ಜೈಪುರ:ಸಾಮಾಜಿಕ ಜಾಲತಾಣ ಅನೇಕ ಮಂದಿಗೆ ಆದಾಯದ ಮೂಲವಾಗಿದೆ. ಅದರಲ್ಲೂ ಕೆಲವು ಮಂದಿ ಪ್ರಖ್ಯಾತಿ ಪಡೆಯುವ ಮೂಲಕ ಸೆಲೆಬ್ರಿಟಿಗಳಾಗಿಬಿಡುತ್ತಾರೆ. ಒಳ್ಳೆಯ ಹೆಸರು ಮತ್ತು ಖ್ಯಾತಿಯೊಂದಿಗೆ ಹಣವನ್ನೂ ಸಂಪಾದಿಸುತ್ತಾರೆ. ಇನ್ನು ಕೆಲವರು ಹಣಕ್ಕಾಗಿಯೇ ಅಶ್ಲೀಲತೆ ಪ್ರದರ್ಶನಕ್ಕೂ ಇಳಿಯುತ್ತಾರೆ. ಇಂಥವರು ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದೂ ಉಂಟು. ಯೂಟ್ಯೂಬ್​, ಇನ್​ಸ್ಟಾಗ್ರಾಂ, ಫೇಸ್​ಬುಕ್​, ಸ್ನ್ಯಾಪ್​ಚಾಟ್​ ಸೇರಿದಂತೆ ಮುಂತಾದ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ರೀಲ್ಸ್​ ಮಾಡುವ ಮೂಲಕ ಸಾಕಷ್ಟು ಮಂದಿ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಾರೆ. ಆದರೆ, ರೀಲ್ಸ್​ ಮಾಡುವುದು ಕುಟುಂಬದ ಕೆಲ ಸದ್ಯರಿಗೆ ಇಷ್ಟವಾಗುವುದಿಲ್ಲ. ಅಷ್ಟೇ ಯಾಕೆ ಪತ್ನಿ ರೀಲ್ಸ್​ ಮಾಡುತ್ತಿದ್ದರೆ, ಕೆಲ ಗಂಡಂದರಿಗೂ ಇಷ್ಟವಾಗುವುದಿಲ್ಲ. ಇದೇ ವಿಚಾರ ಕೌಟುಂಬಿಕ ಕಲಹಕ್ಕೂ ಕಾರಣವಾಗುತ್ತದೆ. ಕೆಲವೊಮ್ಮೆ ಕೊಲೆಯಂತಹ ಭೀಕರ ಘಟನೆ ನಡೆದಿದ್ದುಂಟು, ಇದೀಗ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.
ಸೌಂದರ್ಯವತಿಯಾಗಿದ್ದ ಪತ್ನಿ, ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​ ಮಾಡಿಕೊಂಡೇ ಕೈತುಂಬಾ ಹಣ ಸಂಪಾದನೆ ಮಾಡುವುದು ಗಂಡನಿಗೆ ಕೊಂಚವೂ ಇಷ್ಟವಾಗಲಿಲ್ಲ. ಪತ್ನಿಯ ರೀಲ್ಸ್​ ಗೀಳಿನಿಂದ ಬೇಸತ್ತ ಗಂಡ, ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಫಲೋಡಿ ಜಿಲ್ಲೆಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೃತಳನ್ನು ಅನಾಮಿಕಾ ಬಿಷ್ಣೋಯಿ ಎಂದು ಗುರುತಿಸಲಾಗಿದೆ. ಆಕೆಯ ಗಂಡ ಮಹಿರಾಮ್​ ಬಿಷ್ಣೋಯಿನನ್ನು ಬಂಧಿಸಲಾಗಿದೆ.
#सोशलमीडिया#इंफ्ल्यूंसरका#मर्डर#सीसीटीवीमें क़ैद
राजस्थान के फलोदी में नारी कलेक्शन सेंटर चलाने वाली अनामिका बिश्नोई की गोली मारकर हत्या कर दी गई. सूचना पर पहुंची पुलिस ने जब सीसीवीटी फुटेज खंगाले तो होश उड़ा देने वाला सच सामने आया. पता चला कि इस वारदात को महिला के पति…pic.twitter.com/pMWRS8SouM
— Gyanendra Shukla (@gyanu999)February 26, 2024

