ಜೀವನವು ಎಲ್ಲರಿಗೂ ಎರಡನೇ ಅವಕಾಶವನ್ನು ನೀಡುತ್ತದೆ. ಇಚ್ಛಾಶಕ್ತಿ ಮತ್ತು ದೃಢನಿಶ್ಚಯ ಇದ್ದರೆ, ಯಶಸ್ಸು ಖಂಡಿತ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ.ಬಾಲ್ಯದಲ್ಲಿ ಡ್ರಗ್ಸ್ ವ್ಯಾಪಾರಿಯಾಗಿದ್ದು, 16 ವರ್ಷಗಳ ಕಾಲ ಜೈಲಿವಾಸ ಅನುಭವಿಸಿದ್ದವ ಪ್ರಸ್ತುತ ಯುಕೆ ವಿಶ್ವವಿದ್ಯಾಲಯವೊಂದರಲ್ಲಿ, ಅದೂ ಅಪರಾಧಶಾಸ್ತ್ರದ ಪ್ರಾಧ್ಯಾಪಕರಾಗುವ ಮೂಲಕ ತಮ್ಮ ಜೀವನಕ್ಕೊಂದು ಮಹತ್ವದ ತಿರುವುದ ತಂದುತೊಂಡಿದ್ದಾರೆ ಎಂದರೆ ನೀವು ನಂಬಲೇಬೇಕು.ಸ್ಟೀಫನ್ ಅಕ್ಪಾಬಿಯೊ-ಕ್ಲೆಮೆಂಟೋವ್​​ಸ್ಕಿ, ತಂದೆಯ ಮರಣದ ನಂತರ ದುಷ್ಟರ ಸಹವಾಸದಲ್ಲಿದ್ದ. ಮಾದಕವಸ್ತು ವ್ಯಾಪಾರದಿಂದಾಗಿ 16 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ.
ಇದನ್ನೂ ಓದಿ:ಎಟಿಎಂನಲ್ಲಿ ಹಣ ತೆಗೆಯುವಿರಾ? ಮೊದಲು ‘ದಂಡ’ದ ಹೊಸ ನಿಯಮ ತಿಳಿದುಕೊಳ್ಳಿ…
ಆತನ ಜೈಲು ಶಿಕ್ಷೆ ‘ಆರಂಭವಾದಾಗ ಮೊದಲ ಮೂರು ತಿಂಗಳು ಯಾರೊಂದಿಗೂ ಮಾತನಾಡಲಿಲ್ಲ ಮತ್ತು ಅಡಿಗೆಮನೆಯಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದ. ಕೆಲವು ತಿಂಗಳುಗಳ ನಂತರ, ಆತ ತನ್ನ ಶೈಕ್ಷಣಿಕ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡು ಗಮನ ಕೇಂದ್ರೀಕರಿಸಿದ. ಮುಕ್ತ ವಿಶ್ವವಿದ್ಯಾಲಯಕ್ಕೆ ಸೇರಲಿಚ್ಛಿಸಿದ.ವೈಫಲ್ಯದ ಭೀತಿಯ ಹೊರತಾಗಿಯೂ, ಸ್ಟೀಫನ್ ಸಲಹೆಯ ಮಾತುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಯುಕೆ ಮುಕ್ತ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡ. ಹೀಗೆ ದಿನದ ವೇಳೆ ಅಡುಗೆಮನೆಯಲ್ಲಿ ಕೆಲಸ ಮಾಡುವುದು ಮತ್ತು ರಾತ್ರಿ ವೇಳೆ ಅಧ್ಯಯನ ಮಾಡುವುದು.ಇದು ದೈನಂದಿನ ಪರಿಪಾಠವಾಯಿತು.ಅವನ ಗಮನ ಮತ್ತು ದೃಢನಿಶ್ಚಯ ಸ್ಪಷ್ಟವಾಗಿತ್ತು. ಆದ್ದರಿಂದ ಅವನ ಸಹ ಖೈದಿಗಳು ರಾತ್ರಿ ಜೋರಾಗಿ ಗೊರಕೆ ಹೊಡೆಯುತ್ತಿದ್ದಾಗ ಅವನು ಶೌಚಾಲಯದಲ್ಲಿ ಕುಳಿದು ಓದುತ್ತಿದ್ದ.
