ಸೂರತ್:ಕ್ರೈಂ ಥ್ರಿಲರ್​ ವೆಬ್​ ಸರಣಿಗಳಿಂದ ಪ್ರಭಾವಿತನಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಐಪಿಎಸ್​ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ ಯುವಕನನ್ನು ಸೂರತ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ಮೊಹಮ್ಮದ್​ ಬಿಹಾರ ಮೂಲದ ಸರ್ಮಾಜ್​ ಆಲಂ (26) ಎಂದು ಗುರುತಿಸಲಾಗಿದೆ. ಈತ ಸೂರತ್​ನ ಪ್ರತಿಷ್ಠಿತ ಬಟ್ಟೆ ಅಂಗಡಿ ಒಂದರಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸೂರತ್​ ಡಿಸಿಪಿ ಭಗೀರಥ ಗಾಧವಿ, ಬಂಧಿತ ಆರೋಪಿ ಜನರನ್ನು ಮೆಚ್ಚಿಸಲು ಸಾರ್ವಜನಿಕ ಪ್ರದೇಶಗಳಲ್ಲಿ ಪೊಲೀಸ್​ ಸಮವಸ್ತ್ರ ಧರಿಸಿ ತಾನೊಬ್ಬ ಐಪಿಎಸ್​ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ. ಇದಲ್ಲದೆ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಈತ ಫೋಟೋವನ್ನು ಸಹ ತೆಗೆಸಿಕೊಳ್ಳುತ್ತಿದ್ದ.
ಇದನ್ನೂ ಓದಿ:VIDEO| ನಾನ್ಯಾಕೆ ವಿರಾಟ್​ಗೆ ಅಭಿನಂದಿಸಬೇಕು ಎಂದ ಶ್ರೀಲಂಕಾ ಕ್ಯಾಪ್ಟನ್; ಕ್ರೀಡಾಭಿಮಾನಿಗಳಿಂದ ಫುಲ್​ ಟ್ರೋಲ್
ನಗರದ ಉದ್ನಾ ಪ್ರದೇಶದ ರಸ್ತೆ ಒಂದರಲ್ಲಿ ಪೊಲೀಸ್​ ಸಮವಸ್ತ್ರ ಧರಿಸಿ ವ್ಯಕ್ತಿಯೊಬ್ಬ ಗಾಡಿಗಳನ್ನು ಪರಿಶೀಲಿಸುತ್ತಿದ್ದಾನೆ ಎಂದು ನಮಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ತೆರಳಿ ಕೂಡಲೇ ಆತನನ್ನು ವಶಕ್ಕೆ ಪಡೆಯಲಾಯಿತು. ಆತನ ಬಳಿ ಇದ್ದ ಐಪಿಎಸ್​ ಬ್ಯಾಡ್ಜ್​, ಡಮ್ಮಿ ವಾಕಿ ಟಾಕಿ, ಪಿಸ್ತೂಲ್​ ಹಾಗೂ ಸಮವಸ್ತ್ರವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಯು ತಾನು ಸಿನಿಮಾ ಹಾಗೂ ಕ್ರೈಂ ಆಧಾರಿತ ವೆಬ್​ ಸರಣಿಗಳನ್ನು ನೋಡಿ ಪ್ರಭಾವಿತನಾಗಿ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ, ಆಯ ಯಾರ ಬಳಿಯೂ ಹಣ ಪಡೆದಿಲ್ಲ ಎಂಬುದು ಕಂಡು ಬಂದಿದ್ದು, ಆತನ ವಿರುದ್ಧ ಭಾರತ ದಂಡ ಸಂಹಿತೆ (IPC Section) ಸೆಕ್ಷನ್ 170 ಮತ್ತು 171 ರ ಅಡಿಯಲ್ಲಿ FIR ದಾಖಲಿಸಲಾಗಿದೆ ಎಂದು ಸೂರತ್ ಡಿಸಿಪಿ ಭಗೀರಥ ಗಾಧವಿ ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 16 =
Remember me
