ಕೋಲ್ಕತ:ಗಂಡನ ಜತೆ ಹೋಟೆಲ್​ ರೂಂ ಒಳಗೆ ಬಂದವಳು ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ನಡೆದಿದೆ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಸಲು ಪೊಲೀಸರ ತಂಡ ಸಿದ್ಧವಾಗಿದೆ.
ಇದನ್ನೂ ಓದಿ:ಹೇರ್​​ಕಟ್​ ಎಫೆಕ್ಟ್​! ಸತ್ತೇ ಹೋಗಿದ್ದಾನೆ ಎಂದುಕೊಂಡಿದ್ದ ಮಗ ಬದುಕಿ ಬಂದ!
ಅಮಿತ್​ ಘೋಷ್​ ಮತ್ತು ಚುಮ್ಕಿ ಘೋಷ್​ ಹೆಸರಿನ ದಂಪತಿ ಮಂಗಳವಾರ ಮಧ್ಯಾಹ್ನ ನಗರದ ಹೋಟೆಲ್​ಗೆ ಬಂದಿದ್ದಾರೆ. ಸಂಜೆ 7ರವರೆಗೆ ಇರುತ್ತೇವೆ ಎಂದು ಹೇಳಿ ಹೋಟೆಲ್​ ರೂಂನ್ನು ಬುಕ್​ ಮಾಡಿದ್ದಾರೆ. ಪಶ್ಚಿಮ ಮಿಡ್ನಾಪೋರ್ ನಿವಾಸಿಗಳು ಎನ್ನುವ ದಾಖಲೆ ಇದ್ದ ಐಡಿ ಪ್ರೂಫ್​ನ್ನು ಕೊಟ್ಟಿದ್ದಾರೆ. ಹೆಂಡತಿಯನ್ನು ರೂಂ ಒಳಗೆ ಬಿಟ್ಟು ಸ್ವಲ್ಪ ಸಮಯದ ನಂತರ ಹೊರ ಬಂದ ಅಮಿತ್​, ಕೆಲ ಸಮಯದಲ್ಲೇ ವಾಪಾಸು ಬರುವುದಾಗಿ ರಿಸಪ್ಷನಿಷ್ಟ್​ಗೆ ಹೇಳಿ, ಅಲ್ಲಿಂದ ಹೊರಟು ಹೋಗಿದ್ದಾನೆ.
ಸಂಜೆ ಏಳು ಗಂಟೆಗೆ ಚೆಕ್​ ಔಟ್​ ಆಗಬೇಕಿದ್ದ ದಂಪತಿ ಎಷ್ಟು ಹೊತ್ತಾದರೂ ರೂಂನಿಂದ ಹೊರ ಬಂದಿಲ್ಲ. ಚುಮ್ಕಿ ಒಬ್ಬಳೇ ರೂಂನಲ್ಲಿದ್ದು, 8 ಗಂಟೆಯಾದರೂ ಚೆಕ್​ ಔಟ್​ ಮಾಡಿರಲಿಲ್ಲ. ಡೆಡ್​ ಲೈನ್​ ಮೀರಿದ ಹಿನ್ನೆಲೆಯಲ್ಲಿ ಹೋಟೆಲ್​ನ ಸಿಬ್ಬಂದಿ ರೂಂನ ಬಾಗಿಲು ತಟ್ಟಿದ್ದಾರೆ. ಒಳಗಡೆ ಟಿವಿ ಆನ್​ನಲ್ಲಿದ್ದು, ದೊಡ್ಡದಾಗಿ ಸೌಂಡ್​ ಕೊಡಲಾಗಿತ್ತು. ಎಷ್ಟು ಹೊತ್ತು ಬಾಗಿಲು ತಟ್ಟಿದರೂ ಬಾಗಿಲು ತೆರೆಯದಿದ್ದರಿಂದಾಗಿ, ಸಿಬ್ಬಂದಿ ಡೂಪ್ಲಿಕೇಟ್​ ಕೀ ಬಳಸಿ ಬಾಗಿಲು ತೆರೆದಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನಕ್ಕೆ ಪಾಕಿ ಎಂದ ಅರ್ನಬ್: ಜನಾಂಗೀಯ ನಿಂದನೆ ಎಂದು ಬ್ರಿಟನ್​ನಿಂದ 20 ಲಕ್ಷ ದಂಡ!
ರೂಂನ ಒಳಗಡೆ ಚುಮ್ಕಿ ಅವರ ಮೃತದೇಹ ಪತ್ತೆಯಾಗಿದೆ. ದೇಹದ ಹಲವು ಭಾಗಗಳಲ್ಲಿ ಚಾಕುವಿನಿಂದ ಕೊಯ್ಯಲಾಗಿದ್ದು, ಬೆಡ್​ಶೀಟ್​ನಿಂದ ಮೃತ ದೇಹವನ್ನು ಸುತ್ತಿಡಲಾಗಿದೆ. ಇದನ್ನು ಕಂಡ ಸಿಬ್ಬಂದಿ ಗಾಬರಿಯಾಗಿದ್ದು, ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದೀಗ ಅಮಿತ್​ ಯಾರು, ಆತನಿಗೂ ಚುಮ್ಕಿಗೂ ನಿಜವಾಗಿಯೂ ಮದುವೆಯಾಗಿದೆಯೇ? ಅವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿತ್ತು ಎನ್ನುವುದರ ಕುರಿತಾಗಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. (ಏಜೆನ್ಸೀಸ್​)
2ನೇ ಪತ್ನಿ ಜತೆ ಪ್ರಸ್ತಕ್ಕೆ ಮುಂದಾಗಿದ್ದವನಿಗೆ ಮೊದಲನೇ ಹೆಂಡತಿ ಕೊಟ್ಟಳು ಬಿಗ್​ ಶಾಕ್​..!

ಈಗಷ್ಟೇ ಮದುವೆಯಾಗಿರುವ ಗಾಯಕಿಗೆ ಯೌವನದ ಮಗ! ಅಭಿಮಾನಿಗಳಿಗೆ ಶಾಕ್​ ನೀಡಿದ ನೇಹಾ ಕಕ್ಕರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − six =
Remember me
