಥ್ಯವಿರುವ ಕೆಲವೇ ದೇಶಗಳ ಸಾಲಿಗೆ ಸೇರಿದ ಸಾಧನೆಯನ್ನು ಭಾರತ ಮಾಡಿದೆ. ನೌಕಾ ಪಡೆಗೆ ಸೇರ್ಪಡೆ ಆಗುವವರೆಗೆ ಇದನ್ನು ಐಎಸಿ-1 ಎಂದು ಕರೆಯಲಾಗುತ್ತದೆ. ನಂತರ ಇದರ ಹೆಸರು ‘ಐಎನ್​ಎಸ್ ವಿಕ್ರಾಂತ್’ ಆಗಲಿದೆ. ಈ ನೌಕೆ 2022ರ ಆಗಸ್ಟ್​ನಲ್ಲಿ ನೇವಿಗೆ ಸೇರ್ಪಡೆಯಾಗುವ ನಿರೀಕ್ಷೆಯಿದ್ದು ಭಾರತದ ಎರಡನೇ ಯುದ್ಧ ವಿಮಾನ ವಾಹಕ ನೌಕೆಯಾಗಲಿದೆ. ಪ್ರಸ್ತುತ ರಷ್ಯಾ ಮೂಲದ ‘ಐಎನ್​ಎಸ್ ವಿಕ್ರಮಾದಿತ್ಯ’ ಭಾರತದ ಇಂಥ ಏಕೈಕ ನೌಕೆಯಾಗಿದೆ.
ಮುಖ್ಯಾಂಶ
ಮರುಅವತಾರ
1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಐಎನ್​ಎಸ್ ವಿಕ್ರಾಂತ್ ವಹಿಸಿದ್ದ ಮಹತ್ವದ ಪಾತ್ರದ ಸುವರ್ಣ ಮಹೋತ್ಸವ ವರ್ಷದಲ್ಲೇ ಅದರ ಮರುಅವತಾರದ ಈ ನೌಕೆ ತನ್ನ ಚೊಚ್ಚಲ ಸಾಗರ ಪರೀಕ್ಷಾ ಪಯಣ ಆರಂಭಿಸಿದೆ. ಇದೊಂದು ಹೆಮ್ಮೆ ಹಾಗೂ ಐತಿಹಾಸಿಕ ಕ್ಷಣ. ಇದರ ಮೂಲಕ ನೌಕಾ ಪಡೆಯ ಸಾಮರ್ಥ್ಯ ಹೆಚ್ಚಳ ಮಾತ್ರವಲ್ಲದೆ ಐತಿಹಾಸಿಕ ಐಎನ್​ಎಸ್ ವಿಕ್ರಾಂತ್​ನ ಗತ ವೈಭವವನ್ನು ಚಿರಸ್ಥಾಯಿ ಯಾಗುವಂತೆ ಮಾಡಲಾಗುತ್ತದೆ ಎಂದು ನೌಕಾ ಪಡೆ ತಿಳಿಸಿದೆ. ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮಗಳ ಯೋಜನೆಯಲ್ಲಿ ಈ ನೌಕೆ ನಿರ್ಮಾಣ ಆಗಿದೆ. ನೌಕೆಯ ನಿರ್ಮಾಣ ಪ್ರಗತಿ ಪರಿಶೀಲನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವರ್ಷ ಜೂನ್​ನಲ್ಲಿ ಭೇಟಿ ನೀಡಿದ್ದರು.
ಸಾಮರ್ಥ್ಯ
ಮಿಗ್-19 ಫೈಟರ್ ವಿಮಾನ, ಕಾಮೊವ್-31 ಏರ್ ಅರ್ಲಿ ವಾರ್ನಿಂಗ್ ಹೆಲಿಕಾಪ್ಟರ್​ಗಳು, ಎಂಎಚ್-60 ಬಹುಪಾತ್ರದ ಹೆಲಿಕಾಪ್ಟರ್, ದೇಶೀಯ ನಿರ್ವಿುತ ಅಡ್ವಾನ್ಸ್​ಡ್ ಲೈಟ್ ಹೆಲಿಕಾಪ್ಟರ್​ಗಳನ್ನು ಈ ನೌಕೆ ನಿರ್ವಹಿಸಲಿದೆ.
ದಕ್ಷಿಣ ಚೀನಾ ಸಮುದ್ರಕ್ಕೆ ಭಾರತದ ಸಮರ ನೌಕೆ
ಚೀನಾದ ಆಟಾಟೋಪವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ದಕ್ಷಿಣ ಚೀನಾ ಸಮುದ್ರಕ್ಕೆ ಈ ತಿಂಗಳು ನೌಕಾ ಸೇನೆಯ ಕಾರ್ಯ ಪಡೆಯೊಂದನ್ನು ಕಳಿಸಲು ಭಾರತ ನಿರ್ಧರಿಸಿದೆ. ಮಿತ್ರ ದೇಶಗಳೊಂದಿಗೆ ಭದ್ರತಾ ಬಾಂಧವ್ಯವನ್ನು ವಿಸ್ತರಿಸಲು ಸಮರ ನೌಕೆ ಕಳಿಸಲಾಗುತ್ತಿದೆಯಾದರೂ ಈ ವಲಯದಲ್ಲಿ ಚೀನಾಕ್ಕೆ ಪ್ರತಿಯಾಗಿ ಮಹತ್ವದ ಪಾತ್ರ ನಿರ್ವಹಿಸುವುದು ಭಾರತದ ಯೋಜನೆಯಾಗಿದೆ.
ವಾಸ್ತವವಾಗಿ ಚೀನಾದೊಂದಿಗೆ ವೈರತ್ವ ಕಟ್ಟಿಕೊಳ್ಳಲು ಭಾರತಕ್ಕೆ ಮನಸ್ಸಿಲ್ಲ. ಆದರೆ, ಕಳೆದ ವರ್ಷ ಪೂರ್ವ ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಯೋಧರ ನಡುವೆ ಕಾಳಗ ನಡೆದಾಗಿನಿಂದ ಭಾರತದ ನಿಲುವು ಬದಲಾಗಿದೆ. ಅಂದಿನಿಂದ ಚೀನಾಕ್ಕೆ ಸೆಡ್ಡು ಹೊಡೆಯುವ ಪ್ರಯತ್ನವಾಗಿ ಭಾರತ ಅಮೆರಿಕಕ್ಕೆ ನಿಕಟವಾಗಿದೆ.
ನಾಲ್ಕು ನೌಕೆಗಳು: ಆಗ್ನೇಯ ಏಷ್ಯಾ, ದಕ್ಷಿಣ ಚೀನಾ ಸಮುದ್ರ ಮತ್ತು ಪಶ್ಚಿಮ ಶಾಂತಸಾಗರಕ್ಕೆ ಎರಡು ತಿಂಗಳ ಅವಧಿಗೆ ನಾಲ್ಕು ಯುದ್ಧ ನೌಕೆಗಳನ್ನು ಕಳಿಸಲಾಗುತ್ತದೆ. ಆ ಪೈಕಿ ತಲಾ ಒಂದು ನಿರ್ದೇಶಿತ ಕ್ಷಿಪಣಿ ನಾಶಕ ಹಾಗೂ ಮಿಸೈಲ್ ಫ್ರಿಗೇಟ್ ಇರುತ್ತದೆ ಎಂದು ನೌಕಾ ಪಡೆ ಹೇಳಿಕೆ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
