ಲಖನೌ:ಇದು ಸಾಮಾಜಿಕ ಜಾಲತಾಣಗಳ ಯುಗ. ಒಂದು ಹೊತ್ತು ಊಟವಿಲ್ಲದಿದ್ದರೂ ಪರವಾಗಿಲ್ಲ ಆದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ಸುತ್ತು ಹಾಕಿ ಬರಲೇಬೇಕು. ಕೈಯಲ್ಲಿ ಮೊಬೈಲ್ ಇದ್ದಾಗ ವಾಸ್ತವ ಜಗತ್ತನ್ನೇ ಮರೆತು, ಭ್ರಮಾ ಲೋಕದಲ್ಲಿ ಮುಳುಗಿರುತ್ತಾರೆ. ಎಲ್ಲ ಯುವಕರು ಮೊಬೈಲ್​ ಮೋಡಿಯಲ್ಲಿ ಬಿದ್ದಿದ್ದಾರೆ. ಒಮ್ಮೆ ಫೋನಿನಲ್ಲಿ ಮಗ್ನರಾದರೆ ಸಾಕು ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದೇ ತಿಳಿಯುವುದಿಲ್ಲ.
ಇದಿಷ್ಟು ಒಂದು ಭಾಗವಾದರೆ, ಮತ್ತೊಂದೆಡೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ರೀಲ್ಟ್​, ಶಾರ್ಟ್ಸ್​ ಎಂಬ ವಿಡಿಯೋಗಳನ್ನು ಮಾಡುತ್ತಾರೆ. ರೀಲ್ಸ್​ ಉನ್ಮಾದದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಲು ಅಪಾಯವನ್ನು ತಮ್ಮ ಬಳಿಗೆ ಎಳೆದುಕೊಳ್ಳುತ್ತಿದ್ದಾರೆ. ರೈಲು ಹಳಿಗಳಲ್ಲಿ, ರಸ್ತೆಯಲ್ಲಿ ಹೀಗೆ ಅಪಾಯದ ಅಂಚಿನಲ್ಲಿ ನಿಂತು ವಿಡಿಯೋ ಮಾಡುತ್ತಿದ್ದಾರೆ. ಇತ್ತೀಚೆಗೆ ಯುವತಿಯೊಬ್ಬಳು ರೀಲ್ಸ್​ ಹುಚ್ಚಿಗೆ ಬಲಿಯಾಗಿದ್ದಾಳೆ.
ರೀಲ್ಸ್​ ಮಾಡಲು ಸಹೋದರಿಯರು ಮತ್ತು ಸ್ನೇಹಿತರ ಜೊತೆ ಹೋದ ಯುವತಿಯೊಬ್ಬಳು ಆಕಸ್ಮಿಕವಾಗಿ ಕಾಲುವೆಗೆ ಜಾರಿ ಬಿದ್ದು ನೀರುಪಾಲಾಗಿದ್ದಾಳೆ. ಉತ್ತರ ಪ್ರದೇಶದ ಲಖನೌದಲ್ಲಿ ಈ ಘಟನೆ ನಡೆದಿದೆ. ವಿಕಾಸ್ ನಗರದ ಶಕೀಲ್ ಪುತ್ರಿಯರಾದ ಮನಿಶಾ ಖಾನ್ ಮತ್ತು ನಿಶಾ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ ಮಾಡುತ್ತಾ ಮೋಜು ಮಸ್ತಿ ಮಾಡುತ್ತಿರುತ್ತಾರೆ. ಮನೀಶಾ ರೀಲ್‌ ಮಾಡುವಾಗ ಸಹೋದರಿ ನಿಶಾ ವಿಡಿಯೋ ಸೆರೆಹಿಡಿಯುತ್ತಾರೆ. ಹೊಸ ಹೊಸ ಸಿನಿಮಾಗಳ ಹಾಡುಗಳಿಗೆ ತಮ್ಮ ಸೊಂಟವನ್ನು ಬಳುಕಿಸಿ, ಆ ವಿಡಿಯೋಗಳನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮನಿಶಾ ಪೋಸ್ಟ್ ಮಾಡುತ್ತಿದ್ದಳು.