ಇದನ್ನೂ ಓದಿ:ಇನ್ನು ರಾಷ್ಟ್ರ ರಾಜಧಾನಿ ಮಹಿಳೆಯರಿಗೆ ಸುರಕ್ಷಿತವೆ? ಅಧ್ಯಯನ ಏನು ಹೇಳುತ್ತದೆ?
ಆದಾಗ್ಯೂ, ಓದಿನ ಸಂದರ್ಭದಲ್ಲಿ ಜೈಲಿನಲ್ಲಿ ಸಾಕಷ್ಟು ನಕಾರಾತ್ಮಕ ಸಲಹೆ, ಅಭಿಪ್ರಾಯಗಳು ಕೇಳಿಬಂದವು, ಆತನ ಅಪರಾಧ ಹಿನ್ನೆಲೆ ಪದವಿ ಹಾಗೂ ಶಿಕ್ಷಣದಲ್ಲಿ ಯಶಸ್ಸು ಗಳಿಸುವಲ್ಲಿ ಕಂಟಕವಾಗುತ್ತದೆ ಎಂದೇ ಹಲವು ಖೈದಿಗಳು ಮತ್ತು ಕಾವಲುಗಾರರು ಹೇಳಿದ ಸಂದರ್ಭಗಳಿವೆ. ಆದರೆ ಸ್ಟೀಫನ್ ಅವಕ್ಕೆಲ್ಲ ಕಿವಿಗೊಡದೆ ಓದಿನತ್ತ ಗಮನ ಕೇಂದ್ರೀಕರಿಸಿದ.ಹದಿನಾರು ವರ್ಷಗಳ ನಂತರ, ಆತ ಮರುಜನ್ಮ ಪಡೆದು ಹೊಸ ಮನುಷ್ಯನಾದ.ಆತನ ಶೈಕ್ಷಣಿಕ ಸಾಮರ್ಥ್ಯ ಮತ್ತು ಉತ್ತಮ ನಡವಳಿಕೆ ಆತ ಅಸಾಧಾರಣ ವ್ಯಕ್ತಿ ಎನಿಸಿಕೊಳ್ಳಲು ಬಲ ನೀಡಿದವು. ಎಂಟು ವರ್ಷಗಳ ನಂತರ ಸ್ಟೀಫನ್ ಜೈಲಿನಿಂದ ಹೊರಬಂದ. ಆ ಹೊತ್ತಿಗೆ ಆತ ಮೂರು ಪದವಿಗಳನ್ನು ಪೂರ್ಣಗೊಳಿಸಿದ್ದ, ಅದರಲ್ಲಿ ಎರಡು ಸ್ನಾತಕೋತ್ತರ ಪದವಿ ಎನ್ನುವುದೇ ವಿಶೇಷ.ಬಿಡುಗಡೆಯ ನಂತರ, ಸ್ಟೀಫನ್, ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿ ಜೈಲುಗಳಲ್ಲಿರುವ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಅಲ್ಲಿಂದ ಬದುಕನ್ನು ಹಿಂತಿರುಗಿ ನೋಡಲಿಲ್ಲ.ಈಗ ಸ್ಟೀಫನ್, ಸಂಪೂರ್ಣ ಕುಟುಂಬವನ್ನು ಹೊಂದಿರುವ ಮತ್ತು ಉತ್ತಮ ಜೀವನವನ್ನು ನಡೆಸುತ್ತಿರುವ ಉಪನ್ಯಾಸಕ, ಅವರ ಕಥೆ ಇತರ ಕೈದಿಗಳಿಗೆ ಶಿಕ್ಷಣವನ್ನು ತೆಗೆದುಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಆಶಿಸುತ್ತಾರೆ.\
ಎಂಟು ವರ್ಷಗಳ ಹಿಂದಿನ ಕರೊನಾ: ಚೀನಾದ ಕುತಂತ್ರ ಬಿಚ್ಚಿಟ್ಟ ಅಮೆರಿಕದ ಸಂಶೋಧಕರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 11 =
Remember me
