ಕಾನ್ಪುರ:ಮೂರನೇ ತರಗತಿ ವಿದ್ಯಾರ್ಥಿಯೋರ್ವ ಸಿನಿಮಾದಿಂದ ಉತ್ತೇಜನಗೊಂಡು ಶಾಲೆಯ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಕಾನ್ಪುರದ ವೀರೇನ್​ ಸ್ವರೂಪ್​ ಶಾಲೆಯಲ್ಲಿ ಘಟನೆ ನಡೆದಿದ್ದು, ಬಾಲಕನ ದುಸಾಹಸದ ದೃಶ್ಯ ಎಲ್ಲೆಡೆ ವೈರಲ್​ ಆಗಿದೆ. ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಪ್ರಾಂಶುಪಾಲರಾದ ನಂದಿತ ಮಾಲಿ ಗಾಯಗೊಂಡಿರುವ ಬಾಲಕ ಉದ್ಯಮಿಯೊಬ್ಬರ ಪುತ್ರನಾಗಿದ್ದು, ಕಳೆದ ವಾರ ಆತ ಬಾಲಿವುಡ್​ನ ಹಿಟ್​ ಸಿನಿಮಾ ಕ್ರಿಶ್​ನನ್ನು ನೋಡಿ ಚಿತ್ರದಲ್ಲಿ ಮಾಡಲಾದ ಸಾಹಸ ದೃಶ್ಯಗಳಿಂದ ಉತ್ತೇಜನಗೊಂಡಿದ್ದಾಗಿ ಆತನ ತಾಯಿ ಬಳಿ ಹೇಳಿಕೊಂಡಿದ್ದಾನೆ.
#WATCHShocking! A school boy in#UttarPradeshperforms 'Krrish' stunts. 8 year old, Class 3 student executes daring stunt. He got inspired from movie 'Krrish' & jumped from the first floor railing during school hours. The incident took place in Uttar Pradesh's#Kanpur.pic.twitter.com/2DNBcr7sG8
ಇದನ್ನೂ ಓದಿ:ಸಾರಿಗೆ ಸಿಬ್ಬಂದಿ ಸಮಯಪ್ರಜ್ಞೆಯಿಂದ ಪಾರಾದ ರೋಗಿ; ವ್ಯಾಪಕ ಮೆಚ್ಚುಗೆ
ಬಳಿಕ ಶಾಲೆಯಲ್ಲಿ ತನ್ನ ಸ್ನೇಹಿತರ ಬಳಿ ಈ ವಿಚಾರವನ್ನು ಹಂಚಿಕೊಂಡಿದ್ದು, ನೀರು ಕುಡಿಯುವ ನೆಪದಲ್ಲಿ ಸಹಪಾಠಿಗಳ ಜೊತೆ ತರಗತಿಯಿಂದ ಹೊರ ಬಂದಿದ್ದಾನೆ. ಬಳಿಕ ತನ್ನ ಜೊತೆ ಧುಮ್ಮುಕುವಂತೆ ತನ್ನ ಸ್ನೇಹಿತರಿಗೆ ಹೇಳಿದ್ದಾನೆ. ಬಾಲಕನ ಮಾತನ್ನು ಲೆಕ್ಕಿಸದೆ ಆತನ ಸ್ನೇಹಿತರು ತಮ್ಮ ಪಾಡಿಗೆ ತಾವು ಹೊರಟು ಹೋಗಿದ್ದಾರೆ.
ಈ ವೇಳೆ ಬಾಲಕ ಮೊದಲನೇ ಮಹಡಿಯಿಂದ ಧುಮುಕ್ಕಿದ್ದು ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಆತನ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ನಂದಿತ ಮಾಲಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 18 =
Remember me