ಕಳೆದ ಭಾನುವಾರ ಸಂಜೆ ತನ್ನ ಸ್ನೇಹಿತರು ಹಾಗೂ ಸಹೋದರಿ ನಿಶಾ ಜತೆ ಮುನ್ಷಿ ಪುಲ್ಲಿಯಾದಿಂದ ಆಟೋದಲ್ಲಿ ತನ್ನ ಮನೆಯ ಸಮೀಪವಿರುವ ಇಂದಿರಾ ಕಾಲುವೆಗೆ ಮನಿಶಾ ತೆರಳಿದ್ದಳು. ಈ ವೇಳೆ ರೀಲ್ಸ್​ ಮಾಡುವಾಗ ಮನಿಶಾ ಇದ್ದಕ್ಕಿದ್ದಂತೆ ಕಾಲುವೆಗೆ ಬಿದ್ದಳು. ಆಕೆಯ ವಿಡಿಯೋ ತೆಗೆಯುತ್ತಿದ್ದ ಸ್ನೇಹಿತರು ಹಾಗೂ ನಿಶಾ ಆಕೆಯನ್ನು ರಕ್ಷಿಸುವಂತೆ ಕೂಗಿಕೊಂಡಿದ್ದಾರೆ. ಅವರ ಕೂಗಾಟ ಕೇಳಿ ಸ್ಥಳೀಯರು ಏನಾಯಿತು ಎಂದು ತಿಳಿಯಲು ಸ್ಥಳಕ್ಕೆ ಧಾವಿಸಿದರು. ಆದರೆ, ಅಷ್ಟರಲ್ಲಾಗಲೇ ಮನಿಶಾ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಳು.
ಈ ಸಂಬಂಧ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತಕ್ಷಣ ನುರಿತ ಈಜುಗಾರರನ್ನು ಸ್ಥಳಕ್ಕೆ ಕಳುಹಿಸಿದರೂ ಆಕೆ ಪತ್ತೆಯಾಗಿಲ್ಲ. ಸಾವಿಗೀಡಾದ್ದಾಳೆ ಎನ್ನಲಾಗಿದೆ. ಸೋಮವಾರವೂ ಆಕೆಗಾಗಿ ಇಡೀ ನಾಲೆಯನ್ನು ಶೋಧಿಸಲಾಗಿದೆ. ಆದರೂ ಆಕೆ ಕಾಣಿಸಿಲ್ಲ. ಇದೇ ವೇಳೆ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮನಿಶಾ ರೀಲ್ಸ್​ ತಯಾರಿಸುತ್ತಿದ್ದರೆ ನಿಶಾ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಕಾಲುವೆಗೆ ಬಿದ್ದ ದೃಶ್ಯಗಳು ನಿಶಾ ಮೊಬೈಲ್​ನಲ್ಲಿ ಸೆರೆಯಾಗಿವೆ. ಆಕೆ ಎಲ್ಲಿದ್ದಾಳೆ ಎಂಬುದು ತಿಳಿಯದ ಕಾರಣ, ಮೃತಪಟ್ಟಿದ್ದಾಳೆಂದು ಶಂಕಿಸಲಾಗಿದೆ. ಎಸ್‌ಡಿಆರ್‌ಎಫ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.(ಏಜೆನ್ಸೀಸ್)
ಮದುವೆಯಾಗದೇ ಮಗು ಮಾಡಿಕೊಳ್ಳಲು ಖ್ಯಾತ ನಟಿ ಮೆಹ್ರೀನ್ ಫಿರ್ಜಾದಾ ಏನ್​ ಮಾಡಿದ್ರು ನೋಡಿ!

ಪ್ರಜ್ವಲ್​​ ರೇವಣ್ಣ ಪೆನ್‌ಡ್ರೈವ್ ಕೇಸ್​ಗೆ ಬಿಗ್ ಟ್ವಿಸ್ಟ್: ಮಾಜಿ ಕಾರು ಚಾಲಕನಿಂದ ಸ್ಫೋಟಕ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
