ಭುವನೇಶ್ವರ:ಯಾವುದೇ ವಾಹನ ರಿಪೇರಿ ಮಾಡುವ ಗ್ಯಾರೇಜ್ ನೋಡಿದರೂ ಕಾಣಸಿಗುವವರು ಪುರುಷರು. ಅಪಾರ ಸಂಖ್ಯೆಯಲ್ಲಿ ಜನರು ಮೆಕ್ಯಾನಿಕ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೆಕ್ಯಾನಿಕ್​ ವೃತ್ತಿಗೆ ಬರಲು ಮಹಿಳೆಯರು ಹಿಂದೇಟು ಹಾಕುತ್ತಾರೆ. ಆದರೆ ಒಡಿಸ್ಸಾದ ಯುವತಿಯೊಬ್ಬಳು ಮೆಕ್ಯಾನಿಕ್ ವೃತ್ತಿ ಮಾಡುತ್ತಾ ಉತ್ತಮ ಆದಾಯ ಗಳಿಸುತ್ತಿದ್ದಾಳೆ.
ಬುಲೆಟ್​ ಬೈಕ್​ಗಳನ್ನು ರಿಪೇರಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ತಿಳುವಳಿಕೆ ಇದ್ದಾಗ ಮಾತ್ರ ವಾಹನ ಮಾಲೀಕರನ್ನು ತೃಪ್ತಿ ಪಡಿಸಬಹುದು. ಆದರೆ ಈ ಯುವತಿ ಸಲೀಸಲಾಗಿ ಬುಲೆಟ್​ ಬೈಕ್​ನ್ನು ರಿಪೇರಿ ಮಾಡುತ್ತಿದ್ದಾಳೆ.
ಕ್ರೋಧಾ ಜಿಲ್ಲೆಯ ಗೋವಿಂದಾಪುರ ಗ್ರಾಮದ ಯುವತಿ ಚಂಪಾಬತಿ ಮಹಾರಾಣ ಬೈಕ್ ಮೆಕ್ಯಾನಿಕ್ ಗುರುತಿಸಿಕೊಂಡಿದ್ದಾಳೆ. ಮನೆಯಲ್ಲಿ ತೀರಾ ಬಡತನ. ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ. ಅಂತಿಮ ವರ್ಷದದ ಪದವಿಯಲ್ಲಿದ್ದಾಗ ಅರ್ಧದಿಂದಲೇ ವ್ಯಾಸಾಂಗ ನಿಲ್ಲಿಸುತ್ತಾಳೆ. ಮುಂದೇನು ಮಾಡುವುದು ಎಂದು ಆಲೋಚಿಸಿದಾಗ ಹೊಳೆದದ್ದು, ಮೆಕ್ಯಾನಿಕ್ ವೃತ್ತಿ.
ಚಂಪಾಬತಿಗೆ ಮೊದಲಿನಿಂದಲೂ ಮೆಕ್ಯಾನಿಕ್ ಕ್ಷೇತ್ರದತ್ತ ಅತೀವವಾದ ಆಸಕ್ತಿ. ಹೀಗಾಗಿ ಮೆಕ್ಯಾನಿಕ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸಬಹುದು ಎಂಬುವುದನ್ನು ಅರಿತುಕೊಂಡು, ನೇರವಾಗಿ ಬುಲೆಟ್ ಬೈಕ್​ ಶೋರೂಂಗೆ ತೆರಳುತ್ತಾಳೆ. ಅಲ್ಲಿ ತನ್ನ ಇಂಗಿತವನ್ನು ಹೇಳಿಕೊಂಡು ನಿಷ್ಠೆಯಿಂದ ವೆಕ್ಯಾನಿಕ್ ವೃತ್ತಿಯನ್ನು ಕಲಿತುಕೊಳ್ಳುತ್ತಾಳೆ.
ಕಡಿಮೆ ಸಮಯದಲ್ಲಿ ಬುಲೆಟ್​ ಬೈಕ್​ ರಿಪೇರಿ ಮಾಡುವುದನ್ನು ಕಲಿತುಕೊಂಡ ಚಂಪಾಬತಿ, ಇದೀಗ ಭುವನೇಶ್ವರದಲ್ಲಿ ಜನಪ್ರಿಯ ಮೆಕ್ಯಾನಿಕ್. ಅನೇಕ ಮಂದಿ ತಮ್ಮ ಬೈಕ್​ ರಿಪೇರಿ ಇದ್ದಾಗ ಮೊದಲು ಸಂಪರ್ಕಿಸುವುದು ಚಂಪಾಬತಿ ಅವರನ್ನು. ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ತನ್ನಿಷ್ಟದ ಕ್ಷೇತ್ರವಾದ ಮೆಕ್ಯಾನಿಕ್ ವೃತ್ತಿಯನ್ನು ಮಾಡುತ್ತಾ ಆದಾಯದ ಮೂಲ ಕಂಡುಕೊಂಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
