ನವದೆಹಲಿ: ಫೋಟೋ ಶೇರಿಂಗ್​ ಆ್ಯಪ್ ಇನ್​ಸ್ಟಾಗ್ರಾಮ್​ನಲ್ಲಿ ಶುಕ್ರವಾರ ಸಮಸ್ಯೆ ಕಂಡುಬಂದಿತ್ತು. ಆದರೆ ಅದರ ಬಗ್ಗೆ ಬಳಕೆದಾರರು ಟ್ವಿಟರ್​ನಲ್ಲಿ ಸಮಸ್ಯೆ ಹೇಳಿಕೊಂಡಿದ್ದು ಹಲವರಿಗೆ ಅಚ್ಚರಿ ಮೂಡಿಸಿತ್ತು.
ವಾಟ್ಸ್​ಆ್ಯಪ್​, ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಮ್​.. ಈ ಮೂರೂ ಒಂದೇ ಒಡೆತನಕ್ಕೆ ಸೇರಿದಂಥವು. ಈ ಪೈಕಿ ಇನ್​ಸ್ಟಾಗ್ರಾಮ್​ಗೆ ಸಂಬಂಧಿಸಿದಂತೆ ಶುಕ್ರವಾರ ಭಾರತ, ಯುಎಸ್​, ಯುಕೆನಲ್ಲಿ ಸಮಸ್ಯೆ ಕಂಡುಬಂದಿತ್ತು. ಕೆಲವರಿಗೆ ನ್ಯೂಸ್​ಫೀಡ್​​ನಲ್ಲಿ ಅಪ್​ಲೋಡ್​ ಮಾಡಲು ಸಾಧ್ಯವಾಗಿಲ್ಲ, ಇನ್ನು ಕೆಲವರಿಗೆ ಲಾಗ್​ಇನ್​ ಆಗಲಿಕ್ಕೇ ಆಗಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ಡೌನ್​ಡಿಟೆಕ್ಟರ್​ನ ವರದಿ ಪ್ರಕಾರ ಇನ್​ಸ್ಟಾಗ್ರಾಮ್​ ಸಂಬಂಧಿತ ಸಮಸ್ಯೆ ಬಗ್ಗೆ ಜಗತ್ತಿನಾದ್ಯಂತ 5 ಸಾವಿರಕ್ಕೂ ಅಧಿಕ ಮಂದಿ ರಿಪೋರ್ಟ್​ ಮಾಡಿದ್ದಾರೆ. ಆ ಪೈಕಿ ಕೇವಲ 224 ಯೂಸರ್ ಮಾತ್ರ ಫೇಸ್​ಬುಕ್​ನಲ್ಲಿ ರಿಪೋರ್ಟ್​ ಮಾಡಿದ್ದಾರೆ. ಉಳಿದವರೆಲ್ಲ ಟ್ವಿಟರ್​ನಲ್ಲಿ ದೂರುಗಳನ್ನು ಹೇಳಿಕೊಂಡಿದ್ದಾರೆ.
“ಇನ್​ಸ್ಟಾಗ್ರಾಮ್​ ಡೌನ್​ ಆಗಿದೆಯಾ ಅಥವಾ ಇಂಟರೆನೆಟ್​ ಕೆಲಸ ಮಾಡುತ್ತಿಲ್ವಾ? ಎಂದು ಪರೀಕ್ಷಿಸಲು ಹಲವರು ಟ್ವಿಟರ್​ಗೆ ಧಾವಿಸುತ್ತಿದ್ದಾರೆ..”“ಇನ್​ಸ್ಟಾಗ್ರಾಮ್​ ಹಾಗೂ ಫೇಸ್​ಬುಕ್​ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ಕಂಡುಹಿಡಿಯಲು ಟ್ವಿಟರನ್ನು ಕಂಡುಹಿಡಿದಿದ್ದಾ?”ಇನ್​ಸ್ಟಾಗ್ರಾಮ್​ ಸಮಸ್ಯೆ ಕುರಿತ ಹಲವಾರು ಟ್ವೀಟ್​ಗಳನ್ನು ಗಮನಿಸಿದ ಟ್ವೀಟಿಗರನೇಕರು, ಆ ಬಗ್ಗೆ ಈ ಮೇಲಿನಂತೆ ಟ್ವೀಟ್​ ಮಾಡುವ ಮೂಲಕ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 3 =
Remember me
