ನವದೆಹಲಿ:ಇತ್ತೀಚೆಗೆ ಪ್ರಸಿದ್ಧ ಆನ್​ಲೈನ್​ ಶಾಪಿಂಗ್​ ಸಂಸ್ಥೆಯೊಂದರಲ್ಲಿ ಒಳಉಡುಪಿನ ಮೇಲೆ ಕನ್ನಡದ ಬಾವುಟ ಪ್ರಿಂಟ್​ ಮಾಡಿ ಅವಮಾನಗೊಳಿಸಲಾಗಿತ್ತು. ಈ ವಿಚಾರ ತಣ್ಣಗಾಗುತ್ತಿದ್ದಂತೆಯೇ ಇದೀಗ ಮತ್ತೊಂದು ಇಂತದ್ದೇ ಘಟನೆ ಬೆಳಕಿಗೆ ಬಂದಿದೆ. ಸೋಶಿಯಲ್​ ಮೀಡಿಯಾಗಳಲ್ಲಿ ಹೆಚ್ಚು ಫೇಮಸ್​ ಆಗಿರುವ ಇನ್​ಸ್ಟಾಗ್ರಾಂನಲ್ಲಿ ಹಿಂದೂಗಳ ದೇವ ಶಿವನನ್ನು ವೈನ್​ ಗ್ಲಾಸ್​ನೊಂದಿಗೆ ಚಿತ್ರಿಸಲಾಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಪದ್ಮಾಸನ ಹಾಕಿ ಕುಳಿತಿರುವ ಶಿವ ಒಂದು ಕೈನಲ್ಲಿ ಮೊಬೈಲ್​ ಹಿಡಿದುಕೊಂಡಿದ್ದಾನೆ. ಇನ್ನೊಂದು ಕೈನಲ್ಲಿ ವೈನ್​ ಗ್ಲಾಸ್​ ಹಿಡಿದಿದ್ದಾನೆ. ಹೆಡ್​ ಫೋನ್​ ಹಾಕಿಕೊಂಡು ಕಣ್ಣನ್ನೂ ಹೊಡೆಯುತ್ತಿದ್ದಾನೆ. ಇಂತದ್ದೊಂದು ಸ್ಟಿಕ್ಕರ್​ನ್ನು ಇನ್​ಸ್ಟಾಗ್ರಾಂನಲ್ಲಿ ಬಿಡಲಾಗಿದೆ. ಇದನ್ನು ಕಂಡಿರುವ ನೆಟ್ಟಿಗರು ಗರಂ ಆಗಿದ್ದಾರೆ. ಯಾವುದೇ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ನೀವು ಮಾಡಬಾರದು ಎಂದು ಇನ್​ಸ್ಟಾಗ್ರಾಂ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Lord#Shivashown in Insuling manner on@instagram
This is not user Generated but Instagram Approved Content
We request@rsprasadji to take cognisance of such issues rampant abuse of Hindu sentiments on SocialMedia Platforms#AntiHinduInstagrampic.twitter.com/FUz6eQxOcr
— Devang Dave (@DevangVDave)June 8, 2021

ವೈನ್​ ಗ್ಲಾಸ್​ ಶಿವನನ್ನು ಚಿತ್ರಿಸಿರುವ ಇನ್​ಸ್ಟಾಗ್ರಾಂ ವಿರುದ್ಧ ರಾಷ್ಟ್ರ ರಾಜಧಾನಿ ನವದೆಹಲಿಯ ನಿವಾಸಿ, ಬಿಜೆಪಿ ನಾಯಕ ಮನೀಶ್​ ಸಿಂಗ್​ ದೂರು ದಾಖಲಿಸಿದ್ದಾರೆ. “ಆರೋಪಿ ಸ್ಥಾನದಲ್ಲಿರುವವರು ಉದ್ದೇಶಪೂರ್ವಕವಾಗಿ ಶಿವನನ್ನು ಅಂತಹ ಸ್ಥಿತಿಯಲ್ಲಿ ಚಿತ್ರಿಸುವ ಮೂಲಕ ದೂರುದಾರ ಸೇರಿದಂತೆ ಲಕ್ಷಾಂತರ ಹಿಂದೂಗಳ ಭಾವನೆಗಳನ್ನು ನೋಯಿಸುತ್ತಿದ್ದಾನೆ” ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ರೀತಿಯ ದೂರು ಕೇಳಿಬಂದ ಕೆಲವೇ ಕ್ಷಣಗಳಲ್ಲಿ ಆ ಸ್ಟಿಕ್ಕರ್​ ಮಾಯವಾಗಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)
ಸ್ನೇಹಿತರಿಂದ ಹೆಂಡತಿಯನ್ನೇ ರೇಪ್​ ಮಾಡಿಸಿದ ಗಂಡ! ಸಾಲದ ಬದಲು ಸೆಕ್ಸ್​ ಎಂದ ಪಾಪಿ

16 ವರ್ಷದ ಬಾಲಕಿಗೆ ಕಾಮೋತ್ತೇಜಕ ನೀಡಿ 8 ವರ್ಷಗಳ ಕಾಲ ರೇಪ್​ ಮಾಡಿದ ಕಾಮುಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
