ಮೀರತ್: ವೆಬ್ ಸರಣಿ ‘ಅಸುರ್’ನಿಂದ ಸ್ಫೂರ್ತಿ ಪಡೆದ ಇಬ್ಬರು ಯುವಕರು, ಮನೆಗೆ ನುಗ್ಗಿದ ಹಿರಿಯ ಉದ್ಯಮಿ ಮತ್ತು ಆತನ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಸೊಳ್ಳೆ ಕಡಿತದಿಂದಾಗುವ ಊತ, ತುರಿಕೆಯನ್ನು ಕಡಿಮೆ ಮಾಡಲು ಇಲ್ಲಿದೆ ತ್ವರಿತ ಮನೆಮದ್ದು..
ಬ್ರಹ್ಮಪುರಿ ಪ್ರದೇಶದ ನಿವಾಸಿ ಧನ್ ಕುಮಾರ್ ಜೈನ್ (70), ಅಂಜು ಜೈನ್ (65) ಮೃತ ದಂಪತಿಗಳಾಗಿದ್ದು, ಆರೋಪಿಗಳನ್ನು ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿ ಪ್ರಿಯಾಂಕ್ ಶರ್ಮಾ ಅಲಿಯಾಸ್ ಪರುಷ್ (25) ಮತ್ತು ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುವ 8ನೇ ತರಗತಿ ಪಾಸಾಗಿರುವ ಆತನ ಸ್ನೇಹಿತ ಯಶ್ ಶರ್ಮಾ ಅಲಿಯಾಸ್ ಯಶು (24) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಹಲವಾರು ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಸುಮಾರಿಗೆ ಉದ್ಯಮಿಯ ಮನೆಗೆ ನುಗ್ಗಿ ಲೂಟಿ ಮಾಡಲು ಪ್ರಾರಂಭಿಸಿದ್ದು, ಕೂಡಲೇ ದರೋಡೆಕೋರರನ್ನು ಗಮನಿಸಿದ ಜೈನ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆರೋಪಿಗಳು ಆತನಿಗೆ ಗುಂಡು ಹಾರಿಸಿದ್ದು, ತನ್ನ ಪತಿಗೆ ಗುಂಡು ಹಾರಿಸುತ್ತಿರುವುದನ್ನು ನೋಡಿದ ಆತನ ಪತ್ನಿ ಮಧ್ಯಪ್ರವೇಶಿಸಿ ದಾಳಿಕೋರರಲ್ಲಿ ಒಬ್ಬನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ:ಹೆಲ್ಮೆಟ್​ ಧರಿಸಿ ಹಗಲು ಹೊತ್ತಿನಲ್ಲಿ ಬ್ಯಾಂಕ್ ಲೂಟಿ ಮಾಡಿದ ಶಸ್ತ್ರಸಜ್ಜಿತ ದರೋಡೆಕೋರರು..!ಈ ವೇಳೆ ಆರೋಪಿಗಳು ಆಕೆಗೂ ಸಹ ಗುಂಡು ಹಾರಿಸಿ ಸುಮಾರು ಒಂದು ಗಂಟೆಗಳ ಕಾಲ ದರೋಡೆ ನಡೆದಿದ್ದು, ಉದ್ಯಮಿಯ ಮನೆಯಿಂದ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ಘಟನೆ ವೇಳೆ ದಂಪತಿಗಳು ಮೃತಪಟ್ಟಿದ್ದು, ಪ್ರಕರಣವನ್ನು ಭೇದಿಸಲು ಪೊಲೀಸರು ಎಂಟು ತಂಡಗಳನ್ನು ರಚಿಸಿ ಇಬ್ಬರನ್ನು ಬಂಧಿಸಿದ್ದರು.ಇನ್ನು, ವಿಚಾರಣೆಯ ಸಮಯದಲ್ಲಿ, ಆರೋಪಿಗಳು ‘ಅಸುರ್’ ವೆಬ್ ಸರಣಿಯಿಂದ ಪ್ರೇರಿತನಾಗಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಯೂಟ್ಯೂಬ್‌ನಲ್ಲಿ ನೋಡಿದ್ದೇವೆ. ಅಲ್ಲದೇ, ತಮ್ಮ ಗುರುತನ್ನು ಮರೆಮಾಡಲು ಕೈಗವಸುಗಳು, ಮುಖವಾಡಗಳು ಮತ್ತು ಹೆಲ್ಮೆಟ್‌ಗಳನ್ನು ಬಳಸುವುದರೆ ಜತೆಗೆ ಕೃತ್ಯ ಎಸಗಿದ ನಂತರ ಬೈಕ್‌ನ ನಂಬರ್ ಪ್ಲೇಟ್​​ ಕೂಡ ಬದಲಾಯಿಸಿದ್ದರ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವ ಮಾರ್ಗಗಳನ್ನು ಗುರುತಿಸಿ, ತಪ್ಪಿಸಿಕೊಳ್ಳಲು ದಾರಿಯನ್ನು ಸಹ ನಿಗದಿಪಡಿಸಿದ್ದರು. ಘಟನೆಗೆ ಒಂದು ದಿನ ಮೊದಲು ಆರೋಪಿಗಳು ಬಾಡಿಗೆ ಮನೆ ಹುಡುಕುವ ನೆಪದಲ್ಲಿ ಉದ್ಯಮಿಯ ಮನೆಗೆ ಹೋಗಿದ್ದರು. ಆರೋಪಿಗಳಿಂದ ಪಿಸ್ತೂಲ್, ಮೋಟಾರು ಸೈಕಲ್, ಬಟ್ಟೆ, ಹೆಲ್ಮೆಟ್ ಮತ್ತು ಅಪರಾಧದ ಸಮಯದಲ್ಲಿ ಧರಿಸಿದ್ದ ಶೂಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಉದ್ಯಮಿಯ ಮನೆಯಿಂದ ಲೂಟಿ ಮಾಡಿದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