ಯಾರು ಈ ಅನಾಮಿಕಾ ಬಿಷ್ಣೋಯಿ?ಅನಾಮಿಕಾ ಬಿಷ್ಣೋಯಿ (33) ಓರ್ವ ಇನ್​ಸ್ಟಾಗ್ರಾಂ ಇನ್ಫ್ಲುಯೆನ್ಸರ್​. ತನ್ನ ಇನ್​ಸ್ಟಾಗ್ರಾಂನಲ್ಲಿ 1 ಲಕ್ಷ ಫಾಲೋವರ್ಸ್​ ಹೊಂದಿದ್ದರು. ಆಕೆಯ ರೀಲ್ಸ್​ನಿಂದಲೇ ಅಷ್ಟೊಂದು ಫಾಲೋವರ್ಸ್​ ಸಂಪಾದಿಸಿದ್ದಳು. ಡಾನ್ಸ್​ ವಿಡಿಯೋ ಮಾತ್ರವಲ್ಲದೆ, ಟ್ರಾವೆಲ್​ ಹಾಗೂ ತನ್ನ ದಿನನಿತ್ಯದ ಜೀವನದ ಬಗ್ಗೆ ವಿಡಿಯೋ ಮಾಡಿ ಇನ್​ಸ್ಟಾಗ್ರಾಂನಲ್ಲಿ ಹರಿಬಿಡುತ್ತಿದ್ದಳು. ಅನಾಮಿಕಾಗೆ ಓರ್ವ ಮಗ ಸಹ ಇದ್ದಾನೆ. ಸಾಂದರ್ಭಿಕವಾಗಿ ಮಗನನ್ನೂ ಕೂಡ ವಿಡಿಯೋದಲ್ಲಿ ಅನಾಮಿಕಾ ಪ್ರದರ್ಶಿಸುತ್ತಿದ್ದಳು. ಈಕೆ ನಾರಿ ಕಲೆಕ್ಷನ್​ ಸೆಂಟರ್​ ನಡೆಸುತ್ತಿದ್ದಳು. ಈ ಶಾಪ್ ಫಲೋಡಿಯ​ ನಾಗ್ಪುರ ರಸ್ತೆಯ ಬಳಿ ಇತ್ತು. ಗಂಡನಿಂದ ಬೇರೆಯಾಗಿ ಕಳೆದ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ತಿಳಿದುಬಂದಿದೆ. ಪತ್ನಿಯ ರೀಲ್ಸ್​ ಹುಚ್ಚಿನಿಂದ ಗಂಡ ಬೇಸತ್ತಿದ್ದ ಮತ್ತು ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

A post shared by ꧁☆☞𝕭𝖎𝖘͢͢͢𝖍𝖓𝖔𝖎☜☆꧂. (@anni_vishnoi29)

ಸೋಮವಾರ ಎಂದಿನಂತೆ ಅನಾಮಿಕಾ, ತನ್ನ ಶಾಪ್​ಗೆ ಹೋಗಿದ್ದಾಳೆ. ಗಂಡನು ಸಹ ಅಲ್ಲಿಗೆ ಬಂದಿದ್ದಾನೆ. ಅನಾಮಿಕಾ, ಕ್ಯಾಶ್​ ಕೌಂಟರ್​ನಲ್ಲಿ ಕುಳಿತ್ತಿದ್ದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಪತ್ನಿ ಮಾತನಾಡುತ್ತಿರುವಾಗಲೇ ರಿವಾಲ್ವರ್​ ಹೊರತೆಗೆದು ಪತ್ನಿಯ ತಲೆಗೆ ಶೂಟ್​ ಮಾಡಿ, ಮಹಿರಾಮ್​ ಅಲ್ಲಿಂದ ಪರಾರಿಯಾಗಿದ್ದಾನೆ. ಕುರ್ಚಿಯಲ್ಲಿ ಕುಳಿತಿದ್ದ ಅನಾಮಿಕಾ ಕೆಳಗೆ ಕುಸಿದುಬೀಳಲು, ಅಲ್ಲಿಯೇ ಇದ್ದ ಇತರರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು.

A post shared by ꧁☆☞𝕭𝖎𝖘͢͢͢𝖍𝖓𝖔𝖎☜☆꧂. (@anni_vishnoi29)

ಪ್ರರಕಣ ದಾಖಲಿಸಿಕೊಂಡ ಫಲೋಡಿ ಠಾಣಾ ಪೊಲೀಸರು ಆರೋಪಿ ಮಹಿರಾಮ್​ ಬಿಷ್ಣೋಯಿಯನ್ನು ಬಂಧಿಸಿದ್ದಾರೆ. ಮತ್ತಷ್ಟು ತನಿಖೆ ಮುಂದುವರಿದಿದೆ. ವಿರೋಧದ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುತ್ತಿದ್ದ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.(ಏಜೆನ್ಸೀಸ್​)
ಪ್ಲೀಸ್​ ನಾನದನ್ನು ನೋಡಲೇಬೇಕು…ಪರಿ ಪರಿಯಾಗಿ ಬೇಡಿಕೊಂಡ ಅಭಿಮಾನಿ, ಆಸೆ ಈಡೇರಿಸಿದ ಪ್ರಿಯಾಂಕಾ!

ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:19 − two =
Remember me
